Advertisement

ಕುರುಗೋಡಲ್ಲಿ ನೀರಸ ಪ್ರತಿಕ್ರಿಯೆ

06:33 AM Jan 09, 2019 | |

ಕುರುಗೋಡು: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಮಂಗಳವಾರ ಕರೆ ನೀಡಿದ್ದ ಭಾರತ್‌ ಬಂದ್‌ಗೆ ಕುರುಗೋಡು ಪಟ್ಟಣದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಗ್ಗೆಯಿಂದ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಮಧ್ಯಾಹ್ನ ನಂತರ ಎಂದಿನಂತೆ ಕಾರ್ಯನಿರ್ವಹಿಸಿದವು. ಶಾಲಾ ಕಾಲೇಜುಗಳು, ಬ್ಯಾಂಕ್‌ಗಳಿಗೆ ರಜೆ ಘೋಷಿಸಲಾಗಿತ್ತು. ಕೆಆರ್‌ಟಿಸಿ ಬಸ್‌ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಬೇರೆ ವಾಹನಗಳ ಸಂಚಾರ ಎಂದಿನಂತೆ ಇತ್ತು.

Advertisement

ಪ್ರತಿಭಟನೆ: ವಿವಿಧ ಸಂಘಟನೆಗಳ ಮುಖಂಡರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಶ್ರೀದೊಡ್ಡಬಸವೇಶ್ವರ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಬಾದನಹಟ್ಟಿ ರಸ್ತೆ ಮೂಲಕ ಮುಖ್ಯ ವೃತ್ತದಲ್ಲಿ ಸಮಾವೇಶಗೊಂಡು ಮುಷ್ಕರ ನಡೆಸಿದರು. ಈ ಸಂದರ್ಭದಲ್ಲಿ ಪ್ರಾಂತ ರೈತಸಂಘದ ಜಿಲ್ಲಾಧ್ಯಕ್ಷ ವಿ.ಎಸ್‌.ಶಿವಶಂಕರ್‌, ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ಗಾಳಿಬಸವರಾಜ್‌, ಕೃಷಿ ಕೂಲಿಕಾರ ಸಂಘದ ತಾಲೂಕು ಕಾರ್ಯದರ್ಶಿ ಎ.ಮಂಜುನಾಥ್‌, ಎನ್‌.ಸೋಮಪ್ಪ, ಹುಲೆಪ್ಪ, ರಾಮಾಂಜಿನೇಯ, ನಾಗರತ್ನಮ್ಮ. ನಾಗಮ್ಮ, ಗೀತಮ್ಮ, ವಿಮುಲ, ಕೆ.ಯಂಕಮ್ಮ ಇನ್ನಿತರರಿದ್ದರು. 
 
ಕುಡಿತಿನಿಯಲ್ಲಿ ಪ್ರತಿಭಟನಾ ಮೆರವಣಿಗೆ: ಸಮೀಪದ ಕುಡಿತಿನಿ ಪಟ್ಟಣದಲ್ಲಿ ಅಖೀಲ ಭಾರತ ಸಾರ್ವತ್ರಿಕ ಮುಷ್ಕರದ ಹಿನ್ನೆಲೆಯಲ್ಲಿ ಸಿಐಟಿಯು ಸಂಘಟನೆ ನೇತೃತ್ವದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಸಿಐಟಿಯುನ ಕೆಪಿಸಿಎಲ್‌ ಕಾರ್ಮಿಕ ಅಧ್ಯಕ್ಷ ಯಲ್ಲಾಪುರ ತಿಪ್ಪೇಸ್ವಾಮಿ, ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಅಜ್ಜಿ ಶ್ರೀನಿವಾಸ್‌, ಭೂಸಂತ್ರಸ್ತರ ಹೋರಾಟ ಸಮಿತಿ ಅಧ್ಯಕ್ಷ ಕೆ.ಪೋಲಪ್ಪ, ಕನಕದಾಸ ಯುವಕ ಸಂಘದ ಅಧ್ಯಕ್ಷ ಟಿ.ಕೆ.ಕಾಮೇಶ್‌, ಕರವೇ ಅಧ್ಯಕ್ಷ ಎ.ರಾಜಪ್ಪ, ಜಯಕರ್ನಾಟಕ ಸಂಘದ ಅಧ್ಯಕ್ಷ ಲೋಕೇಶ್‌, ಮುಖಂಡ ರಂಗನಾಥ್‌, ರಾಜು, ಹಳ್ಳಿಕಟ್ಟಿ ತಿಮ್ಮಪ್ಪ, ಚಂದ್ರಾಯಿ ದೊಡ್ಡಬಸಪ್ಪ, ಎಂ.ಪಿ.ತಿಮ್ಮಪ್ಪ, ಪಾಂಡುರಂಗ, ವೆಂಕಟೇಶ್‌ ಇನ್ನಿತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next