Advertisement
ಖಾಸಗಿ ಬಸ್‌ಗಳು ಓಡಾಟ ಸ್ಥಗಿತಗೊ ಳಿಸಿದ್ದವು. ಆಟೋಗಳ ಓಡಾಟವು ವಿರಳವಾ ಗಿತ್ತು. ಸಣ್ಣ-ಪುಟ್ಟ ಅಹಿತಕರ ಘಟನೆ ಹೊರತುಪಡಿಸಿ ಕೆಎಸ್‌ಆರ್‌ಟಿಸಿ ಬಸ್‌ಗಳು ಎಂದಿನಂತೆ ಓಡಾಟ ಮುಂದುವರಿ ಸಿತ್ತು. ಪ್ರಥಮ ಪಿಯುಸಿ ಪರೀಕ್ಷೆ ಅಡ್ಡಿ- ಆತಂಕವಿಲ್ಲದೆ ನಡೆಯಿತು.
ಹರತಾಳ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳು ಬೀದಿಗಿಳಿಯಲಿಲ್ಲ. ಕೇರಳ ಗಡಿ ಭಾಗಕ್ಕೆ ಸಂಚರಿಸುವ ಬಸ್, ಕೇರಳ ಸಾರಿಗೆ ಬಸ್‌ಗಳು ಸಂಚಾರ ನಡೆಸಿಲ್ಲ. ಬಹುತೇಕ ಪ್ರಯಾಣಿಕರು ಸರಕಾರಿ ಬಸ್ ಅನ್ನು ಆಶ್ರಯಿಸಿದ್ದರು. ಖಾಸಗಿ ಬಸ್ ಮಾತ್ರ ಓಡಾಟ ನಡೆಸುತ್ತಿದ್ದ ಸ್ಥಳಗಳಲ್ಲಿ ಪ್ರಯಾಣಿಕರು ತೊಂದರೆ ಅನುಭವಿಸಿದ್ದರು. ನಗರ, ಗ್ರಾಮಾಂತರ ಪ್ರದೇಶದಲ್ಲಿ ಆಟೋ, ಟೂರಿಸ್ಟ್ ಕಾರುಗಳ ಓಡಾಟ ಸಾಧಾರಣ ವಾಗಿತ್ತು. ನಗರದಲ್ಲಿ ಶೇ. 90 ಬಂದ್
ನಗರ, ಗ್ರಾಮಾಂತರ ಪ್ರದೇಶದ ಪ್ರಮುಖ ಕೇಂದ್ರಗಳಲ್ಲಿ ಅಂಗಡಿ -ಮುಂಗಟ್ಟುಗಳು ಬೆಳಗ್ಗಿನಿಂದಲೇ ಬಂದ್ ಆಗಿತ್ತು. ನಗರದಲ್ಲಿ ಶೇ. 90ಕ್ಕಿಂತ ಅಧಿಕ ಅಂಗಡಿ, ಮಳಿಗೆಗಳು ಬಾಗಿಲು ತೆರೆದಿರಲಿಲ್ಲ. ಪೆಟ್ರೋಲ್ ಬಂಕ್‌ಗಳು ಬಂದ್ ಆಗಿದ್ದ ಕಾರಣ, ಖಾಸಗಿ ವಾಹನ ಓಡಾಟಗಾರರಿಗೆ ತೊಂದರೆ ಉಂಟಾಯಿತು. ಸವಣೂರು, ಈಶ್ವರಮಂಗಲದಲ್ಲಿ ಹರತಾಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಲ್ಲಿ ಯಾವುದೇ ಅಂಗಡಿ ಮುಂಗಟ್ಟುಗಳು ತೆರೆದಿರಲಿಲ್ಲ. ಕೆಯ್ಯೂರು, ಪಾಣಾಜೆ, ಸುಳ್ಯಪದವು, ಉಪ್ಪಿನಂಗಡಿ, ಆಲಂಕಾರು, ಕುಂಬ್ರ, ತಿಂಗಳಾಡಿ ಮೊದಲಾದೆಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
Related Articles
ನಗರ, ಗ್ರಾಮಾಂತರ ಪ್ರದೇಶಗಳಲ್ಲಿ ಜನರ ಓಡಾಟ ವಿರಳವಾಗಿತ್ತು. ಖಾಸಗಿ ವಾಹನ ಗಳ ಸಂಚಾರವೂ ಇಳಿಮುಖವಾ ಗಿತ್ತು. ಸದಾ ಜನದಟ್ಟಣೆಯಿಂದ ಕೂಡಿದ್ದ ಪುತ್ತೂರು ನಗರ ಬಿಕೋ ಎನ್ನುತ್ತಿತ್ತು. ನಗರದ ಬಹುತೇಕ ಹೊಟೇಲ್ ಮುಚ್ಚಿದ್ದ ಪರಿಣಾಮ, ಊಟ – ಉಪಹಾರಕ್ಕೂ ಪರ ದಾಡುವಂತಾಗಿತ್ತು.
