Advertisement

ಬಿಜೆಪಿ ರಾಜ್ಯಸಭೆ ಸ್ಥಾನಗಳ ಸಂಖ್ಯೆಗೆ ಫ‌ಲಿತಾಂಶ ಪೆಟ್ಟು

07:00 AM Dec 20, 2017 | Harsha Rao |

ನವದೆಹಲಿ: ಗುಜರಾತ್‌ ಮತ್ತು ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ. ಆದರೆ ಗುಜರಾತ್‌ ಫ‌ಲಿತಾಂಶದಿಂದಾಗಿ ಬಿಜೆಪಿಗೆ ರಾಜ್ಯಸಭೆಯಲ್ಲಿ ಹೆಚ್ಚಿನ ಸಂಖ್ಯೆಯ ತನ್ನ ಸದಸ್ಯರನ್ನು ಕಾಯ್ದುಕೊಂಡು ಬರುವುದು ಕಷ್ಟವಾದೀತು. 2018ರ  ಮಾರ್ಚ್‌ ಒಳಗಾಗಿ ಕರ್ನಾಟಕವೂ ಸೇರಿದಂತೆ 14 ರಾಜ್ಯಗಳಿಂದ 50ಕ್ಕೂ ಹೆಚ್ಚು ಮಂದಿ ಸದಸ್ಯರು ನಿವೃತ್ತರಾಗಲಿದ್ದಾರೆ. ವಿಶೇಷವಾಗಿ ಹೇಳುವುದಿದ್ದರೆ 2018ರ ಏ.2ರ ಅವಧಿಗೆ ಬಿಜೆಪಿಯ ನಾಲ್ವರು ಸಂಸದರಾದ ಅರುಣ್‌ ಜೇಟ್ಲಿ, ಪುರುಷೋತ್ತಮ ರುಪಾಲ, ಮಾನ್ಸುಖ್‌ ಮಾಂಡವ್ಯ ಮತ್ತು ಶಂಕರ ಭಾಯಿ ವೇಗಡ್‌ ಸದಸ್ಯತ್ವದ ಅವಧಿ ಪೂರೈಸಲಿದ್ದಾರೆ ಎಂದು “ದ ಟೈಮ್ಸ್‌ ಆಫ್ ಇಂಡಿಯಾ’ ವರದಿ ಮಾಡಿದೆ. ಸದ್ಯ ಗುಜರಾತ್‌ನಿಂದ ಒಟ್ಟು 11 ಮಂದಿ ಮೇಲ್ಮನೆಯನ್ನು ಪ್ರತಿನಿಧಿಸುತ್ತಿದ್ದಾರೆ. ಈ ಪೈಕಿ 9 ಮಂದಿ ಬಿಜೆಪಿಯವರೇ ಆಗಿದ್ದಾರೆ. ಮುಂದಿನ ವರ್ಷ ನಡೆಯುವ ಚುನಾವಣೆ ಬಳಿಕ ಬಿಜೆಪಿ ಸಂಸದರ ಸ್ಥಾನ ಏಳಕ್ಕೆ ಕುಸಿಯಲಿದೆ. 

Advertisement

ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಹಿಮಾಚಲ ಪ್ರದೇಶದಿಂದ ರಾಜ್ಯಸಭೆಯನ್ನು ಪ್ರತಿನಿಧಿಸುತ್ತಿದ್ದು, ಅವರ ಅವಧಿ 2018ರ ಏ.2ರಂದು ಮುಕ್ತಾಯವಾಗಲಿದೆ. ಉತ್ತರ ಪ್ರದೇಶದಿಂದ ಏಳು ಮತ್ತು ಮಹಾರಾಷ್ಟ್ರದಿಂದ ಇಬ್ಬರು ಸದಸ್ಯರು ಆಯ್ಕೆಯಾದಾಗ ಬಿಜೆಪಿಯ ಸಂಖ್ಯಾ ಬಲ 84ಕ್ಕೆ ಏರಿಕೆಯಾಗುತ್ತದೆ. ಮುಂದಿನ ವರ್ಷ 100ಕ್ಕೆ ಏರಿಕೆಯಾಗುವ ಗುರಿ ಹಾಕಿಕೊಂಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next