Advertisement

ಮಂಗಳೂರು : ಹೊಯ್ಗೆ ಬಜಾರ್‌ ಸಮುದ್ರ ದಡದಲ್ಲಿ ಅಪರಿಚಿತ ಯುವತಿಯ ಮೃತದೇಹ ಪತ್ತೆ

09:47 AM Sep 12, 2021 | Team Udayavani |

ಮಂಗಳೂರು : ನಗರದ ಹೊಯ್ಗೆ ಬಜಾರ್‌ನ ಸಮುದ್ರದ ದಡದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಅಪರಿಚಿತ ಯುವತಿಯ ಮೃತದೇಹ ಭಾನುವಾರ ಬೆಳಗ್ಗೆ ಪತ್ತೆಯಾಗಿದೆ.

Advertisement

ಮೃತ ಯುವತಿಯು ಸುಮಾರು 5 ಅಡಿ ಎತ್ತರವಿದ್ದು, ಕಪ್ಪು ಬಣ್ಣದ ಟೀ-ಶರ್ಟ್, ನೀಲಿ ಜೀನ್ಸ್ ಪ್ಯಾಂಟ್ ಧರಿಸಿದ್ದಾರೆ.‌ ಒಂದು ಕೈಯಲ್ಲಿ ಕೆಂಪು ದಾರ ಮತ್ತು ಕಪ್ಪು ಬಳೆ ಹಾಕಿಕೊಂಡಿದ್ದು, ಉದ್ದ ಕೂದಲು ಹೊಂದಿದ್ದಾರೆ.

ಮೃತದೇಹದ‌‌ ಮೇಲೆ ಯಾವುದೇ ಗಾಯಗೊಂಡ ಕಲೆಗಳು ಮೇಲ್ನೋಟಕ್ಕೆ ಕಂಡು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಮಂಗಳೂರು ದಕ್ಷಿಣ  ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next