Advertisement

ಭಗವದ್ಗೀತೆ ಭಾವಾರ್ಥ ಮಾತೃಭಾಷೆಯಲ್ಲಿ ಬೆಸೆಯಲಿ: ಡಾ|ವೀರೇಂದ್ರ ಹೆಗ್ಗಡೆ

07:08 AM Jun 22, 2021 | Team Udayavani |

ಮುಂಬಯಿ: ವಿಶ್ವಾದ್ಯಂತ ಬಹಳಷ್ಟು ಜನ ಹಿಂದೂಗಳಿದ್ದರೂ ಧರ್ಮದ ಸಾರಾಂಶ ತಿಳಿಯಪಡಿಸಲು ಹಿಂದೂ ಧರ್ಮದ ಪ್ರಾತಿನಿಧ್ಯವಾಗಿರುವ ಗ್ರಂಥವಿದ್ದರೆ ಅದು ಭಗವದ್ಗೀತೆ. ಹಿಂದೂಗಳಿಗೆ ವೇದಗಳು, ಸ್ಮೃತಿಗಳು, ಪುರಾಣಗಳಿವೆ. ಆದರೆ ಅದು ಅರ್ಥವಾಗಿ ಮತ್ತು ವಿಸ್ತಾರವಾಗಿ ವಿವರಿಸಲು ಅಸಾಧ್ಯ. ಚುಟುಕು, ಸರ್ವರೂ ತಿಳಿಯುವ ಮತ್ತು ನೇರವಾಗಿ ಹಿಂದೂ ಧರ್ಮದ ಸಾರಾಂಶ ಅರ್ಥೈಸಲು ಸಾಧ್ಯವಿರುವ ಪವಿತ್ರ ಗ್ರಂಥವೇ ಭಗವದ್ಗೀತೆಯಾಗಿದೆ. ಪ್ರಶ್ನೋತ್ತರ ರೂಪದಲ್ಲಿರುವ ಪವಿತ್ರ ಭಗವದ್ಗೀತೆಯು ನಮ್ಮ ಜೀವನದ ಎಲ್ಲ ಪ್ರಶ್ನೆಗಳಿಗೂ ಉತ್ತರ ಕೊಡುವ ಸಾಮರ್ಥ್ಯವುಳ್ಳದ್ದು. ಅದನ್ನು ಮಾತೃಭಾಷೆ ತುಳುವಿನಲ್ಲಿ ಬೆಸೆದರೆ ಮತ್ತಷ್ಟು ಸುಲಭವಾಗುವುದು. ಆದ್ದರಿಂದ ಭಗವದ್ಗೀತೆ ಭಾವಾರ್ಥ ಮಾತೃಭಾಷೆಯಲ್ಲೂ ಬೆಸೆಯಲಿ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದರು.

Advertisement

ಐಲೇಸಾ ದಿ ವಾಯ್ಸ ಆಫ್‌ ಓಶಿಯನ್‌ ಮತ್ತು ಇಸ್ಕಾನ್‌ ಬೆಂಗಳೂರು ಸೌತ್‌ ಇವುಗಳ ಸಂಯುಕ್ತ ಆಶ್ರಯದಲ್ಲಿ ಆನ್‌ಲೈನ್‌ನಲ್ಲಿ ಝೂಮ್‌ ಮೂಲಕ ಕಳೆದ 6 ದಿನಗಳಿಂದ ನಡೆಸಲ್ಪಟ್ಟ ತುಳುವಿನಲ್ಲಿ ಭಗವದ್ಗೀತೆಯ ಸಾರ ತುಳುವ ಜಾಲ್ಡ್‌ ಕೃಷ್ಣ ಪಾರ್ದನ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಶುಭಾಶಂಸನೆಗೈದು ಅನುಗ್ರಹಿಸಿದರು.

ಎಲ್ಲ ರೀತಿಯ ಸಹಕಾರ ಇದೆ

ಸ್ವಾಗತ ಶ್ಲೋಕದೊಂದಿಗೆ ಕಾರ್ಯ ಕ್ರಮ ಪ್ರಾರಂಭಗೊಂಡಿತು. ಒಡಿಯೂರು ಮಠಾಧೀಶ ಶ್ರೀ ಗುರು ದೇವಾನಂದ ಸ್ವಾಮೀಜಿ ಆಶೀರ್ವಚನಗೈದು, ತುಲುವ ಜಾಲ್ಡ್‌ ಕೃಷ್ಣ ಪಾರ್ದನ ಈ ಶೀರ್ಷಿಕೆ ತುಳುವಿಗೆ ತುಂಬಾ ಸಾಮೀಪ್ಯವಾಗಿದೆ ಎಂದು ಟೀಮ್‌ ಐಲೇಸಾದ ಹೊಸ ಯೋಚನೆ-ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಭಗವದ್ಗೀತೆ ತುಳುವಿನಲ್ಲಿ ಆಗುವುದಾರೆ ಐಲೇಸಾಗೆ ಎಲ್ಲ ರೀತಿಯ ಸಹಕಾರ ಇದೆ ಎಂದರು.

ಕೇಮಾರು ಸಾಂದೀಪನೀ ಸಾಧನಾಶ್ರಮದ ಶ್ರೀ ಈಶ ವಿಟuಲದಾಸ ಸ್ವಾಮೀಜಿ, ಇಸ್ಕಾನ್‌ ಪುಣೆ ಇದರ ಸರ್ವ ಲಕ್ಷಣದಾಸ ಹಾಗೂ ಶ್ರೀ ಪ್ರಸಾದೇಶ್ವರ ಕೃಷ್ಣದಾಸ ಸ್ವಾಮೀಜಿ ಪ್ರವಚನ ನೀಡಿ ಹರಸಿದರು.

