ಅವರು ರಾಷ್ಟ್ರಮಟ್ಟದ ವಿಸ್ತಾರಕರಾಗಿ ದೇಶಾದ್ಯಂತ ಪ್ರವಾಸ ಕೈಗೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿದ್ದರೆ, ಇತ್ತ ರಾಜ್ಯದಲ್ಲಿ ಬೂತ್ ಮಟ್ಟದಿಂದ ಪಕ್ಷ ಬಲವರ್ಧನೆಗೆ ನೇಮಕಗೊಂಡಿರುವ ವಿಸ್ತಾರಕರಿಗೆ ಹಂಚಿಕೆ ಮಾಡಿರುವ ಕೆಲಸಗಳಿವು. ಮುಂದಿನ ವರ್ಷ ವಿಧಾನಸಭೆ ಚುನಾವಣೆ ಬರಲಿರುವುದರಿಂದ ಬೂತ್ ಮಟ್ಟದಿಂದ ಪಕ್ಷವನ್ನು ಸದೃಢಗೊಳಿಸುವ ಉದ್ದೇಶದಿಂದ ಜುಲೈ 1 ರಿಂದ 15 ದಿನಗಳ ಕಾಲ ರಾಜ್ಯಾದ್ಯಂತ ಬಿಜೆಪಿ ವಿಸ್ತಾರಕರು ಕಾರ್ಯಾಚರಣೆಗೆ ಇಳಿಯಲಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ವಿಸ್ತಾರಕರನ್ನು ನೇಮಿಸಲಾಗಿದ್ದು, ಬುಧವಾರ
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಚೇರಿಯಲ್ಲಿ ಜಿಲ್ಲಾ ಮಟ್ಟದ ವಿಸ್ತಾರಕರ ಸಭೆ ನಡೆಸಲಾಯಿತು.
Advertisement
ಸಭೆಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಪಕ್ಷದ ಮುಖಂಡರು 15 ದಿನಗಳ ವಿಸ್ತಾರಕರು ಬೂತ್ ಮಟ್ಟದಲ್ಲಿ ತಮಗೆ ವಹಿಸಿದ ಕೆಲಸ ಮಾಡಿದರೆ ಪಕ್ಷಕ್ಕೆ ದೊಡ್ಡ ಶಕ್ತಿ ಬರಲಿದೆ. ಅದು ರಾಜ್ಯದಲ್ಲಿಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ನೆರವಾಗಲಿದೆ ಎಂದು ಹೇಳಿದರು.
ವಿಸ್ತಾರಕರಾಗಿ ಕಾರ್ಯ ನಿರ್ವಹಿಸುವ ವೇಳೆ ಪ್ರತಿನಿತ್ಯ 25 ಮನೆಗಳನ್ನು ಸಂಪರ್ಕ ಮಾಡಿ, ಎಲ್ಲಾ ಮನೆಗಳಿಗೂ ಕರಪತ್ರ ಹಂಚಬೇಕು. ಮನೆಯವರಿಂದ ಮೊಬೈಲ್ ಸಂಖ್ಯೆ ಪಡೆದು ಆ ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಹೊಸದಾಗಿ 50 ಮಂದಿಯನ್ನು ಪಕ್ಷಕ್ಕೆ ಸದಸ್ಯರಾಗಿ ನೋಂದಣಿ ಮಾಡಿಸಬೇಕು. 15 ದಿನದಲ್ಲಿ ಐದು ದಿನ ಸ್ವತ್ಛ
ಭಾರತ ಅಭಿಯಾನ ಕೈಗೊಳ್ಳಬೇಕು. ಯಾರಿಗೆ ಯಾವ ಕ್ಷೇತ್ರದ ಜವಾಬ್ದಾರಿ ನೀಡಲಾಗಿರುತ್ತದೆಯೋ ಅಲ್ಲಿನ ವ್ಯಾಪಾರಸ್ಥರು, ಪರಿಶಿಷ್ಟ ಜಾತಿ ಮತ್ತು ಪಂಗಡದ ಮುಖಂಡರ ಸಭೆ ನಡೆಸಬೇಕು. ಮಹಿಳೆಯರು, ವಿದ್ಯಾರ್ಥಿಗಳು, ಧಾರ್ಮಿಕ ಮುಖಂಡರು, ಕ್ರೀಡಾತಂಡಗಳ ಜತೆ ಸಮಾಲೋಚನೆ ನಡೆಸಿ ಪಕ್ಷದ ಸಾಧನೆಗಳನ್ನು ತಿಳಿಸಬೇಕು. ಅನ್ಯಪಕ್ಷದ ನಾಯಕರೊಂದಿಗೆ ಸಭೆ, ಎನ್ ಜಿಒಗಳೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು ಎಂದು ಸೂಚನೆ ನೀಡಿದರು.
