Advertisement

ದೇಶದ ದೊಡ್ಡ ಜೋಕರ್‌ ರಾಹುಲ್‌ ಗಾಂಧಿ

11:44 AM Oct 12, 2021 | Shwetha M |

ತಾಳಿಕೋಟೆ: ದೇಶದಲ್ಲಿಯೇ ಅತಿ ದೊಡ್ಡ ಜೋಕರ್‌ ಎಂದು ದೇಶದ ಜನರಿಂದಲೇ ಖ್ಯಾತಿ ಪಡೆದವರು ರಾಹುಲ್‌ ಗಾಂಧಿ ಆಗಿದ್ದಾರೆಂದು ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷ ಆರ್.ಎಸ್‌. ಪಾಟೀಲ (ಕೂಚಬಾಳ) ಅವರು ರಾಜು ಆಲಗೂರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

Advertisement

ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ನಳೀನ್‌ಕುಮಾರ ಕಟೀಲ್‌ ಅವರು ಬರುವ ದಿನಗಳಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಎಂ.ಬಿ. ಪಾಟೀಲರು ಬಿಜೆಪಿಗೆ ಸೇರ್ಪಡೆಯಾದರೂ ಅಚ್ಚರಿ ಪಡಬೇಕಿಲ್ಲ ಎಂದು ಭಾಷಣದಲ್ಲಿ ಉಚ್ಚರಿಸಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷರಾದ ರಾಜು ಆಲಗೂರ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಜೋಕರ್‌ ಎಂದು ಜರಿದಿದ್ದರು.

ಈ ಹೇಳಿಕೆಗೆ ತಿರುಗೇಟು ನೀಡಿದ ಕೂಚಬಾಳ ಅವರು ರಾಜು ಆಲಗೂರ ಅವರು ಎರಡು ಬಾರಿ ಶಾಸಕರಾದವರು, ಸಭ್ಯ ರಾಜಕಾರಣಿಯಾಗಿರುವ ಆಲಗೂರ ಅಸಂವಿಧಾನಿಕ ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ಕಾಂಗ್ರೆಸ್‌ ಪಕ್ಷದ ಸ್ಥಿತಿಗತಿ ಬಗ್ಗೆ ಆಲಗೂರ ಅವರು ಅವಲೋಕನ ಮಾಡಿಕೊಳ್ಳಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷವೆಂಬುದು ಇರಬೇಕು, ಆದರೆ ಕಾಂಗ್ರೆಸ್‌ ಪಕ್ಷದ ದುಸ್ಥಿತಿ ಹೇಗಿದೆ ಎಂದರೆ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲು ಸಹ ಯೋಗ್ಯತೆಯನ್ನು ಕಳೆದುಕೊಂಡಿದೆ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ಮೂರು ವರ್ಷದಿಂದ ಜಿಲ್ಲೆಗಿಲ್ಲ ಬರ ಬಾಧೆ!

ಪ್ರಬಲವಾಗಿದ್ದ ಕಾಂಗ್ರೆಸ್‌ ಪಕ್ಷ ಈ ದುಸ್ಥಿತಿಗೆ ಬರಲು ಕಾರಣವೇನೆಂಬುದು ಅವಲೋಕನ ಮಾಡಿಕೊಳ್ಳಲಿ. ದೇಶದ ದೊಡ್ಡ ಜೋಕರ್‌ ಎಂದು ಬಿಂಬಿತಗೊಂಡಿರುವ ರಾಹುಲ್‌ ಗಾಂಧಿ ಅವರಿಗೆ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಿ ಮಾಡುವ ಶಕ್ತಿ ನಾಯಕರಿಗಿಲ್ಲ ಎಂದ ಅವರು, ಸಿಂದಗಿ ವಿಧಾನ ಸಭಾ ಉಪ ಚುನಾವಣೆಯಲ್ಲಿ ವಿಜಯ ಪತಾಕೆ ಹಾರಿಸುತ್ತೇವೆ ಎಂದರು.

Advertisement

ಕಾಂಗ್ರೆಸ್‌ ಪಕ್ಷದ ಅನೇಕ ನಾಯಕರು ಅಧಿಕಾರವಿದ್ದರೂ ಕೂಡಾ ಅಧಿಕಾರವನ್ನು ಬಿಟ್ಟು ಭಾರತೀಯ ಜನತಾ ಪಕ್ಷಕ್ಕೆ ಸೇರಿಕೊಳ್ಳುತ್ತಿದ್ದಾರೆ. ಯಾಕೆ ಎಂಬುದನ್ನು ಕಾಂಗ್ರೇಸ್‌ ಜಿಲ್ಲಾಧ್ಯಕ್ಷ ರಾಜು ಆಲಗೂರ ಅವರು ಅವಲೋಕನ ಮಾಡಿಕೊಳ್ಳಲಿ ಎಂದರು. ಮುಂದಿನ ದಿನಗಳಲ್ಲಾದರೂ ಕನಿಷ್ಠ ವಿರೋಧ ಪಕ್ಷದಲ್ಲಿ ಕೂಡುವಂತಹ ಶಕ್ತಿ ಕಾಂಗ್ರೇಸ್‌ ಪಕ್ಷ ಬರಲಿ. ಹಾಗಂತ ನಮಗೆ ಸಹಾಯ ಮಾಡುವುದಕ್ಕೆ ಬರುವುದಿಲ್ಲ ಎಂದು ಲೇವಡಿ ಮಾಡಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಭುಗೌಡ ಅಸ್ಕಿ, ಬಿಜೆಪಿ ಮಂಡಲ ಅಧ್ಯಕ್ಷ ಪರಶುರಾಮ ಪವಾರ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಶೆಟ್ಟಿ, ನಗರ ಘಟಕದ ಅಧ್ಯಕ್ಷ ರಾಘವೇಂದ್ರ ಚವ್ಹಾಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next