Advertisement

ಶ್ರೇಷ್ಠ ಕಾದಂಬರಿಗೆ 25 ಲಕ್ಷ ಬಹುಮಾನ

06:00 AM Mar 13, 2018 | |

ಬೆಂಗಳೂರು: ದೇಶದ ಸಾಹಿತ್ಯ ಕ್ಷೇತ್ರದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 25 ಲಕ್ಷ ರೂ.ನಗದು ಬಹುಮಾನವುಳ್ಳ ಪ್ರಶಸ್ತಿಯೊಂದು ಸ್ಥಾಪನೆಯಾಗಿದ್ದು, ಅತ್ಯುತ್ತಮ ಭಾರತೀಯ ಕಾದಂಬರಿಕಾರನಿಗೆ ಈ ಬಂಪರ್‌ ಬಹುಮಾನ ಸಿಗಲಿದೆ.

Advertisement

ಆಂಗ್ಲಭಾಷೆಯಲ್ಲಿ ಮತ್ತು ಭಾರತೀಯ ಭಾಷೆಯಲ್ಲಿ ಕಾದಂಬರಿ ಬರೆದು ಇಂಗ್ಲಿಷ್‌ಗೆ ಅನುವಾದಗೊಂಡಿರುವ ಕಾದಂಬರಿಗಳಿ ಗಾಗಿ ಜೆಸಿಬಿ ಸಾಹಿತ್ಯ ಪ್ರತಿಷ್ಠಾನವು ಈ ಪ್ರಶಸ್ತಿ ಸ್ಥಾಪಿಸಿದ್ದು, ಈ ವರ್ಷದಿಂದಲೇ ಬಹುಮಾನ ಸಿಗಲಿದೆ. ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಕನ್ನಡಿಗರಾದ, ಸಾಹಿತಿ ವಿವೇಕ್‌ ಶಾನುಭಾಗ್‌ ಕೂಡ ಇದ್ದಾರೆ.

ಭಾರತೀಯ ಮೂಲದ ಕಾದಂಬರಿಕಾರ,ಅಂತಾರಾಷ್ಟ್ರೀಯ ಖ್ಯಾತಿಯ ರಾಣಾದಾಸ್‌ ಗುಪ್ತಾ ಅವರ ನೇತೃತ್ವದಲ್ಲಿ ಜೆಸಿಬಿ ಸಾಹಿತ್ಯ ಪ್ರತಿಷ್ಠಾನ ರಚನೆಯಾಗಿದೆ. ಈ ಸಂಬಂಧ ಮಾತ ನಾಡಿರುವ ಅವರು, ನಾವು ಹಳೆಯ ತಲೆಮಾರಿನ ಶ್ರೇಷ್ಠ ಕೃತಿಗಳನ್ನೇ ನಾವು ಮೆಲುಕು ಹಾಕುತ್ತಿದ್ದೇವೆ ಹೊರತು, ಹೊಸ ತಲೆಮಾರಿನ ಕೃತಿಗಳನ್ನು ಹೆಕ್ಕಿ ತೆಗೆಯಲು ಪ್ರಯತ್ನಿಸುತ್ತಿಲ್ಲ. ಈ ಪ್ರಶಸ್ತಿಯ ಮೂಲಕ ಪ್ರತಿಭಾ ವಂತ ಲೇಖಕರನ್ನು, ಅನುವಾದಕರನ್ನು, ಉತ್ತಮ ಕೃತಿಗಳನ್ನು ಮತ್ತು ಪ್ರಕಾಶಕರನ್ನು ಉತ್ತೇಜಿಸುವ ಗುರಿ ಹೊಂದಿದ್ದೇವೆ. ಈ ಮೂಲಕ ಹೊಸ ಪೀಳಿ ಗೆಯ ಓದುಗರನ್ನು ಹುಟ್ಟುಹಾಕುವ ಉದ್ದೇಶ ಈ ಪ್ರಶಸ್ತಿಯದ್ದಾಗಿದೆ ಎಂದು ಹೇಳಿದ್ದಾರೆ.

ಇಷ್ಟೇ ಅಲ್ಲ, ಬಹುಮಾನಿತ ಕೃತಿಯು ಭಾರತೀಯ ಭಾಷೆಯಿಂದ ಅನುವಾದಗೊಂಡಿದ್ದ ಸಂದರ್ಭದಲ್ಲಿ, ಅನುವಾದಕರಿಗೂ ರೂ 5 ಲಕ್ಷ ಮತ್ತು ಅಂತಿಮ ಸುತ್ತಿಗೆ ಆಯ್ಕೆಯಾದ 5 ಲೇಖಕರಿಗೂ ತಲಾ ಒಂದು ಲಕ್ಷ ರೂ ನಗದು ನೀಡಲು ತೀರ್ಮಾನಿಸಲಾಗಿದೆ.

ನಮ್ಮ ಮಹಾನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಈಗಾಗಲೇ ಇಂಗ್ಲಿಷ್‌ ಓದುಗ ವಲಯ ಅಗಾಧವಾಗಿ ವಿಸ್ತರಿಸಿದೆ. ಅವರಿಗೂ ಸಾಹಿತ್ಯದ ರುಚಿ ಹೆಚ್ಚಿಸಿದಲ್ಲಿ, ಭಾರತೀಯ ಓದುಗರು ಮತ್ತು ಭಾರತೀಯ ಲೇಖಕರ ಮಧ್ಯೆ ಒಂದು ಅನ್ಯೋನ್ಯತೆ ಸೃಷ್ಟಿಯಾಗಿ ಹೊಸ ಓದುಗರು ಹುಟ್ಟಿಕೊಳ್ಳುತ್ತಾರೆ. ಆಗ ಒಮ್ಮೆ ಇಂಗ್ಲಿಷಿನಲ್ಲಿ ಕೃತಿ ಬಂದರೆ, ಜಾಗತಿಕ ಮಟ್ಟದಲ್ಲಿಯೂ ಏಕಕಾಲಕ್ಕೇ ಲೇಖಕರು ಗುರುತಿಸಿಕೊಳ್ಳುತ್ತಾರೆ ಎಂಬುದು ಈ ಪ್ರಶಸ್ತಿಯ ಮಹದಾಸೆ.

