ಬೆಂಗಳೂರು: ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ಬಿಟ್ಕಾಯಿನ್ ಹಗರಣದ ಜಾಡು ಹಿಡಿಯಲು ಹೊರಟಿರುವ ವಿಶೇಷ ತನಿಖಾ ದಳವು (ಎಸ್‌ಐಟಿ) ಪ್ರಕ ರಣ ದಲ್ಲಿ ಶಾಮೀಲಾದವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಸಿಐಡಿ ವಿಭಾಗದಲ್ಲಿರುವ ಬಿಟ್ ಕಾಯಿನ್ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡವು ಈ ಹಿಂದೆ ಪ್ರಕರಣದಲ್ಲಿ ಶಾಮೀಲಾದವರು ಹಾಗೂ ಅವರಿಗೆ ಸಹಕಾರ ನೀಡಿದವರನ್ನು ವಿಚಾರಣೆ ನಡೆಸಲು ಸಿಐಡಿ ಕಚೇರಿಗೆ ಕರೆಸಿದೆ. ವಿಚಾರಣೆಗೆ ಬಂದಿದ್ದ ಕೆಲವು ಮಂದಿಯನ್ನು ಎಸ್ ಐಟಿ ಅಧಿಕಾರಿಗಳು ವಶಕ್ಕೆ ಪಡೆಯುವ ಸಾಧ್ಯತೆಗಳಿವೆ. ಒಂದು ಮೂಲಗಳ ಪ್ರಕಾರ ಬಿಟ್ ಕಾಯಿನ್ ಕೇಸ್‌ನಲ್ಲಿ ಎಸ್‌ಐಟಿ ತಂಡಕ್ಕೆ ಕೆಲವು ಮಹತ್ವದ ಸುಳಿವು ಸಿಕ್ಕಿದೆ ಎಂದು ಗೊತ್ತಾಗಿದೆ.
ಹಿಂದಿನ ತನಿಖಾಧಿಕಾರಿಗಳ ಅವದಿ ಯಲ್ಲಿ ಸಾಕ್ಷ್ಯ ನಾಶ ?: ಕೆಂಪೇಗೌಡನಗರ ಠಾಣೆಯ ಪ್ರಕರಣದ ತನಿಖೆ ವೇಳೆ ವಶ ಪಡಿಸಿಕೊಂಡ ಎಲೆಕ್ಟ್ರಾನಿಕ್ ಉಪಕರಣ ಗಳಲ್ಲಿ ಹಿಂದಿನ ತನಿಖಾಧಿಕಾರಿಗಳ ಅವಧಿ ಯಲ್ಲಿ ಸಾಕ್ಷ್ಯಾಧಾರ ನಾಶಪಡಿಸಿರುವುದು, ತಿರುಚಿರುವ ಬಗ್ಗೆ ಎಫ್ಎಸ್ ಎಲ್ ವರದಿಯಲ್ಲಿ ಕಂಡು ಬಂದಿತ್ತು. ಇದರ ಬೆನ್ನಲ್ಲೇ ಈ ಹಿಂದೆ ಪ್ರಕರಣದ ತನಿಖೆಯಲ್ಲಿ ಭಾಗಿಯಾಗಿದ್ದ ಪೊಲೀಸ್ ಅಧಿಕಾರಿಗಳ ಮನೆ, ತನಿಖೆಯಲ್ಲಿ ನೆರವಾಗಿದ್ದ ತಾಂತ್ರಿಕ ಪರಿಣಿತರ ಮನೆ, ಕಚೇರಿ ಸೇರಿ ಬೆಂಗಳೂರು, ಗೋವಾ ಹಾಗೂ ಪಶ್ಚಿಮ ಬಂಗಾಳದಲ್ಲಿ 11 ಕಡೆ ಎಸ್‌ಐಟಿ ಶೋಧನೆ ನಡೆಸಿ ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆ, ಎಲೆಕ್ಟ್ರಾನಿಕ್ ಉಪಕರಣ ವಶಪಡಿಸಿಕೊಂಡಿತ್ತು. ಈ ಪೈಕಿ ಕೆಲ ಎಲೆಕ್ಟ್ರಾನಿಕ್ ಉಪಕರಣಗಳನ್ನು ತಾಂತ್ರಿಕ ಪರಿಣಿತರಿಂದ ಪರಿಶೀಲಿಸಿ ಹೆಚ್ಚುವರಿ ಸಾಕ್ಷ್ಯಾಧಾರ ಕಲೆಹಾಕಲಾಗುತ್ತಿದೆ. ಐರ್ಲೆಂಡ್, ಸಿಷೆಲ್ಸ್, ಸ್ವಿಡ್ಜರ್ಲ್ಯಾಂಡ್ ದೇಶಗಳಿಂದ ಕೆಲವೊಂದು ಮಹತ್ವದ ಮಾಹಿತಿ ಬರಬೇಕಿದೆ.
ವಿದೇಶಗಳ ಕೆಲವೊಂದು ಸಂಸ್ಥೆಗಳಿಂದ ಕ್ರಿಪ್ಟೋ ಕರೆನ್ಸಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಬೇಕಾಗಿದೆ.