Advertisement

ಬಿಜೆಪಿಗೆ ಜನ ಬಹುಮತ ಕೊಟ್ಟಿದ್ದಾರೆ,ಸೋಲಿನ ಹೊಣೆ ನಾನೇ ಹೊರುವೆ;ದಿನೇಶ್ ಗುಂಡೂರಾವ್

09:21 AM May 26, 2019 | Nagendra Trasi |

ಬೆಂಗಳೂರು: ಲೋಕಸಭೆ ಚುನಾವಣೆ ಫಲಿತಾಂಶ ಆಶ್ಚರ್ಯ ತಂದಿದೆ. ಇಷ್ಟು ಕಡಿಮೆ ಸ್ಥಾನ ಬರುತ್ತದೆ ಎಂದು ನಾವು ಕನಸಿನಲ್ಲೂ ಊಹಿಸಿರಲಿಲ್ಲ. ಕೆಪಿಸಿಸಿ ಅಧ್ಯಕ್ಷನಾಗಿ ಸೋಲಿನ ನೈತಿಕ ಹೊಣೆಯನ್ನು ನಾನು ಹೊತ್ತುಕೊಳ್ಳುತ್ತೇನೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

Advertisement

ಶನಿವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷನಾಗಿ ನನಗೆ ಪಕ್ಷ ಎಲ್ಲಾ ಅಧಿಕಾರ, ಜವಾಬ್ದಾರಿ ನೀಡಿತ್ತು. ಮೈತ್ರಿ ಪ್ರಯೋಗ ನಡೆಸುವ ಅವಕಾಶ ರಾಹುಲ್ ಗಾಂಧಿ ನೀಡಿದ್ದರು. ನಂತರ ನಮ್ಮ ಪಕ್ಷದ ಮುಖಂಡರ ಒಗ್ಗೂಡಿಸಿ ಒಟ್ಟಾಗಿ ಹೋಗುವ ಕೆಲಸ ಮಾಡಿದ್ದೇವೆ. ಬಿಜೆಪಿಯವರು ಮೈತ್ರಿಯನ್ನು ಒಡೆಯುವ ಕೆಲಸ ಕೂಡಾ ಮಾಡುತ್ತಿದ್ದರು ಎಂದು ಆರೋಪಿಸಿದರು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಒಟ್ಟಾಗಿ ಸ್ಪರ್ಧೆ ಮಾಡಿದ್ದೇವೆ ಪ್ರಚಾರ ಕೂಡ ಒಟ್ಟಿಗೆ ಮಾಡಿದ್ದೇವೆ. ಆದರೆ ನಮ್ಮ ನಿರೀಕ್ಷೆಯನ್ನು ಮುಟ್ಟಲು ಆಗಲಿಲ್ಲ, ದೇಶದಲ್ಲಿ ಬಿಜೆಪಿಗೆ ಜನ ಬಹುಮತ ಕೊಟ್ಟು ಮತ್ತೊಮ್ಮೆ ಅಧಿಕಾರ ಕೊಟ್ಟಿದ್ದಾರೆ. ಈ ಫಲಿತಾಂಶ ವನ್ನ ನಾನು ಗೌರವಿಸುತ್ತೇನೆ. ಬಿಜೆಪಿಯ ಈ ದೊಡ್ಡ ಗೆಲುವಿಗೆ, ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಮತ್ತೊಮ್ಮೆ ನಮ್ಮ ಕೆಲಸ ಇಟ್ಟು ಜನರ ಮುಂದೆ ಹೋಗುತ್ತೇವೆ. ಫಲಿತಾಂಶಕ್ಕೆ ಯಾರು ಕೂಡ ಧೃತಿ ಗೆಡಬೇಕಿಲ್ಲ. ಚುನಾವಣೆಯ ಫಲಿತಾಂಶ, ಪ್ರಚಾರ, ಯಾಕೆ ಹೆಚ್ಚು ಸೀಟ್ ಗೆಲ್ಲುವುದಕ್ಕೆ ಆಗಲಿಲ್ಲ ಎಂಬುದರ ಕಾರಣವನ್ನ ನಾನು ಎಐಸಿಸಿ ಅಧ್ಯಕ್ಷರಿಗೆ ಮಾಹಿತಿ ಕೊಡುತ್ತಿದ್ದೇನೆ. ಅವರು ಮುಂದೆ ಯಾವುದೇ ತೀರ್ಮಾನ ತೆಗೆದಕೊಂಡರು ಒಪ್ಪಿಕೊಳ್ಳುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next