Advertisement
ಸೋನಾರ್ ತಂತ್ರಜ್ಞಾನದ ಜತೆಗೆ ಕಲರ್ ಕೋಡಿಂಗ್ ಪತ್ತೆಗೆ ಮತ್ತೂಂದು ತಂತ್ರಜ್ಞಾನದ ಯಂತ್ರ ತರಿಸಿ ಕೊಂಡು ಕಾರ್ಯಾಚರಣೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.ಬೋಟ್ ಮತ್ತು ಮೀನುಗಾರರ ನಾಪತ್ತೆ ಪ್ರಕರಣದಲ್ಲಿ ದೃಢವಾದ ಹೇಳಿಕೆಯನ್ನು ಅಧಿಕೃತರಾರೂ ನೀಡದ ಕಾರಣ ಗೊಂದಲ ಮುಂದುವರಿದಿದೆ. ಹುಡುಕಾಟ ನಡೆಯುತ್ತಿದೆ ಒಂದೆರಡು ದಿನದಲ್ಲಿ ಸ್ಪಷ್ಟ ಸಿಗುತ್ತದೆ ಎಂಬ ಉತ್ತರ ಮಾತ್ರ ಎಲ್ಲ ಕಡೆಯಿಂದ ಬರುತ್ತಿದೆ. ಮೀನುಗಾರ ಕುಟುಂಬಗಳಲ್ಲಿ ದುಃಖ ಮಡುಗಟ್ಟಿದೆ.
ಶುಕ್ರವಾರ ಬೆಂಗಳೂರಿನಲ್ಲಿ ಮೀನುಗಾರರ ಜತೆ ಮುಖ್ಯಮಂತ್ರಿ ಗಳ ವಿಶೇಷ ಸಭೆ ನಡೆದಿದ್ದು, ಮಲ್ಪೆ ಮೀನುಗಾರರ ನಿಯೋಗವು ಮುಖ್ಯಮಂತ್ರಿ ಅವರನ್ನು ವೈಯಕ್ತಿಕ ವಾಗಿ ಭೇಟಿಯಾಗಿ ನಾಪತ್ತೆ ಪ್ರಕರಣದ ಬಗ್ಗೆಯೂ ಚರ್ಚೆ ನಡೆಸಿದರು. ಶ್ರೀಲಂಕದಲ್ಲಿ ಪತ್ತೆ ವದಂತಿ
ಈ ನಡುವೆ ನಾಪತ್ತೆಯಾದ ಬೋಟ್ ಶ್ರೀಲಂಕದಲ್ಲಿ ಪತ್ತೆ ಯಾಗಿದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇಂತಹ ಅಸಂಬದ್ಧ ವಿಚಾರಗಳನ್ನು ಹರಡುವವರ ಮೇಲೆ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಮೀನುಗಾರರು ಆಗ್ರ ಹಿಸಿದ್ದಾರೆ.
Related Articles
Advertisement