Advertisement

ರವಿ ಶೆಟ್ಟಿ ಮೂಡಂಬೈಲ್‌ ಕತಾರ್‌ 6 ದಿನಗಳ ಕಾರ್ಯಕ್ರಮದ ಬಗ್ಗೆ, ಪೂರ್ತಿ ಭಗವದ್ಗೀತೆಯ ಬಗ್ಗೆ ಉದಾಹರಣೆ ಸಹಿತ ವಿವರಿಸಿ ಐಲೇಸಾದ ಸೇವೆಯನ್ನು ಶ್ಲಾಘಿಸಿದರು.

ಐಲೇಸಾದ ಶಿಸ್ತಿನ ಬಗ್ಗೆ ಮತ್ತು ಇಂತಹ ಸಮಯದಲ್ಲಿ ಭಕ್ತಿ ಲಹರಿಯಂತಹ ಕಾರ್ಯಕ್ರಮ ಅಗತ್ಯ ಎಂದು ಖ್ಯಾತ ಸಮಾಜ ಸೇವಕ, ವಾಗ್ಮಿ ಸುರೇಶ್‌ ಶೆಟ್ಟಿ ಗುರ್ಮೆ ಅವರು ತಿಳಿಸಿದರು.

ರಮೇಶ್‌ ಕಿದಿಯೂರು, ವಲ್ಲಿ ಮಾರ್ಟೆಲ್‌, ಕುವೈಟ್‌ನ ರಾಘು ಪೂಜಾರಿ ಮಾರ್ನಾಡ್‌, ಅನಂತ್‌ ಬೆಂಗಳೂರು, ಮನೋಹರ್‌ ತೋನ್ಸೆ ಅಬುಧಾಬಿ, ಸುರೇಶ್‌ ಪೂಂಜ ಆಸ್ಟ್ರೇಲಿಯಾ, ನರಹರಿ ಚೈತನ್ಯದಾಸ, ಹಿರಿಯ ಪತ್ರಕರ್ತ ಕೆ.ಎಲ್‌. ಕುಂಡತ್ತಾಯ, ಡಾ| ವೈ. ಎನ್‌. ಶೆಟ್ಟಿ, ಡಾ| ಸಾಯಿ ಗೀತಾ ಶುಭ ಹಾರೈಸಿದರು.

ಇಸ್ಕಾನ್‌ ಬೆಂಗಳೂರು ಸೌತ್‌ ಅಧ್ಯಕ್ಷ ಎಚ್‌. ಜಿ. ನರಹರಿ ಚೈತನ್ಯದಾಸ, ಛಾಯಾಪತಿ ಕಂಚಿಬೈಲ್‌, ಸುಧಾಕರ್‌ ಶೆಟ್ಟಿ, ದೀಪ್ತಿ ಪ್ರಶಾಂತ್‌ ಭಕ್ತಿಗೀತೆ ಹಾಡಿದರು. ಕಾರ್ಯಕ್ರಮದ ಉದ್ಘಾಟಕ ಸರ್ವೋತ್ತಮ ಶೆಟ್ಟಿ ಅಬುಧಾಬಿ ಸಮಾಪನಾ ನುಡಿಗಳನ್ನಾಡಿ ಕಾರ್ಯ ಕ್ರಮಕ್ಕೆ ಕಾರಣಿಭೂತರಾದ ಎಲ್ಲರಿಗೂ  ಶುಭ ಹಾರೈಸಿದರು.

ಮಧ್ಯಾಂತರದಲ್ಲಿ ಇಸ್ಕಾನ್‌ ಕಾರ್ಯಕರ್ತರು ಕೃಷ್ಣ ಶಯನ ಪೂಜೆ ನಡೆಸಿದರು. ಐಲೇಸಾ ಇದರ ರಮೇಶ್ಚಂದ್ರ ಬೆಂಗಳೂರು, ಪ್ರೇಮಲತಾ ದಿವಾಕರ್‌, ಡಾ| ಸುಶೀಲಾ ವಿ. ಕೊಲ್ಲಿಪಾಲ್‌ ಭಜನೆ ನೆರವೇರಿಸಿದರು.

ರಮೇಶ್ಚಂದ್ರ ಬೆಂಗಳೂರು, ಗೋಪಾಲ್‌ ಪಟ್ಟೆ, ಸುರೇಂದ್ರ ಮಾರ್ನಾಡ್‌, ಮಾ| ಸುವಿದ್‌ ಮಾರ್ನಾಡ್‌, ಶಿವು ಸಾಲಿಯಾನ್‌, ನರೇಂದ್ರ ಕಬ್ಬಿನಾಲೆ, ವಿಶ್ವನಾಥ್‌ ಪಳ್ಳಿ, ಗೀತಾ ರಾಘವೇಂದ್ರ, ಡಾ| ಸುಶೀಲಾ, ಸುಧಾಕರ್‌ ಶೆಟ್ಟಿ, ವಿವೇಕಾನಂದ ಮಂಡೆಕೆರೆ ಇವರ ತಂಡ ಮತ್ತು ಇಸ್ಕಾನ್‌ ಕಾರ್ಯಕರ್ತರ ಶ್ರಮದೊಂದಿಗೆ ಮೂಡಿಬಂದ ಆರು ದಿನಗಳ ವೈಶಿಷ್ಟಮಯ ಕಾರ್ಯಕ್ರಮವನ್ನು ಶಾಂತಾರಾಮ ಶೆಟ್ಟಿ ನಿರ್ವಹಿಸಿದರು.

ಚಿತ್ರ-ವರದಿ: ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next