Advertisement

ಕಾಂಗ್ರೆಸ್‌ ಕಟ್ಟಿ ಬೆಳೆಸಿದ್ದನ್ನು ಬಿಜೆಪಿ ಮಾರುತ್ತಿದೆ: ಮಲ್ಲಿಕಾರ್ಜುನ ಖರ್ಗೆ

08:49 PM May 21, 2022 | Team Udayavani |

ಬೆಂಗಳೂರು: ಕಾಂಗ್ರೆಸ್‌ ದಶಕಗಳ ಕಾಲ ಕಟ್ಟಿ ಬೆಳೆಸಿರುವುದನ್ನು ಮಾರುತ್ತಿರುವುದೇ ಬಿಜೆಪಿ ಕೆಲಸವಾಗಿದೆ ಎಂದು ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

Advertisement

ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಎಸ್‌ಎನ್‌ಎಲ್‌ ಅನ್ನು ದುರ್ಬಲಗೊಳಿಸಿ ಬೇರೆಯವರಿಗೆ ಮಾರಲು ಹೊರಟಿದ್ದಾರೆ ಎಂದು ದೂರಿದರು.

ಬಿಜೆಪಿಯವರು ಕೇವಲ ಹೆಸರು ಬದಲಾವಣೆ ಮಾಡುವುದಷ್ಟೇ. ಇವರ ಸ್ವಂತ ಬಂಡವಾಳ ಯಾವುದೂ ಇಲ್ಲ. ಜೈಪುರದಲ್ಲಿ ಚಿಂತನ ಶಿಬಿರ ನಡೆಸುತ್ತಿದ್ದು, ಮೋದಿ ಅವರು ಮನೆ ಮನೆಗೆ ಹೋಗಿ ನಮ್ಮ ಕೆಲಸ ತಿಳಿಸಬೇಕು ಎಂದು ಹೇಳುತ್ತಿದ್ದಾರೆ. ಅಂದರೆ ಅವರು ಮಾಡಿರುವ ಕೆಲಸ ಜನರಿಗೆ ಗೊತ್ತೇ ಇಲ್ಲ. ಅವರು ಏನಾದರೂ ಮಾಡಿದ್ದರಲ್ಲವೇ ಗೊತ್ತಿರಲು ಎಂದು ಲೇವಡಿ ಮಾಡಿದರು.

ರಾಜೀವ್‌ ಗಾಂಧಿ ಯುವಕರಲ್ಲಿ ಚೈತನ್ಯ ಮೂಡಿಸಿದ ಮಹಾನ್‌ ನಾಯಕ. ವಿಯೆನ್ನಾದಲ್ಲಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮಾತನಾಡಿದಾಗ ವಿಶ್ವದ ಅನೇಕ ನಾಯಕರು ದೇಶಗಳು ಆಕರ್ಷಿತರಾಗಿ ನಮ್ಮ ಅಲಿಪ್ತ ನೀತಿಗೆ ಬದ್ಧವಾಗಿ ರಷ್ಯಾ ಅಥವಾ ಅಮೆರಿಕ ಪರವಾಗಿ ನಿಲ್ಲಬಾರದು ಎಂಬ ಧೋರಣೆಯನ್ನು ಮುಂದುವರಿಸಿದರು ಎಂದು ಸ್ಮರಿಸಿದರು.

ಕರ್ನಾಟಕದಲ್ಲಿ ಲಕ್ಷಾಂತರ ಎಕರೆ ಜಮೀನನ್ನು ಬಡವರಿಗೆ ಹಂಚಲಾಯಿತು. 6.60 ಲಕ್ಷ ಜನರಿಗೆ ಟ್ರಿಬ್ಯುನಲ್‌ ರಚಿಸಿ ಬಡವರಿಗೆ ಭೂಮಿ ಕೊಟ್ಟೆವು. ಕರಾವಳಿ ಭಾಗದಲ್ಲಿ ಲಕ್ಷಾಂತರ ಜನರಿಗೆ ಸಹಾಯ ಮಾಡಿದ್ದರೂ ಅವರೇ ಕಾಂಗ್ರೆಸ್‌ ವಿರುದ್ಧ ನಿಂತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

Advertisement

ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಮಾತನಾಡಿ, ಸಲೀಂ ಅಹ್ಮದ್‌, ಮಾಜಿ ಸಚಿವ ದಿನೇಶ್‌ ಗುಂಡೂರಾವ್‌,ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ, ಮಾಜಿ ಸಚಿವರಾದ ಯು.ಟಿ ಖಾದರ್‌, ಎಚ್‌.ಆಂಜನೇಯ ಉಪಸ್ಥಿತರಿದ್ದರು.

ಈಗ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪಠ್ಯ ಕ್ರಮ ಬದಲಾವಣೆ, ಸಮಾಜದಲ್ಲಿ ಬೆಂಕಿ ಹಚ್ಚುವುದು, ಸೂಲಿಬೆಲೆ ಹೇಳಿದ ಎಂಬ ಕಾರಣಕ್ಕೆ ಭಗತ್‌ ಸಿಂಗ್‌ ಅವರ ಪಠ್ಯವನ್ನು ತೆಗೆಯುತ್ತಿದ್ದೀರಿ. ಹೆಡೆYàವಾರ್‌ ನಡವಳಿಕೆಯಿಂದ ದೇಶ ಇಬ್ಭಾಗವಾಗುತ್ತಿದ್ದು, ಅಂಥವರ ವಿಚಾರವನ್ನು ಪಠ್ಯದಲ್ಲಿ ಯಾಕೆ ಸೇರಿಸಬೇಕು? ನಾರಾಯಣ ಗುರು ಅವರಂತಹ ವ್ಯಕ್ತಿಗಳ ಮಾಹಿತಿ ಮಕ್ಕಳಿಗೆ ನೀಡುತ್ತಿಲ್ಲ.
-ಮಲ್ಲಿಕಾರ್ಜುನ ಖರ್ಗೆ

 

Advertisement

Udayavani is now on Telegram. Click here to join our channel and stay updated with the latest news.

Next