Advertisement
ಬುಧವಾರ ಅಥವಾ ಗುರುವಾರವೇ ಪ್ರಮಾಣವಚನ ಸ್ವೀಕರಿಸಬೇಕೆಂಬ ತರಾತುರಿಯಲ್ಲಿದ್ದ ಬಿಎಸ್ ಯಡಿಯೂರಪ್ಪನವರ ಅತ್ಯುತ್ಸಾಹಕ್ಕೆ ಬಿಜೆಪಿ ಹೈಕಮಾಂಡ್ ತಣ್ಣಿರೇರಚಿದೆ. ಗುರುವಾರ ಬೆಳಗ್ಗೆ ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ನಿಯೋಗ ದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿಯಾಗಿದೆ.
Related Articles
Advertisement
ಕಾಂಗ್ರೆಸ್, ಜೆಡಿಎಸ್ ಬಂಡಾಯ ಶಾಸಕರ ಅನರ್ಹತೆಗೆ ಕಾಂಗ್ರೆಸ್ ದೂರು ನೀಡಿದ್ದ ಹಿನ್ನೆಲೆಯಲ್ಲಿ ಇದೀಗ ಚೆಂಡು ಸ್ಪೀಕರ್ ಅಂಗಳಕ್ಕೆ ಬಂದು ನಿಂತಿದೆ. ಅತೃಪ್ತ ಶಾಸಕರ ರಾಜೀನಾಮೆ ಸ್ವೀಕಾರವಾಗದ ಹಿನ್ನೆಲೆಯಲ್ಲಿ 225 ಸದನದ ಬಲದಲ್ಲಿ ಬಹುಮತ ಸಾಬೀತುಪಡಿಸಲು ಬೇಕಾಗಿರುವ ಮ್ಯಾಜಿಕ ಸಂಖ್ಯೆ 113 ಆಗಿರುತ್ತದೆ. ಸದ್ಯ ಬಿಜೆಪಿ ಬಳಿ ಇರುವುದು 105 ಹಾಗೂ ಪಕ್ಷೇತರರು( ಆರ್.ಶಂಕರ್ ಅನರ್ಹತೆಗೂ ಕಾಂಗ್ರೆಸ್ ದೂರು ನೀಡಿದೆ) ಸೇರಿ 107. ಒಂದು ವೇಳೆ ರಾಜ್ಯಪಾಲರ ಬಳಿ ತೆರಳಿ ಸರ್ಕಾರ ರಚನೆಗೆ ಅವಕಾಶ ಕೇಳಿದರೂ ಬಿಜೆಪಿ 113 ಶಾಸಕರ ಬಲ ತೋರಿಸಬೇಕಾಗುತ್ತದೆ.
ಏತನ್ಮಧ್ಯೆ ಜುಲೈ 31ರೊಳಗೆ ಧನವಿನಿಯೋಗ ವಿಧೇಯಕ ವಿಧಾನಸಭೆಯಲ್ಲಿ ಮಂಡನೆಯಾಗಲೇಬೇಕಾಗಿದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದು, ಒಂದು ವೇಳೆ ಧನವಿನಿಯೋಗ ವಿಧೇಯಕ ಮಂಡನೆಯಾಗದಿದ್ದಲ್ಲಿ, ಸರ್ಕಾರಿ ನೌಕರರಿಗೆ ಸಂಬಳ ಕೊಡಲಿಕ್ಕೂ ಆಗವುದಿಲ್ಲ, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆ ಕಾರಣವಾಗಲಿದೆ. ರಾಜ್ಯದಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ ಇಂತಹ ಸಾಂವಿಧಾನಿಕ ಬಿಕ್ಕಟ್ಟು ಎದುರಾಗಿದೆ ಎಂದು ತಿಳಿಸಿದ್ದಾರೆ.
ಜುಲೈ 31ರೊಳಗೆ ಬಿಜೆಪಿ ಸರ್ಕಾರ ರಚನೆಯಾಗಿ ಧನವಿನಿಯೋಗ ವಿಧೇಯಕವನ್ನು ಮಂಡನೆ ಮಾಡಬೇಕಾದ ತುರ್ತು ಅಗತ್ಯ ಬಂದೊದಗಿದೆ. ಈ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ನಡೆ ಮೇಲೆ ಹೆಚ್ಚಿನ ಕುತೂಹಲ ಮೂಡಿದೆ. ಸರ್ಕಾರ ರಚನೆಗೆ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡುತ್ತಾ? ಸ್ಪೀಕರ್ ತೀರ್ಮಾನದ ನಂತರ ಸರ್ಕಾರ ರಚನೆಯಾಗುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.