Advertisement

ತೀರ್ಪುಗಾರರು ಯಾರು?:
ಪ್ರಸ್ತುತ ಸಾಮಾಜಿಕ ಆಗುಹೋಗುಗಳಿಗೆ ಮುಕ್ತವಾಗಿ ತೆರೆದುಕೊಂಡಿರುವ ಅಂ.ರಾ. ಮಟ್ಟದಲ್ಲಿ ಗುರುತಿಸಿ
ಕೊಂಡಿರುವವರನ್ನೇ ತೀರ್ಪುಗಾರರನ್ನಾಗಿ ಆಯ್ಕೆ ಮಾಡಿದೆ. ಮಾರ್ಚ್‌ ಮೊದಲವಾರವಷ್ಟೇ ತೀರ್ಪುಗಾರರ
ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಚಿತ್ರ ನಿರ್ದೇಶಕಿ ದೀಪಾ ಮೆಹ್ತಾ – ತೀರ್ಪುಗಾರರ ಮಂಡಳಿ ಅಧ್ಯಕ್ಷೆ: ಸದಸ್ಯರು: ಕನ್ನಡದ ಕಾದಂಬರಿಕಾರ
ವಿವೇಕ ಶಾನಭಾಗ, ಅನುವಾದಕಿ ಆರ್ಶಿಯಾ ಸತ್ತಾರ್‌, ಲೇಖಕಿ ಪ್ರಿಯಂವದಾ ನಟರಾಜನ್‌, ಕನ್ನಡಿಗ ಮತ್ತು
ಮೂರ್ತಿ ಕ್ಲಾಸಿಕಲ್‌ ಲೈಬ್ರರಿ ಆಫ್ ಇಂಡಿಯಾದ ಸಂಸ್ಥಾಪಕ ರೋಹನ್‌ ಮೂರ್ತಿ.

ಸೂಕ್ಷ್ಮ ಮನ ಸ್ಸುಳ್ಳ ಮತ್ತು ತಮ್ಮ ಪಾಡಿಗೆ ಬರೆ ಯುತ್ತಾ ಕುಳಿತ, ನಿಜವಾದ ಪ್ರತಿಭೆಯುಳ್ಳ ಬರಹಗಾರರಿಗೆ ಇಂಥ ಪ್ರಶಸ್ತಿಗಳು ಭರವಸೆ ತರಬಲ್ಲವು.
– ಶ್ರೀದೇವಿ ಕಳಸದ, ಲೇಖಕಿ

ಉತ್ತಮ ಸಾಹಿತ್ಯಕ್ಕಾಗಿ ಭಾರತೀಯ ಮಟ್ಟದ ಇಂತಹ ಪ್ರಶಸ್ತಿ ಸೃಷ್ಟಿಯಾಗಿರುವುದು ಸಂತೋಷ. ಈ ಪ್ರಶಸ್ತಿಯು
ಭಾರತೀಯ ಭಾಷೆಗಳಲ್ಲಿ ರಚಿತವಾಗಿ ಇಂಗ್ಲಿಷ್‌ ಅನುವಾದದಲ್ಲಿ ಪ್ರಕಟ ವಾಗಿರುವ ಕೃತಿಗಳನ್ನು ಪರಿಗ ಣಿಸುತ್ತದೆ.ಇದರಿಂದ ಭಾರತೀಯ ಭಾಷೆಗಳ ಸಾಹಿತ್ಯ ಕೃತಿಗಳಿಗೆ ಹೆಚ್ಚಿನ ಮಹತ್ವ ಸಿಗಲಿದೆ.

– ವಿವೇಕ ಶಾನಭಾಗ, ತೀರ್ಪುಗಾರ

ಸಲ್ಲಿಕೆ  ಹೇಗೆ?
ಅರ್ಜಿ ಸಲ್ಲಿಕೆಗೆ ಕಡೇ ದಿನ ಮೇ 31
ಅಂತಿಮ 10 ಸೆ.5
ಅಂತಿಮ ಪಟ್ಟಿ ಅ. 3
ಪ್ರಶಸ್ತಿ ಘೋಷಣೆ ನ. 3
ಪ್ರಶಸ್ತಿ ಮೊತ್ತ 25 ಲಕ್ಷ
ಅನುವಾದಿತ ಕೃತಿಗೆ 5 ಲಕ್ಷ
ಅಂತಿಮ ಸುತ್ತಿಗೆ ಪ್ರವೇಶ 1 ಲಕ್ಷ
ಮಾಹಿತಿಗೆ: www.thejcbprize.org

ಭಾರತದ ಅತ್ಯುನ್ನತ ಪ್ರಶಸ್ತಿ
1. ಜೆಸಿಬಿ ಪ್ರಶಸ್ತಿ 25,00,000
2. ಜ್ಞಾನ ಪೀಠ ಪ್ರಶಸ್ತಿ 11,00,000
3. ಸರ ಸ್ವತಿ ಸಮ್ಮಾನ್‌ 10,00,000
4. ನೃಪ ತುಂಗ ಪ್ರಶ ಸ್ತಿ  7,00,001
5. ಪಂಪ ಪ್ರಶಸ್ತಿ 3,00,000

Advertisement

Udayavani is now on Telegram. Click here to join our channel and stay updated with the latest news.

Next