Advertisement

ಕಪ್ಪುಹಣದ ವರದಿ ಬಹಿರಂಗ ಸಾಧ್ಯವಿಲ್ಲ

12:30 AM Feb 05, 2019 | Team Udayavani |

ಹೊಸದಿಲ್ಲಿ: ದೇಶ ಮತ್ತು ವಿದೇಶಗಳಲ್ಲಿ ಭಾರತೀಯರು ಬಚ್ಚಿಟ್ಟಿರುವ ಕಪ್ಪು ಹಣದ ಬಗ್ಗೆ ಕೇಂದ್ರ ಸರಕಾರಕ್ಕೆ ನಾಲ್ಕು ವರ್ಷಗಳ ಹಿಂದೆ ಸಲ್ಲಿಸಲಾಗಿದ್ದ ವರದಿಗಳ ಪ್ರತಿಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ಪ್ರತಿಗಳನ್ನು ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದ ಮಾಹಿತಿ ಹಕ್ಕು ಅರ್ಜಿಗೆ ಸಚಿವಾಲಯ ಹೀಗೆ ಉತ್ತರಿ ಸಿದೆ. 2017ರಲ್ಲಿ ಈ ವರದಿ ಗಳನ್ನು “ಸಂಸತ್‌ನ ಹಣಕಾಸು ಸ್ಥಾಯೀ ಸಮಿತಿ’ಗೆ ಸಲ್ಲಿಸಲಾಗಿದೆ. ಹಾಗಾಗಿ, ವರದಿಗಳ ಬಹಿರಂಗ ಸಂಸತ್‌ ನಡಾವಳಿಗಳ ಉಲ್ಲಂಘನೆಯಾಗುವುದರಿಂದ ನಕಲು ಪ್ರತಿ ನೀಡಲು ಸಾಧ್ಯವಿಲ್ಲ ಎಂದು ಸಚಿವಾಲಯ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next