ಕೌಳಿಗೆ ನಿವಾಸಿ ಪರಮೇಶ್ವರ (75) ಮೃತಪಟ್ಟ ವ್ಯಕ್ತಿ. ಅವರು ಎ. 14ರಂದು ರಾತ್ರಿ ವೇಳೆ ಟಾರ್ಚ್‌ಲೈಟ್ ಹಿಡಿದು ಮನೆಯಿಂದ ಹೊರಟು ಹೋದವರು ಮರಳಿ ಬಾರದೆ ನಾಪತ್ತೆಯಾಗಿದ್ದರು. ಮನೆಯಲ್ಲಿ ಉಡುತ್ತಿದ್ದ ಬಟ್ಟೆಯಲ್ಲೇ ಹೊರಗೆ ಹೋದ ಕಾರಣ ಮನೆಯ ಸುತ್ತಮುತ್ತಲಲ್ಲೇ ಎಲ್ಲೋ ಹೋಗುತ್ತಿದ್ದಾರೆ ಎಂದು ಮನೆ ಮಂದಿ ಭಾವಿಸಿದ್ದರು.
Advertisement
ಈ ಕುರಿತು ಅವರ ಪುತ್ರ ಶಿವಾನಂದ ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ರವಿವಾರ ಬೆಳಗ್ಗೆ ಸಜೀಪಮುನ್ನೂರಿನ ಮಡಿವಾಳಪಡ್ಪು ಬಳಿ ನೇತ್ರಾವತಿ ನದಿಯಲ್ಲಿ ಮೃತದೇಹವೊಂದು ಪತ್ತೆಯಾಗಿದ್ದು, ಮೇಲಕ್ಕೆತ್ತಿ ನೋಡಿದಾಗ ಅದು ಪರಮೇಶ್ವರ ಅವರ ಮೃತದೇಹವಾಗಿತ್ತು.