ಪಣಜಿ : ನಾರಿ ಶಕ್ತಿ ದೇವಿಯ ಸ್ವರೂಪ. ನಾರಿ ಶಕ್ತಿಯ ಕೈಯಲ್ಲಿ ನಮ್ಮ ದೇಶ ಸುರಕ್ಷಿತವಾಗಿದೆ. ಮತ್ತೆ ಗೋವಾ ರಾಜ್ಯದಲ್ಲಿ ಮತ್ತು ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ಕೇಂದ್ರೀಯ ನಾಯಕಿ ಸುಖಪ್ರಿತ ಕೌರ್ ವಿಶ್ವಾಸ ವ್ಯಕ್ತಪಡಿಸಿದರು.
ಗೋವಾದ ಮಾಂದ್ರೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಮಾಂದ್ರೆ ಜಿ.ಪಂ ಸಭಾಗೃಹದಲ್ಲಿ ಆಯೋಜಿಸಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಒಬ್ಬ ಸಾಮಾನ್ಯ ಪಕ್ಷದ ಕಾರ್ಯಕರ್ತ ರಾಜ್ಯದ ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಯಾಗಬಲ್ಲ, ಇದು ಬಿಜೆಪಿಯ ಶಕ್ತಿಯಾಗಿದೆ.
ಇದನ್ನೂ ಓದಿ : ತಾರಗೊಳ್ಳಿ ನಾಗರಾಜ ರಾಯರ ಮನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ
ಕೇಂದ್ರ ಮಂತ್ರಿಮಂಡಲದಲ್ಲಿಯೂ ಮಹಿಳೆಯರಿಗೆ ಸ್ಥಾನ ನೀಡಲಾಗಿದೆ. ಮುಂಬರುವ ದಿನಗಳಲ್ಲಿಯೂ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಮಹಿಳೆಯರಿಗೆ ಸ್ಥಾನ ಲಭಿಸಲಿದೆ. ಮಹಿಳೆಯರ ಪ್ರಗತಿಗಾಗಿ ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮಾಂದ್ರೆ ಕ್ಷೇತ್ರದ ಶಾಸಕ ದಯಾನಂದ ಸೋಪಟೆ, ಮಾಂದ್ರೆ ಬಿಜೆಪಿ ಮಂಡಳದ ಅಧ್ಯಕ್ಷ ಮಧು ಪರಬ್ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ : ನಿಮ್ಮ ಭಾವನೆಯ ಆ ಮೂರು ಅಂಶಗಳ ಬಗ್ಗೆ ನಿಮಗೆ ಮಾಹಿತಿ ಇಲ್ಲ..! ಆ ಅಂಶಗಳ್ಯಾವುವು..?