Advertisement

ಪುಸ್ತಕಕ್ಕಿದೆ ಬದುಕು ರೂಪಿಸುವ ಶಕ್ತಿ

06:43 PM Nov 21, 2017 | Team Udayavani |

ಚಿತ್ರದುರ್ಗ: ಉತ್ತಮ ಪುಸ್ತಕಗಳು ವಿದ್ಯಾರ್ಥಿಗಳ ಬದುಕು ರೂಪಿಸುವ ಶಕ್ತಿ ಹೊಂದಿವೆ ಎಂದು ಅಪರ ಜಿಲ್ಲಾಧಿಕಾರಿ
ಟಿ.ರಾಘವೇಂದ್ರ ಹೇಳಿದರು. 

Advertisement

ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಕಳೆದ ಏಳು ದಿನಗಳಿಂದ ನಡೆದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದ ಸಮಾರೋಪದಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು. ಪ್ರಸ್ತುತ ಜಗತ್ತಿನಲ್ಲಿ ಪ್ರತಿ ಹಂತದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಬೇಕು. ಗ್ರಂಥಾಲಯ ಭವಿಷ್ಯದ ಹೆದ್ದಾರಿ ಇದ್ದಂತೆ. ಅವು ಪ್ರತಿಯೊಬ್ಬ ಶ್ರಮಿಕನನ್ನು ಬೆಳೆಯಲು ದಾರಿ ಮಾಡಿಕೊಡುತ್ತವೆ. ಶೂನ್ಯ ಮತ್ತು ಕಲುಷಿತ ಮನಸ್ಸುಗಳನ್ನು ನಿರ್ಮಲಗೊಳಿಸಿ ಜ್ಞಾನ ತುಂಬುತ್ತವೆ ಎಂದರು.

ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆ ಇರುವುದರಿಂದ ಕಠಿಣ ಪರಿಶ್ರಮ ಅತಿ ಮುಖ್ಯ. ಹಿಂದುಳಿದ ಜಿಲ್ಲೆಯಾದ ಚಿತ್ರದುರ್ಗದಿಂದ ಅತಿ ಹೆಚ್ಚು ಐಎಎಸ್‌, ಐಪಿಎಸ್‌, ಕೆಎಎಸ್‌ ಅಧಿಕಾರಿಗಳು ಹೊರಹೊಮ್ಮಬೇಕು. ಉನ್ನತ ಹುದ್ದೆಗಳನ್ನು ಅಲಂಕರಿಸಲು ಉತ್ತಮ ಪುಸ್ತಕಗಳ ಸದುಪಯೋಗಪಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಉತ್ಸಾಹ ಕಳೆದುಕೊಳ್ಳದೆ ಮುನ್ನಡೆಯಬೇಕು. ಮಕ್ಕಳಿಗೆ ವಿವಿಧ ಸ್ಪರ್ಧೆ ಏರ್ಪಡಿಸಿ ಮಕ್ಕಳಿಗೆ ಓದಿನ ಬಗ್ಗೆ ಹೆಚ್ಚಿನ ಆಸಕ್ತಿ ಬರುವಂತೆ ಮಾಡಬೇಕು ಎಂದು ತಿಳಿಸಿದರು.

