Advertisement

ಕಪ್ಪುಹಣ ನಿವಾರಣೆ ಪ್ರಮಾಣ ಗೊತ್ತಿಲ್ಲ

08:00 AM Sep 05, 2017 | Harsha Rao |

ನವದೆಹಲಿ: ನೋಟುಗಳ ಅಮಾನ್ಯದಿಂದ ಎಷ್ಟು ಪ್ರಮಾಣದಲ್ಲಿ ಕಪ್ಪುಹಣ ನಿವಾರಣೆಯಾಗಿದೆ ಎಂಬ ಮಾಹಿತಿ ಇಲ್ಲ. 15.28 ಕೋಟಿ ರೂ. ಮೌಲ್ಯದ ಹಳೆಯ 500 ರೂ. ಮತ್ತು 1 ಸಾವಿರ ರೂ. ಮುಖಬೆಲೆಯ ನೋಟುಗಳು ವಾಪಸ್‌ ಬಂದಿವೆ. ಹೀಗೆಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಹಣಕಾಸು ವಿಚಾರಕ್ಕಾಗಿನ ಸ್ಥಾಯಿ ಸಮಿತಿಗೆ ವಿವರಣೆ ನೀಡಿದೆ. 15.28 ಕೋಟಿ ಮೌಲ್ಯದಷ್ಟು ನೋಟುಗಳು ಬಂದಿವೆ ಎಂದು ಈಗ ಹೇಳಲಾಗಿದ್ದರೂ, ಮುಂದಿನ ದಿನಗಳಲ್ಲಿ ಈ ಮಾಹಿತಿ ಪರಿಷ್ಕರಣೆಗೆ ಒಳಗಾಗಬಹುದು ಎಂದು ಹೇಳಿದೆ. 

Advertisement

ಇಷ್ಟು ಮಾತ್ರವಲ್ಲದ ನೋಟುಗಳ ಅಮಾನ್ಯ ಎಂಬುದನ್ನು ನಿಗದಿತ ಅವಧಿಯಲ್ಲಿ ಮತ್ತೆ ಜಾರಿ ಮಾಡಲಾಗುತ್ತದೆಯೇ ಎಂಬ ಪ್ರಶ್ನೆಗೆ “ಗೊತ್ತಿಲ’É ಎಂದು ಹೇಳಿದೆ. ನೋಟುಗಳ ಎಣಿಕೆ ವೇಗದಲ್ಲಿ ಸಾಗುತ್ತಿದೆ. ಭಾರಿ ಪ್ರಮಾಣದ ಸಂಖ್ಯೆಯಲ್ಲಿ ನೋಟುಗಳು ಜಮೆಯಾಗಿರುವುದರಿಂದ ನಿಖರ ಸಂಖ್ಯೆ ನೀಡುವಲ್ಲಿ ವಿಳಂಬವಾಗಬಹುದು ಎಂದಿದೆ. ಕಳೆದ ವಾರ ಬಿಡುಗಡೆಯಾಗಿದ್ದ ಮಾಹಿತಿಯಲ್ಲಿ ಶೇ.99ರಷ್ಟು ಹಳೆಯ ನೋಟುಗಳು ವಾಪಸಾಗಿದೆ ಎಂದು ಆರ್‌ಬಿಐ ಹೇಳಿತ್ತು.
ಇದರ ಜತೆಗೆ ಜಿಡಿಪಿ, ಅಸಂಘಟಿತ ವಲಯಕ್ಕೆ 2016ರ ನ.8ರಂದು ಪ್ರಧಾನಿ ಮಾಡಿದ ಘೋಷಣೆಯಿಂದ ಆಗಿರುವ ಪರಿಣಾಮಗಳ ಬಗ್ಗೆಯೂ ವಿವರ ಇಲ್ಲ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next