Related Articles
ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರಾಜ್ಯಕ್ಕೆ ಬಂದಾಗ ಈ ಎಲ್ಲಾ ವರದಿಗಳನ್ನು ಕ್ರೋಢೀಕರಿಸಿ ಅವರಿಗೆ ನೀಡಲಾಗುವುದು ಎಂದು ಹೇಳಿದರು. ಬೂತ್‌ಮಟ್ಟದಲ್ಲಿನ ಪ್ರಮುಖರು ಯಾವ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ ಎಂಬ ಮಾಹಿತಿ ಪಡೆಯುವುದರ ಜತೆಗೆ ಅತಿ ಹೆಚ್ಚಿನ ಮತಗಳು ಯಾವ ಪಕ್ಷಕ್ಕೆ ಹೋಗುತ್ತದೆ ಎಂಬುದನ್ನು ತಿಳಿದು ಅದು ಬಿಜೆಪಿಯೇತರ ಪಕ್ಷಕ್ಕೆ ಹೋಗುತ್ತಿದ್ದರೆ ಅವರ ಮನವೊಲಿಸಿ ಪಕ್ಷದತ್ತ ಸೆಳೆಯುವ ಕೆಲಸ ಮಾಡಬೇಕು ಎಂದು ಸೂಚಿಸಿದ ಯಡಿಯೂರಪ್ಪ, ಸ್ಥಳೀಯ ಮುಖಂಡರನ್ನು ಗುರುತಿಸಿ ಜವಾಬ್ದಾರಿ ನೀಡಿದರೆ ಪ್ರತಿ ಬೂತ್‌ನ ಒಟ್ಟು ಮತಗಳ
ಪೈಕಿ ಶೇ.50 ರಿಂದ 60ರಷ್ಟು ಮತಗಳನ್ನು ಪಡೆಯಬಹುದು. ಇದನ್ನು ಪ್ರತಿಯೊಬ್ಬರು ಗಮನದಲ್ಲಿಟ್ಟುಕೊಳ್ಳಬೇಕು ಎಂದರು.
Advertisement
ಸಂಸದ ಪ್ರಹ್ಲಾದ ಜೋಶಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅರವಿಂದ ಲಿಂಬಾವಳಿ,ಎನ್.ರವಿಕುಮಾರ್ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದಿದ್ದ ಪ್ರಮುಖ ವಿಸ್ತಾರಕರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಕೇಂದ್ರದ ಸಾಧನೆ ಮನವರಿಕೆ ಮಾಡಿ: ಬಿಎಸ್ವೈಬಿಜೆಪಿ ವಿಸ್ತಾರಕರಾಗಿ ನೇಮಕಗೊಂಡವರು ಪಕ್ಷ ಸಂಘಟನೆ ಜತೆಗೆ ರಾಜ್ಯದ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳು ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು ಎಂದು ಬಿ.ಎಸ್.ಯಡಿಯೂರಪ್ಪ ಸೂಚಿಸಿದ್ದಾರೆ. ಪ್ರಮುಖವಾಗಿ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೇಳುವ ಸುಳ್ಳುಗಳನ್ನು ಜನರಿಗೆ ಮನವರಿಕೆ ಮಾಡುವ ಕೆಲಸಕ್ಕೆ ಮುಂದಾಗಬೇಕು. ಅನ್ನಭಾಗ್ಯ ಮೂಲತಃ ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಕೇಂದ್ರ ಸರ್ಕಾರ ಅಕ್ಕಿಯನ್ನು 32 ರೂ.ಗೆ ಖರೀದಿಸಿ 3 ರೂ.ಗೆ ಮತ್ತು 22 ರೂ.ಗೆ ಗೋಧಿ ಖರೀದಿಸಿ 2 ರೂ.ಗೆ ರಾಜ್ಯಕ್ಕೆ ನೀಡುತ್ತದೆ. ಆದರೆ, ಇದನ್ನು ಮರೆಮಾಚಿರುವ ರಾಜ್ಯ ಸರ್ಕಾರ ಯೋಜನೆ ಸಂಪೂರ್ಣ ನಮ್ಮದು ಎಂದು ಹೇಳಿಕೊಂಡು ಲಾಭ ಪಡೆಯಲು ಪ್ರಯತ್ನಿಸುತ್ತಿದೆ. ಈ ಸತ್ಯಾಂಶವನ್ನು ಜನರಿಗೆ ತಿಳಿಸಬೇಕು ಎಂದರು.