ನಗರ ಗ್ರಂಥಾಲಯದ ಸದಸ್ಯ ಪ್ರತಾಪ್‌ ಜೋಗಿ ಮಾತನಾಡಿ, ಗ್ರಂಥಾಲಯ ಕಳೆದ ಹಲವಾರು ದಶಕಗಳಿಂದ ಉತ್ತಮವಾಗಿ ನಡೆದುಕೊಂಡು ಬರುತ್ತಿದೆ. ಕಳೆದ 3-4 ವರ್ಷಗಳ ಪರಿಸ್ಥಿತಿಗಿಂತ ಉತ್ತಮ ವಾತಾವರಣ ನಿರ್ಮಾಣವಾಗಿದೆ. ಮಕ್ಕಳಿಗೆ ಬುದ್ಧ ಮತ್ತು ಬಸವಣ್ಣ ಕುರಿತು ಪ್ರಬಂಧ ಏರ್ಪಡಿಸಲಾಗಿತ್ತು ಎಂದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಜಿ. ಜಗದೀಶ್‌ ಮಾತನಾಡಿ, ಓದಿನಿಂದ ಪ್ರತಿಯೊಬ್ಬ ವ್ಯಕ್ತಿ ಉತ್ತಮ ನಾಯಕನಾಗುತ್ತಾನೆ. ಗ್ರಂಥಾಲಯ ಸಂಯಮ, ಸದೃಢ ವ್ಯಕ್ತಿಯನ್ನಾಗಿ ಮಾಡುತ್ತದೆ ಎಂದು ಹೇಳಿದರು. ಸನ್ಮಾನ ಸ್ವೀಕರಿಸಿದ ಕೆಎಸ್‌ಆರ್‌ಟಿಸಿ ಬಸ್‌ ಚಾಲಕ ನಟರಾಜ ಮಾತನಾಡಿ, ಇಂದಿನ ದಿನಗಳಲ್ಲಿ ಹೆಚ್ಚಾಗಿ ಆಧುನಿಕ ಮಾಧ್ಯಮಗಳ ಬಳಕೆಯಿಂದ ಪುಸ್ತಕ ಓದುವ ಸಂಸ್ಕೃತಿ ಕ್ಷೀಣಿಸಿದೆ. ಪುಸ್ತಕ ಓದುವುದರಿಂದ ಭಾಷಾಭಿಮಾನ ಮೂಡುತ್ತದೆ. ವಿಷಯ ತಿಳಿಯುವುದರ ಜತೆಗೆ ಪುಸ್ತಕದೊಂದಿಗೆ ಅವಿನಾಭಾವ ಸಂಬಂಧ ಬೆಳೆಯುತ್ತದೆ ಎಂದು ಅಭಿಪ್ರಾಯಪಟ್ಟರು.

Advertisement

 ತಾಲೂಕು ಪಂಚಾಯತ್‌ ಸದಸ್ಯ ಎಚ್‌. ಆಂಜನೇಯ, ಗ್ರಂಥಾಲಯ ಸಿಬ್ಬಂದಿ ಸುನೀಲ್‌ಕುಮಾರ್‌, ಗೋಪಾಲ್‌
ಇತರರು ಇದ್ದರು. ಇದೇ ಸಂದರ್ಭದಲ್ಲಿ ಪರಿಚಲನಾ ವಿಭಾಗ, ಪತ್ರಿಕಾ ವಿಭಾಗ, ವೃತ್ತಿ ಮಾರ್ಗದರ್ಶಿ ಮತ್ತು ಸ್ಪರ್ಧಾತ್ಮಕ ವಿಭಾಗದ ಓದುಗರಿಗೆ ಉತ್ತಮ ಓದುಗ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಿಲ್ಲಾ ಮಟ್ಟದ ಸಿಬ್ಬಂದಿ ಪುರಸ್ಕಾರ ನೀಡಿ ಗೌರವಿಸಲಾಯಿತು. ಜಿಲ್ಲಾ ಗ್ರಂಥಾಲಯಾಧಿಕಾರಿ ಪಿ.ಆರ್‌. ತಿಪ್ಪೇಸ್ವಾಮಿ ಸ್ವಾಗತಿಸಿದರು.

‌ಮ್ಮ ಬಸ್‌ನಲ್ಲಿ “ಮಾತೃಭೂಮಿ  ಸಂಚಾರಿ ಗ್ರಂಥಾಲಯ’ ಆರಂಭಿಸಲಾಗಿದೆ. ಕನ್ನಡ ನಾಡಿನ ಪ್ರಮುಖ ಕವಿಗಳ ಕೃತಿಗಳು ಸೇರಿದಂತೆ ಸಾಹಿತ್ಯಕ್ಕೆ ಸಂಬಂ ಧಿಸಿದ ಹಲವಾರು ಪುಸ್ತಕಗಳನ್ನು ಅಲ್ಲಿ ಇಡಲಾಗಿದೆ. ದಿನಪತ್ರಿಕೆಗಳು, ಮಾಸಪತ್ರಿಕೆಗಳು, ಸಾಹಿತ್ಯ ಪುಸ್ತಕಗಳು, ಸೇರಿದಂತೆ ಕುಡಿಯುವ ನೀರಿನ ಸೌಲಭ್ಯ ಒದಗಿಸಿದ್ದೇವೆ. ಸಾರ್ವಜನಿಕರಿಗೆ, ಪ್ರಯಾಣಿಕರಿಗೆ ಓದುವ ಹವ್ಯಾಸ
ಮೂಡಿಸಲಾಗುತ್ತಿದೆ.

ನಟರಾಜ್‌, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಚಾಲಕ.

Advertisement

Udayavani is now on Telegram. Click here to join our channel and stay updated with the latest news.

Next