ಬಜಪೆ: ಜಿಲ್ಲೆಯಲ್ಲಿ ಪ್ರಥಮವಾಗಿ ಮಂಗಳೂರು ತಾಲೂಕಿನ ಪೆರ್ಮುದೆ ಗ್ರಾಮ ಪಂಚಾಯತ್‌ನಲ್ಲಿ ಬೀಕನ್ ಗ್ರಂಥಾಲಯ ಉದ್ಘಾಟನೆಗೊಂಡಿದೆ. ಸಮಾಜದಲ್ಲಿ ಅಂಧರು ಎಲ್ಲರಂತೆ ಬದುಕಬೇಕು. ಅವರನ್ನು ಮುಖ್ಯ ವಾಹಿನಿಗೆ ತರಬೇಕೆಂಬ ದೃಷ್ಟಿಯಿಂದ ರಾಜ್ಯ ಸರಕಾರ ಕಳೆದ ಬಜೆಟ್‌ನಲ್ಲಿ ಬೀಕನ್ ಗ್ರಂಥಾಲಯ ಘೋಷಣೆ ಮಾಡಿತ್ತು. ಅದನ್ನು ಪೆರ್ಮುದೆ ಗ್ರಾಮ ಪಂಚಾಯತ್ ಮಾಡಿ ತೋರಿಸಿದೆ ಎಂದು ಮೂಲ್ಕಿ- ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಅವರು ಪೆರ್ಮುದೆ ಗ್ರಾಮ ಪಂಚಾಯತ್‌ನಲ್ಲಿ ನಿರ್ಮಾಣಗೊಂಡ ಬೀಕನ್ ಗ್ರಂಥಾಲಯನ್ನು ಉದ್ಘಾಟಿಸಿ ಮಾತನಾಡಿದರು. ಬಜೆಟ್‌ನಲ್ಲಿ ಬೀಕನ್ ಗ್ರಂಥಾಲಯ ಘೋಷಣೆ ಮಾಡಿದ ಮುಖ್ಯಮಂತ್ರಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇದರ ಪ್ರಯೋಜನವನ್ನು ಅಂಧರು, ದೃಷ್ಟಿದೋಷ ಇರುವವರು ಪಡೆಯಬೇಕು. ಸಿಡಿಗಳ ಮೂಲಕ ಕೇಳಿ ತಿಳಿಯುವಂತಹ ವ್ಯವಸ್ಥೆ ಮಾಡಲಾಗಿದೆ. ವಿವಿಧ ಕ್ಷೇತ್ರದಲ್ಲಿ ಅಂಧರ ಸಾಧನೆ ಅಪಾರವಾಗಿದೆ. ಅವರಿಗೆ ಸರಕಾರ ಹಾಗೂ ಜನಪ್ರತಿನಿಧಿಗಳು ಜತೆ ಇದ್ದು ಧೈರ್ಯ ಸಹಕಾರ ನೀಡಬೇಕು ಎಂದರು.
ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯ ಅಧಿಕಾರಿ ಗಾಯತ್ರಿ ಮಾತ ನಾಡಿ,ಯಾವುದೇ ವೈಕಲ್ಯ ಸಾಧನೆಗೆ ಅಡ್ಡಿ ಯಾಗುವುದಿಲ್ಲ, ಜೀವನದಲ್ಲಿ ಗುರಿ ತಲುಪಲು ಛಲ ಬೇಕು ಎಂದು ಹೇಳಿದರು. ಸಂಪನ್ಮೂಲ ವ್ಯಕ್ತಿಯಾಗಿ ಮುತ್ತುರಾಜ್ ಹಾಗೂ ಸ್ವರ್ಣಲತಾ ಮುತ್ತುರಾಜ್ ಅವರು ಮಾಹಿತಿ ನೀಡಿದರು.
ಉಪಾಧ್ಯಕ್ಷೆ ಲೀನಾ ಡಿ’ಸೋಜಾ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನಾಗರಾಜ್ ಎನ್., ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೈಲಜಾ ಕಾರ್ಯಕ್ರಮ ನಿರೂಪಿಸಿದರು. ಮಾಹಿತಿಗಳನ್ನು ತಿಳಿಯುವಂತಾಗಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಸಾದ್ ಎನ್. ಅಂಚನ್ ಮಾತನಾಡಿ, ಗ್ರಾಮ ಪಂಚಾಯತ್‌ನ ಎಲ್ಲ ಸದಸ್ಯರ ಸಹಕಾರದಿಂದ ಈ ಗ್ರಂಥಾಲಯ ಸಾಧ್ಯವಾಗಿದೆ. ತಾಲೂಕಿನ ಎಲ್ಲ ಅಂಧರು ಇದರ ಸದುಪಯೋಗ ಪಡೆಯಬೇಕು. ಎಲ್ಲ ಮಾಹಿತಿಗಳನ್ನು ತಿಳಿಯುವಂತಾಗಬೇಕು ಎಂದು ಹೇಳಿದರು.
ಸಮ್ಮಾನ ಬೀಕನ್ ಗ್ರಂಥಾಲಯಕ್ಕೆ ಸಹಕರಿಸಿದ ಕೆನರಾ ಬ್ಯಾಂಕ್ ಪೆರ್ಮುದೆ ಶಾಖಾ ಪ್ರಬಂಧಕರನ್ನು ಹಾಗೂ ಗ್ರಂಥಾಲಯಕ್ಕೆ ಬಣ್ಣಬಳಿದ ಪೈಂಟರ್ ರವೀಂದ್ರ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.