Advertisement

ಜನರ ಬಳಿಗೆ ಪುಸ್ತಕ ಆದರ್ಶ ಪ್ರಾಯ

01:48 PM Oct 21, 2018 | |

ಬೀದರ: ನಗರದ ಪ್ರೊ| ಸಿದ್ರಾಮಪ್ಪಾ ಮಾಸಿಮಾಡೆ ಅವರ ಮನೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ವತಿಯಿಂದ ಶನಿವಾರ “ನಿಮ್ಮ ಮನೆಗೆ ನಮ್ಮ ಪುಸ್ತಕ’ ಎಂಬ ವಿನೂತನ ಕಾರ್ಯಕ್ರಮ ನಡೆಯಿತು.

Advertisement

ಕಾರ್ಯಕ್ರಮ ಉದ್ಘಾಟಿಸಿದ ಶರಣಬಸವೇಶ್ವರ ವಿಶ್ವವಿದ್ಯಾಲಯದ ಡಾ| ಅನೀಲಕುಮಾರ ಬಿಡವೆ ಮಾತನಾಡಿ, ಪುಸ್ತಕದ ಕಡೆ ಜನ ಬರದಿದ್ದರೆ ಜನರ ಬಳಿಯೇ ಪುಸ್ತಕ ಕೊಂಡೊಯ್ಯುವ ಈ ಕಾರ್ಯಕ್ರಮ ತುಂಬಾ ಅರ್ಥಗರ್ಭಿತ ಹಾಗೂ ಆದರ್ಶ ಪ್ರಾಯವಾಗಿದೆ ಎಂದು, ವಿನೂತನ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಹುಬ್ಬಳ್ಳಿಯ ಡಾ| ಶಶಿಕಲಾ ವಸ್ತ್ರದ ಮಾತನಾಡಿ, ಮನುಷ್ಯ ಹೊಟ್ಟೆ ತುಂಬಿಕೊಳ್ಳುವುದಕ್ಕಷ್ಟೇ ಜೀವನ ಅಂತ ತಿಳಿದುಕೊಂಡರೆ ಅದಕ್ಕೂ ಪ್ರಾಣಿಗಳಿಗೂ ಯಾವ ವ್ಯತ್ಯಾಸವೂ ಇರುವುದಿಲ್ಲ. ಪುಸ್ತಕ ಓದುವುದರಿಂದ ಮನುಷ್ಯರಲ್ಲಿ ಅಪಾರ ಬದಲಾವಣೆ ಬರುತ್ತದೆ. ವಚನ ಸಾಹಿತ್ಯ, ದಾಸ ಸಾಹಿತ್ಯ, ಸೂಫಿ ಸಾಹಿತ್ಯ, ತತ್ವಪದ ಸಾಹಿತ್ಯ ಓದುವ ಪ್ರವೃತ್ತಿ ಬೆಳೆಯಬೇಕಾಗಿದೆ. 

ಮೂಲ ಸೂರ್ಯನ ಆರಾಧಕರಿಂದ, ಚಿತ್ರಲಿಪಿಯಿಂದ ಅಕ್ಷರ ಲಿಪಿಯವರೆಗೆ ಬೆಳೆದು ಬಂದಂತಹ ಸಾಹಿತ್ಯದಲ್ಲಿ ಕನ್ನಡ ಲಿಪಿ ಬಹು ಸುಂದರವಾದ ಲಿಪಿ. ಗ್ರಂಥಾಲಯ, ಪುಸ್ತಕಗಳು ಇರದಿದ್ದರೆ ನಾವು ಅನಾಗರಿಕರಾಗುತ್ತೇವೆ.

ಪ್ರತಿಯೊಬ್ಬರ ಮನೆಯಲ್ಲಿ ಪುಸ್ತಕಗಳನ್ನು ಇಟ್ಟು, ಮಕ್ಕಳಿಗೆ ಓದಲು ಪ್ರೋತ್ಸಾಹಿಸಬೇಕು. ಓದುವುದರಿಂದ ಮನಸ್ಸು ಮಾಗುತ್ತದೆ. ಸಮನ್ವಯ ಶಕ್ತಿ ಬರುತ್ತದೆ. ಓದು ಅರಗಿಸಿಕೊಂಡರೆ ಅದಕ್ಕೊಂದು ಬೆಲೆ ಬರುತ್ತದೆ ಎಂದರು.

Advertisement

ಡಾ| ಕಾಶಿನಾಥ ಅಂಬಲಗಿ ಮಾತನಾಡಿ, ಪುಸ್ತಕ ಜಗತ್ತಿನಲ್ಲಿ ಎಲ್ಲವನ್ನು ಹೇಳಿಕೊಡುತ್ತದೆ. ಅನುಭವ, ಶಕ್ತಿ ಕೊಡುವ ಶಕ್ತಿ ಪುಸಕ್ತಕ್ಕೆ ಇದೆ. ನಾವು ಪುಸ್ತಕಗಳನ್ನು ರೂಪಿಸುವುದಕ್ಕಿಂತ ಪುಸ್ತಕಗಳೇ ನನ್ನನ್ನು ರೂಪಿಸಲಿ ಎಂದ ಅವರು, ಓದು ಆತ್ಮವಿಶ್ವಾಸ, ಅರಿವು, ವಿವೇಕ, ಸೌಂದರ್ಯ ತಂದುಕೊಡುತ್ತದೆ ಎಂದರು.

ಪುಸ್ತಕ ಪ್ರಾಧಿಕಾರದ ಸದಸ್ಯ ಸಂಚಾಲಕಿ ಡಾ| ಜಯದೇವಿ ಗಾಯಕವಾಡ ಮಾತನಾಡಿ, ಪುಸ್ತಕ ಓದುವುದರಿಂದ ಬರೆಯುವುದರಿಂದ ಬದುಕಿನಲ್ಲಿ ಲವಲವಿಕೆಯಿಂದ ಇರಲು ಸಾಧ್ಯ. ಕನ್ನಡ ಪುಸ್ತಕ ಪ್ರಾಧಿಕಾರ ನಿರಂತರವಾಗಿ ಇಂತಹ ಅರ್ಥಗರ್ಭಿತ ಕಾರ್ಯಕ್ರಮ ದೊಂದಿಗೆ ನಿರಂತರವಾಗಿ ನಡೆಯುತ್ತಿದೆ ಎಂದು, ಪ್ರಾಧಿಕಾರದ ಕಾರ್ಯಕ್ರಮಗಳ ಕುರಿತು ವಿವರಣೆ ನೀಡಿದರು.

ಪ್ರೊ| ಸಿದ್ರಾಮಪ್ಪ ಮಾಸಿಮಾಡೆ, ಗಂಗಾಂಬಿಕಾ, ಬಸವರಾಜ ಮೂಲಗೆ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next