Advertisement

ಗ್ರಂಥಪಾಲಕಿ ಮನೆ ಸೇರಿದ ಪುಸ್ತಕ

02:36 PM Oct 25, 2019 | Suhan S |

ದೋಟಿಹಾಳ: ಜುಮಲಾಪೂರದಲ್ಲಿ ಸಮುದಾಯ ಭವನದಲ್ಲೇ ಕಾರ್ಯ ನಿರ್ವಹಿಸುತ್ತಿದ್ದ ಗ್ರಂಥಾಲಯ ಶಿಥಿಲಗೊಂಡಿದ್ದರಿಂದ ಪುಸ್ತಕಗಳು ಸೇರಿದಂತೆ ಸಾಮಗ್ರಿಗಳು ಗ್ರಂಥಪಾಲಕಿಯ ಮನೆ ಸೇರಿವೆ.

Advertisement

ಗ್ರಂಥಾಲಯಕ್ಕೆ ಸ್ವಂತ ಕಟ್ಟಡವಿಲ್ಲದ್ದರಿಂದ 2007-08ರಿಂದ ಸಮುದಾಯ ಭವನದಲ್ಲೇ ಕಾರ್ಯ ನಿರ್ವಹಿಸುತ್ತಿತ್ತು. ಸಮುದಾಯ ಭವನ ಈಗ ಶಿಥಿಲಗೊಂಡಿದ್ದು, ಮೇಲ್ಛಾವಣಿ ಇಂದೆಯೋ, ನಾಳೆಯೋ ಬೀಳುವ ಸ್ಥಿತಿಯಲ್ಲಿದೆ. ಮಳೆ ಬಂದರೆ ನೀರು ಕೇಂದ್ರದೊಳಗೆ ಬರುತ್ತವೆ. ಮಳೆ ಬಂದರೆ ಪುಸ್ತಕಗಳು ಹಾಳಾಗಿ ಹೋಗುತ್ತವೆ ಎಂಬ ಕಾರಣದಿಂದ ಪುಸ್ತಕ ಹಾಗೂ ಇತರೆ ಸಾಮಗ್ರಿಗಳು ಗ್ರಂಥಪಾಲಕರ ಮನೆ ಸೇರಿವೆ. ಹೀಗಾಗಿ ಗ್ರಂಥಾಲಯ ಬಂದಾಗಿ ಮೂರ್‍ನಾಲ್ಕು ತಿಂಗಳುಗಳು ಕಳೆದಿವೆ.

ಅದು ಅಲ್ಲದೇ ತಿಪ್ಪೆಗಳ ಮಧ್ಯೆಯೇ ಗ್ರಂಥಾಲಯವಿದ್ದಿದ್ದರಿಂದ ಓದುಗರು ವಾಸನೆ ಸಹಿಸಲಾಗದೇ ದೂರ ಹೋಗುವಂಥ ಸ್ಥಿತಿ ನಿರ್ಮಾಣವಾಗಿತ್ತು. ಸಾರ್ವಜನಿಕರು ದನಕರುಗಳ ಸೆಗಣಿ, ಮೂತ್ರ, ಕಸಕಡ್ಡಿ ಮತ್ತು ಇನ್ನಿತರ ನಿರುಪಯುಕ್ತ ವಸ್ತುಗಳನ್ನು ಹಾಕುತ್ತಿದ್ದರಿಂದ ಓದುಗರಿಗೆ ಗಬ್ಬು ವಾಸನೆ ಉಂಟಾಗಿ ಕಿರಿಕಿರಿಯಾಗಿತ್ತು. ಸುಮಾರು 2500 ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಕೇವಲ 50 ಜನ ಮಾತ್ರ ಗ್ರಂಥಾಲಯ ಸದಸ್ಯತ್ವ ಹೊಂದಿದ್ದು, ಎರಡು ಪತ್ರಿಕೆ, ಮೂರು ಮಾಸಪತ್ರಿಕೆ ಬರುತ್ತಿದ್ದವು. 2152 ಪುಸ್ತಕಗಳು ಈ ಗ್ರಂಥಾಲಯದಲ್ಲಿ ಇವೆ. ಆದರೆ ಅವು ಸಹ ಈಗ ಉಪಯೋಗಕ್ಕೆ ಬಾರದಂತಾಗಿವೆ.

ಗ್ರಾಮದ ಸಮುದಾಯ ಭವನದಲ್ಲಿ ಕಳೆದ 7-8 ವರ್ಷಗಳಿಂದ ನಡೆಯುತ್ತಿದ ಗ್ರಂಥಾಲಯ ಕಟ್ಟಡ ಶಿಥಿಲಗೊಂಡಿದೆ. ಮಳೆ ಬಂದರೆ ನೀರು ಕೇಂದ್ರದೊಳಗೆ ನೀರು ಬರುತ್ತವೆ. ಬೇರೆ ಕಟ್ಟಡ ವ್ಯವಸ್ಥೆ ಮಾಡಿಕೊಡಲು ಗ್ರಾಪಂ ಅವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಅನಿವಾರ್ಯವಾಗಿ ಮೂರು ತಿಂಗಳಿಂದ ನಮ್ಮ ಮನೆಯಲ್ಲೇ ಗ್ರಂಥಾಲಯ ಸಾಮಗ್ರಿ ಇಟ್ಟುಕೊಂಡಿದ್ದೇವೆ ಅಕ್ಕಮಹಾದೇವಿ, ಗ್ರಂಥಪಾಲಕಿ.

 

Advertisement

-ಮಲ್ಲಿಕಾರ್ಜುನ ಮೆದಿಕೇರಿ

Advertisement

Udayavani is now on Telegram. Click here to join our channel and stay updated with the latest news.

Next