Advertisement

“ಸ್ವಚ್ಛತೆ ಆಶಯ ಮಕ್ಕಳಿಗೆ ತಿಳಿಸಿದರೆ ಉತ್ತಮ ಫಲ’

10:55 PM Jun 15, 2019 | Sriram |

ಮಂಗಳಾದೇವಿ: ಸ್ವಚ್ಛತೆಯ ಆಶಯವನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತಿದರೆ ಅದರಿಂದ ಉತ್ತಮ ಫಲ ಸಿಗುತ್ತದೆ. ಈ ನಿಟ್ಟಿನಲ್ಲಿ ಸ್ವಚ್ಛ ಮನಸ್ಸು ಕಾರ್ಯಕ್ರಮ ಶ್ಲಾಘನೀಯ ಎಂದು ಎಂಆರ್‌ಪಿಎಲ್‌ ಗ್ರೂಪ್‌ ಜನರಲ್‌ ಮ್ಯಾನೇಜರ್‌ (ಸಿಎಸ್‌ಆರ್‌) ಬಿ.ಎಚ್‌.ವಿ. ಪ್ರಸಾದ್‌ ಅಭಿಪ್ರಾಯಪಟ್ಟರು.

Advertisement

ರಾಮಕೃಷ್ಣ ಮಿಷನ್‌ ವತಿಯಿಂದ ನಡೆಯುತ್ತಿರುವ ಐದನೇ ಹಂತದ ಸ್ವಚ್ಛ ಮಂಗಳೂರು ಅಭಿಯಾನದ ಪ್ರಯುಕ್ತ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಆಡಿಟೋರಿಯಂನಲ್ಲಿ ಆಯೋಜಿಸಿದ “ಸ್ವಚ್ಛ ಮನಸ್ಸು ಮತ್ತು ಸ್ವಚ್ಛತೆಗಾಗಿ ಜಾದೂ’ ಕಾರ್ಯಕ್ರಮವನ್ನು ಅವರು ಶನಿವಾರ ಉದ್ಘಾಟಿಸಿದರು.

ಸೃಜನಾತ್ಮಕ ಆಯೋಜನೆ
ರಾಮಕೃಷ್ಣ ಮಿಷನ್‌ನಿಂದ ನಡೆಯು ತ್ತಿರುವ ಸ್ವಚ್ಛ ಮಂಗಳೂರು ಅಭಿಯಾನವು ನಗರದ ಜನತೆಯಲ್ಲಿ ಸ್ವಚ್ಛತೆಯ ಕುರಿತು ಜಾಗೃತಿಯನ್ನು ಮೂಡಿಸುತ್ತಿದೆ. ಮಕ್ಕಳ ಮನಸ್ಸಿನಲ್ಲಿ ಎಳವೆಯಿಂದಲೇ ಸ್ವಚ್ಛತೆಯ ಅರಿವನ್ನು ಮೂಡಿಸಿದರೆ, ಮುಂದೆ ದೇಶ ಸ್ವಚ್ಛವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ನಿಟ್ಟಿನಲ್ಲಿ ಸೃಜನಾತ್ಮಕವಾಗಿರುವ ಕಾರ್ಯಕ್ರಮ ಆಯೋಜನೆ ಮಾಡಿರುವುದು ಅಭಿನಂದನೀಯ ಎಂದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್‌, ಜಿಲ್ಲಾ ವಿದ್ಯಾಂಗ ಉಪ ನಿರ್ದೇಶಕ ವೈ. ಶಿವರಾಮಯ್ಯ ಮುಖ್ಯ ಅತಿಥಿಗಳಾಗಿದ್ದರು. ರಂಜನ್‌ ಸ್ವಾಗತಿಸಿದರು. ಬಳಿಕ ಅಂತಾರಾಷ್ಟ್ರೀಯ ಖ್ಯಾತಿಯ ಜಾದೂಗಾರ ಕುದ್ರೋಳಿ ಗಣೇಶ್‌ ಅವರಿಂದ “ಸ್ವಚ್ಛತೆಗಾಗಿ ಜಾದೂ’ ಪ್ರದರ್ಶನ ನಡೆಯಿತು.

ಸ್ವಚ್ಛತಾ ಸಂಕಲ್ಪ ಮಾಡಿ
ಅಧ್ಯಕ್ಷತೆ ವಹಿಸಿದ್ದ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜೀ ಮಹಾರಾಜ್‌ ಮಾತನಾಡಿ, ಮನೆ, ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛ ಮಾಡು ವುದರೊಂದಿಗೆ ಇಡೀ ಮಂಗ ಳೂರನ್ನೇ ಸ್ವತ್ಛ ಮಾಡುವ ಅದ್ಭುತ ಶಕ್ತಿ ಎಳೆಯ ಮಕ್ಕಳಲ್ಲಿದೆ. ಸ್ವಚ್ಛತಾ ಸಂಕಲ್ಪ ಮಾಡುವುದರ ಮೂಲಕ ಸುಂದರ, ಬಲಿಷ್ಠ ಮತ್ತು ಪ್ರಗತಿಪರ ಭಾರತ ನಮ್ಮದಾಗಲು ಎಳವೆಯಲ್ಲೇ ಶ್ರಮಿಸಬೇಕು ಎಂದು ಆಶಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next