Advertisement

ಪರೀಕ್ಷಾ ಮಂಡಳಿ ವಿಲೀನಕ್ಕೆ ಒಪ್ಪಿಗೆ

10:05 PM Sep 22, 2022 | Team Udayavani |

ಬೆಂಗಳೂರು: ಹಲವು ವರ್ಷದಿಂದ ಚರ್ಚೆಯಲ್ಲಿದ್ದ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ (ಪಿಯು ಬೋರ್ಡ್‌) ವಿಲೀನಕ್ಕೆ ಸಂಬಂಧಿಸಿ 2022ನೇ ಸಾಲಿನ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ (ತಿದ್ದುಪಡಿ) ಮಸೂದೆಗೆ ಅನುಮೋದನೆ ದೊರೆಯಿತು.

Advertisement

ಮಸೂದೆ ಮಂಡಿಸಿ ವಿಷಯ ಪ್ರಸ್ತಾವಿಸಿದ ಸಚಿವ ಬಿ.ಸಿ.ನಾಗೇಶ್‌, ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಕೂಲವಾಗುವಂತೆ ಮತ್ತು ಎರಡು ಮಂಡಳಿಗಳಲ್ಲಿ ಆಡಳಿತಾತ್ಮಕ ಹಾಗೂ ಶೈಕ್ಷಣಿಕ ಕಾರ್ಯಭಾರ ಇಳಿಸುವ ಉದ್ದೇಶದಿಂದ ಮಂಡಳಿಗಳನ್ನು ವಿಲೀನಗೊಳಿಸುತ್ತಿದ್ದೇವೆ. ಎರಡು ಮಂಡಳಿಗಳನ್ನು ಒಟ್ಟುಗೂಡಿಸಿ ಐಎಎಸ್‌ ಅಧಿಕಾರಿಯೊಬ್ಬರನ್ನು ನಿರ್ದೇಶಕರನ್ನಾಗಿ ಮಾಡಲಿದ್ದೇವೆ. ಪರೀಕ್ಷಾ ವಿಧಾನದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಎನ್‌ಇಪಿ ಸೂಚಿಸಿರುವಂತೆ ಪೂರ್ವ ಪ್ರಾಥಮಿಕ ತರಗತಿಯಿಂದ 2ನೇ ತರಗತಿ ವರೆಗೂ ಒಂದು ಹಂತ, 3ರಿಂದ 5ನೇ ತರಗತಿ ವರೆಗೂ ಇನ್ನೊಂದು ಹಂತ, 6ರಿಂದ 8ನೇ ತರಗತಿ ವರೆಗೂ ಮತ್ತೂಂದು ಹಂತ ಹಾಗೂ 9ರಿಂದ 12ನೇ ತರಗತಿವರೆಗೂ ಪ್ರತ್ಯೇಕ ವಿಭಾಗ ಇರಲಿದೆ. ಆದರೆ, ಎಸೆಸೆಲ್ಸಿ, ಪಿಯುಸಿ ಪರೀಕ್ಷೆಗಳು ಎಂದಿನಂತೆ ಇರುತ್ತವೆ ಎಂದರು.

ಅನುಮೋದನೆ:

ಸಚಿವ ಆರ್‌. ಅಶೋಕ್‌ ಮಂಡಿಸಿದ್ದ 2022ನೇ ಸಾಲಿನ ಕರ್ನಾಟಕ ಭೂ ಕಬಳಿಕೆ ನಿಷೇಧ(ತಿದ್ದುಪಡಿ) ಮಸೂದೆ ಹಾಗೂ 2022ನೇ ಸಾಲಿನ ಕರ್ನಾಟಕ ಸ್ಟಾಂಪ್‌ (ಮೂರನೇ ತಿದ್ದುಪಡಿ) ಮಸೂದೆಗೂ ಅನುಮೋದನೆ ದೊರೆಯಿತು. (ಸ್ಟಾಂಪ್‌ ತಿದ್ದುಪಡಿ ಮಸೂದೆಯು  ಸರಕಾರದಿಂದ ಅನುದಾನ ಪಡೆದು ಟ್ರಸ್ಟ್‌ಗಳನ್ನು ನಡೆಸುತ್ತಿರುವವರು ಆದಾಯ ತೆರಿಗೆ ವ್ಯಾಪ್ತಿಯ ಒಳಗೆ ತರುವುದಾಗಿದೆ)

Advertisement

Udayavani is now on Telegram. Click here to join our channel and stay updated with the latest news.

Next