Advertisement

ಪುಸ್ತಕ ಓದುವ ಹವ್ಯಾಸ ಬೆಳೆಯಲಿ

10:01 AM Jan 29, 2019 | |

ಮಸ್ಕಿ: ಸಾಹಿತ್ಯಿಕ ಕೃತಿ ಹಾಗೂ ಸದಭಿರುಚಿ ಪುಸ್ತಕಗಳ ಅಧ್ಯಯನದಿಂದ ಮಾತ್ರ ಉತ್ತಮ ಕವಿತೆಗಳನ್ನು ರಚಿಸಲು ಸಾಧ್ಯ ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ಬೀರಪ್ಪ ಶಂಭೋಜಿ ಹೇಳಿದರು.

Advertisement

ಮಸ್ಕಿ ತಾಲೂಕು ಕಸಾಪ ಘಟಕದಿಂದ ಪಟ್ಟಣದ ಗಚ್ಚಿನಮಠದ ಸಮುದಾಯ ಭವನದಲ್ಲಿ ನಡೆದ ತಾಲೂಕು ಮಟ್ಟದ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇತ್ತೀಚಗೆ ಜನರಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆ ಆಗುತ್ತಿರುವುದು ಆತಂಕಕಾರಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಯುವಕರು ಪುಸ್ತಕಗಳನ್ನು ಓದುವ ಅಭಿರುಚಿ ಬೆಳೆಸಿಕೊಂಡರೆ ಮಾತ್ರ ಗುಣಾತ್ಮಕ ಕಥೆ, ಕವನಗಳನ್ನು ಬರೆಯಲು ಸಾಧ್ಯವಾಗುತ್ತದೆ ಎಂದರು.

ಪತ್ರಕರ್ತ ವೀರೇಶ ಸೌದ್ರಿ ಮಾತನಾಡಿ, ಸಾಹಿತಿಗಳು ತಮ್ಮ ಪುಸ್ತಕವನ್ನು ತಾವೇ ಮುದ್ರಿಸಿ ಉಚಿತ ಹಂಚುವ ಪರಿಸ್ಥಿತಿ ನಿರ್ಮಾಣವಾಗಿರುವುದು ಖೇದದ ಸಂಗತಿ. ಸಹಕಾರ ತತ್ವದಡಿ ಪ್ರಕಾಶನ ಸಂಸ್ಥೆ ಪ್ರಾರಂಭಿಸಿ ಲೇಖಕರ ಮತ್ತು ಒದುಗರ ನಡುವೆ ಗಟ್ಟಿ ಸಂಬಂಧ ಬೆಸೆಯುವ ಕೆಲಸ ಮಾಡಲು ಮುಂದಾಗಬೇಕೆಂದು ಹೇಳಿದರು.

ಡಾ| ಶಿವಶರಣಪ್ಪ ಇತ್ಲಿ ಸ್ವರಚಿತ ಕವನ ವಾಚಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಹಿತಿಗಳು ಸಮಾಜದಲ್ಲಿ ನಡೆಯುವ ಘಟನೆಗಳಿಗೆ ತಕ್ಷಣ ಸ್ಪಂದಿಸುವ ಗುಣವುಳ್ಳವರಾಗಬೇಕು. ಕವಿ ಕಾಣುತ್ತಾನೆ ಎಂಬ ಮಾತು ಪ್ರಚಲಿತದ‌ಲ್ಲಿದೆ. ಸಮಾಜದಲ್ಲಿ ಸಾಹಿತಿಗಳಿಗೆ ವಿಶೇಷ ಸ್ಥಾನವಿದ್ದು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಲಿ ಎಂದರು.

Advertisement

ಕಸಾಪ ಮಸ್ಕಿ ತಾಲೂಕು ಅಧ್ಯಕ್ಷ ಘನಮಠದಯ್ಯ ಸಾಲಿಮಠ, ಸಿದ್ಧಲಿಂಗಯ್ಯ ಹಿರೇಮಠ, ವೀರಭದ್ರಗೌಡ ಹಳೇಕೋಟಿ ಮಾತನಾಡಿದರು. ಕಸಾಪ ಸದಸ್ಯರು ಹಾಗೂ ಸಾಹಿತ್ಯಾಸಕ್ತರು ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.

ಕವನ ವಾಚನ: ಶಿಕ್ಷಕ ಗುಂಡುರಾವ್‌ ದೇಸಾಯಿ, ವಿವೇಕಾನಂದ ಎಲಿಗಾರ, ಅಬ್ದುಲ್‌ ಗನಿ, ಉಪನ್ಯಾಸಕ ಸುರೇಶ ಬಳಗಾನೂರ, ಹನುಮನಗೌಡ ಮರಕಂದಿನ್ನಿ, ಡಾ| ಶರಭಯ್ಯಸ್ವಾಮಿ, ಶಿವಣ್ಣ ಹುಲ್ಲೂರು, ಶಿವಕುಮಾರ ದೇವರಮನಿ ಹುಲ್ಲೂರು, ಅಮರಗುಂಡಪ್ಪ ಹುಲ್ಲೂರು, ಮಲ್ಲಯ್ಯ ಪಟ್ಟದವಡೆಯರ ಗೋನಾಳ, ಡಾ| ಶರೀಫ ಹಸಮಕಲ್‌ ಸೇರಿ ಸುಮಾರು 28 ಜನ ಕವಿಗಳು ಸಿದ್ಧಗಂಗಾ ಶ್ರೀ, ರೈತರ ಬಗ್ಗೆ ಹಾಗೂ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆ ಬಗ್ಗೆ ವಿಡಂಬನಾತ್ಮಕ ಕವನ ವಾಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next