Advertisement
ತೆರೆಮರೆಯಲ್ಲಿ ಒಂದೆರೆಡು ಕ್ಯಾಂಟೀನ್, ಹೊಟೇಲ್ ತೆರೆದಿದ್ದರೂ ಕ್ಷಣದಲ್ಲೇ ತಿಂಡಿ-ತಿನಿಸು ಖಾಲಿ ಆಗಿತ್ತು. ಮೆಡಿಕಲ್, ಹಾಲು ಮಾರಾಟ ಕೇಂದ್ರಗಳು ತೆರಿದಿದ್ದವು. ಬೆರಳೆಣಿಕೆಯ ಅಂಗಡಿ-ಮಳಿಗೆ ತೆರೆದಿದ್ದರೂ ಜನರಿಲ್ಲದೆ ವ್ಯಾಪಾರ ಕುಂಠಿತವಾಗಿತ್ತು.
ಕೆಎಸ್‌ಆರ್‌ಟಿಸಿ ಬಸ್‌ಗೆ ಕಲ್ಲೆಸೆತಕೆಎಸ್ಆರ್ಟಿಸಿ ಬಸ್ ಎಂದಿನಂತೆ ಓಡಾಟ ನಡೆಸಿದ್ದು, ಎಂಟು ಬಸ್‌ಗಳ ಮೇಲೆ ಕಲ್ಲು ತೂರಲಾಗಿತ್ತು. ಪಡೀಲು, ವಿಟ್ಲ, ಬೆದ್ರಾಳ, ಕೃಷ್ಣನಗರ, ನಗರದ ಎಪಿಎಂಸಿ ರಸ್ತೆ ಸೇರಿದಂತೆ ಒಟ್ಟು ಎಂಟು ಕಡೆಗಳಲ್ಲಿ ಕಲ್ಲು ತೂರಾಟ ನಡೆಸಿದ ಪರಿಣಾಮ ಬಸ್‌ನ ಗಾಜಿಗೆ ಹಾನಿ ಉಂಟಾಗಿದೆ. ಯಾವುದೇ ಪ್ರಯಾಣಿಕರಿಗೆ ಹಾನಿ ಉಂಟಾಗಿಲ್ಲ. ಮಾಣಿ-ಮೈಸೂರು ರಸ್ತೆಯ ನಗರದ ಬೈಪಾಸ್‌ನ ತೆಂಕಿಲದಲ್ಲಿ ಬೆಳಗ್ಗೆ ರಸ್ತೆ ಮಧ್ಯೆ ಟಯರ್‌ಗೆ ಬೆಂಕಿ ಹಚ್ಚಲಾಗಿತ್ತು. ಉಳಿದಂತೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಬಸ್ ಕಲ್ಲು ತೂರಾಟದ ಪರಿಣಾಮ ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗಕ್ಕೆ 1.5 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ವಿಭಾಗ ನಿಯಂತ್ರಣಾಧಿಕಾರಿ ನಾಗರಾಜ ಶಿರಾಲಿ ಉದಯವಾಣಿಗೆ ತಿಳಿಸಿದ್ದಾರೆ. ಪರೀಕ್ಷೆ ನಿರಾತಂಕ
ತಾಲೂಕಿನ ಪ.ಪೂ. ಕಾಲೇಜಿಗಳಲ್ಲಿ ವಿದ್ಯಾರ್ಥಿಗಳಿಗೆ ಗಣಿತ ಪರೀಕ್ಷೆ ಪೂರ್ವ ನಿಗದಿಯಂತೆ ಶನಿವಾರ ನಡೆದಿದೆ. ಹರತಾಳದಿಂದ ಪರೀಕ್ಷೆ ನಡೆಯುವ ಕುರಿತಂತೆ ಗೊಂದಲಗಳಿತ್ತು. ಆದರೆ ಇಲಾಖೆಧಿಕಾರಿಗಳು ಆಯಾ ನೋಡೆಲ್ ಅಧಿಕಾ ರಿಗಳಿಗೆ ಪರೀಕ್ಷೆ ನಡೆಸು ವಂತೆ ಶನಿವಾರ ಬೆಳಗ್ಗೆಯೇ ಸೂಚಿಸಿದ್ದರು. ಪುತ್ತೂರು ನೋಡೆಲ್ ವ್ಯಾಪ್ತಿಯ ಅಂಬಿಕಾ ಪ.ಪೂ. ಕಾಲೇಜು, ವಿವೇಕಾನಂದ, ಕಬಕ, ಕುಂಬ್ರ, ಮುರ, ಫಿಲೋಮಿನಾ ಸೇರಿದಂತೆ 14 ಸಂಸ್ಥೆ ಗಳಲ್ಲಿ ಪರೀಕ್ಷೆ ನಿರಾತಂಕವಾಗಿ ಸಾಗಿತ್ತು. ಒಟ್ಟು 1,645 ವಿದ್ಯಾರ್ಥಿಗಳ ಪೈಕಿ 1,640 ವಿದ್ಯಾ ರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.