Advertisement

ಭಯೋತ್ಪಾದನೆ ಕುರಿತ ಕೃತಿ ಬಿಡುಗಡೆ

06:37 AM Mar 17, 2019 | |

ಬೆಂಗಳೂರು: ಮನುಕುಲಕ್ಕೆ ಮಾರಕವಾಗಿರುವ ಭಯೋತ್ಪಾದನೆ ಕುರಿತಂತೆ ಹಿರಿಯ ಲೇಖಕ ಮತ್ತು ಕೇಂದ್ರ ಗುಪ್ತಚರ ಇಲಾಖೆ ನಿವೃತ್ತ ಅಧಿಕಾರಿ ಎನ್‌.ಆರ್‌.ಕುಲ್ಕರ್ಣಿ ಅವರು “ಫ್ಯಾಸಿಟ್ಸ್‌ ಆಫ್ ಟೆರರಿಸಂ ಇನ್‌ ಇಂಡಿಯಾ’ಎಂಬ ಕೃತಿಯನ್ನು ಹೊರತಂದಿದ್ದು, ಶನಿವಾರ ನಗರದಲ್ಲಿ ಬಿಡುಗಡೆಗೊಳಿಸಲಾಯಿತು. 

Advertisement

ಮಿಥಿಕ್‌ ಸೊಸೈಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಕಣಕಾರ ಎಂ.ಆರ್‌.ವೆಂಕಟೇಶ್‌, ಪರಿಸರವಾದಿ ಎಂ.ಎಸ್‌.ಚೈತ್ರಾ ಅವರು ಕೃತಿ ಬಿಡುಗಡೆಗೊಳಿಸಿದರು. ಈ ವೇಳೆ ಮಾತನಾಡಿದ ಎಂ.ಎಸ್‌.ಚೈತ್ರಾ, ಮನುಕುಲವನ್ನು ಕಾಡುತ್ತಿರುವ ಭಯೋತ್ವಾದನೆ ಹತ್ತಿಕ್ಕಲು ವಿಶ್ವ ಸಮುದಾಯ ಮತ್ತಷ್ಟು ಕ್ರಮ ಕೈಗೊಳ್ಳಬೇಕಾಗಿದೆ. ಭಾರತವಷ್ಟೇ ಅಲ್ಲ, ವಿಶ್ವದ ಮುಂದುವರಿದ ರಾಷ್ಟ್ರಗಳಾದ ಅಮೆರಿಕ, ಫ್ರಾನ್ಸ್‌, ಜರ್ಮನಿ, ಸೇರಿ ಹಲವು ರಾಷ್ಟ್ರಗಳಿಗೆ ಉಗ್ರರ ದಾಳಿಯ ಕಹಿ ಅನುಭವವಾಗಿದೆ.

ಇಸ್ಲಾಂ ಭಯೋತ್ಪಾಧಕರ ವಿರುದ್ಧ ಮತ್ತಷ್ಟು ಹೋರಾಟ ನಡೆಯಬೇಕಾಗಿದೆ ಎಂದು ಹೇಳಿದರು. ಪ್ರಸ್ತುತ ಕೃತಿಯಲ್ಲಿ ಲೇಖಕರು ಇಸ್ಲಾಂ ಭಯೋತ್ಪಾದನೆ ಮೇಲೆ ಬೆಳಕು ಚೆಲ್ಲಿದ್ದು, ಅಂಕಿ-ಅಂಶಗಳ ಸಮೇತ ವಿವರಿಸಿದ್ದಾರೆ. ಕಾಶ್ಮೀರ ಪಂಡಿತರ ನೋವುಗಳ ಬಗ್ಗೆಯು ಪ್ರಸ್ತಾಪಿಸಿದ್ದು, ಉಗ್ರವಾದ ಭಾರತದ ಸಂಸ್ಕತಿ-ಪರಂಪರೆಗೆ ಯಾವ ರೀತಿಯ ಪೆಟ್ಟು ನೀಡಿದೆ ಎಂಬುವುದನ್ನು ಕಟ್ಟಿಕೊಟ್ಟಿದ್ದಾರೆ ಎಂದರು.

ಅಂಕಣಕಾರ ಎಂ.ಆರ್‌.ವೆಂಕಟೇಶ್‌ ಮಾತನಾಡಿ, ಭಯೋತ್ಪಾದನೆಗೆ ಮೂಲಕ ಕಾರಣ ಆರ್ಥಿಕ ಸಹಾಯ. ಉಗ್ರರನ್ನು ಪೋಷಿಸುತ್ತಿರುವ ಸಂಘಟನೆಗಳಿಗೆ ಹಲವು ಕಡೆಗಳಿಂದ ಹಣ ಸಂದಾಯವಾಗುತ್ತಿದ್ದು, ಆ ಮೂಲವನ್ನು ಮಟ್ಟ ಹಾಕುವ ಅಗತ್ಯವಿದೆ. ಭಯೋತ್ಪಾದನೆಯಷ್ಟೇ ಮತಾಂತರು ಕೂಡ ಅಪಾಯಕಾರಿಯಾಗಿದ್ದು, ಈ ಬಗ್ಗೆ ಎಚ್ಚರದಿಂದ ಇರಬೇಕು ಎಂದರು. ಲೇಖಕ ಎನ್‌.ಆರ್‌.ಕುಲ್ಕರ್ಣಿ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next