Advertisement

ಕಲ್ಲಂಗಡಿ ಹಣ್ಣಿನಿಂದ ಸೌಂದರ್ಯ ಪ್ರಸಾಧಕಗಳು

03:45 AM Apr 07, 2017 | |

ಹಾಂ! ಬೇಸಿಗೆಯಲ್ಲಿ ಧಾರಾಳವಾಗಿ ಸಿಗುವ ಕಲ್ಲಂಗಡಿ ಹಣ್ಣು ಆರೋಗ್ಯಕ್ಕೆ ತಂಪು. ಇದರ ಸೇವನೆಯಿಂದ ಚರ್ಮ ಮತ್ತು ಕೂದಲಿಗೆ ಹಿತಕರ ಮಾತ್ರವಲ್ಲ ವಿವಿಧ ಲೇಪ, ಮಾಸ್ಕ್ಗಳ ಮೂಲಕ ನೈಸರ್ಗಿಕ ಸೌಂದರ್ಯವರ್ಧಕವಾಗಿ ಪರಿಣಾಮ ಬೀರುತ್ತದೆ.

Advertisement

ಇಂತಹ ಹಲವು ಸುಲಭ ಸರಳ ಸೌಂದರ್ಯ ಪ್ರಸಾಧಕಗಳು ಇಂತಿವೆ.

ಕಲ್ಲಂಗಡಿ ಹಣ್ಣು ಹಾಗೂ ಬಾಳೆಹಣ್ಣಿನ ಮಾಸ್ಕ್
ತೇವಾಂಶಭರಿತವಾದುದರಿಂದ ಕಲ್ಲಂಗಡಿ ಹಣ್ಣು ಚರ್ಮವನ್ನು ಮಾಯಿಶ್ಚರೈಸ್‌ ಮಾಡುತ್ತದೆ. ಬಾಳೆಹಣ್ಣು ತೇವಾಂಶವನ್ನು ಉಂಟುಮಾಡುವುದರ ಜೊತೆಗೆ ತ್ವಚೆಯ ಎಣ್ಣೆಯ ಅಂಶವನ್ನೂ ನಿಯಂತ್ರಿಸುತ್ತದೆ.

ಹೀಗೆ ಈ ಮಾಸ್ಕ್ ಬೇಸಿಗೆಯಲ್ಲಿ  ತೈಲಯುಕ್ತ ಚರ್ಮದವರಿಗೆ ಉತ್ತಮ ಮಾಸ್ಕ್ ಆಗಿದೆ.

ವಿಧಾನ: 2 ಭಾಗ ಕಲ್ಲಂಗಡಿ ಹಣ್ಣಿನ ತಿರುಳಿನ ಪೇಸ್ಟ್‌ , 1 ಭಾಗ ಬಾಳೆಹಣ್ಣಿನ (ಚೆನ್ನಾಗಿ ಕಳಿತ) ಪೇಸ್ಟ್‌ ತೆಗೆದುಕೊಂಡು ಚೆನ್ನಾಗಿ ಬೆರೆಸಿ 1 ಚಮಚ ಜೇನು ಸೇರಿಸಬೇಕು. ತದನಂತರ ಮುಖಕ್ಕೆ ಲೇಪಿಸಿ 20 ನಿಮಿಷಗಳ ಬಳಿಕ ತಣ್ಣೀರಿನಲ್ಲಿ ತೊಳೆಯಬೇಕು.

Advertisement

ಒಣಚರ್ಮದವರಿಗೆ ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ಮತ್ತು  ಮೊಸರಿನ ಮಾಸ್ಕ್ಒಣ ಚರ್ಮದವರಿಗೆ ಕಲ್ಲಂಗಡಿ ಹಣ್ಣಿನಲ್ಲಿರುವ ವಿಟಮಿನ್‌ “ಎ’ ಮತ್ತು ಪೊಟ್ಯಾಶಿಯಂ ಅಂಶ ತೇವಾಂಶಕಾರಕ ಹಾಗೂ ಪೋಷಕಾಂಶಗಳನ್ನು ಒದಗಿಸುತ್ತದೆ. ಮೊಸರಿನ ಅಂಶವೂ ತೇವಾಂಶವನ್ನು ಒದಗಿಸುವುದರ ಜೊತೆಗೆ ಒಣ ತ್ವಚೆಗೆ ಅವಶ್ಯ ತೈಲಾಂಶವನ್ನು ಒದಗಿಸುತ್ತದೆ.

ವಿಧಾನ: 8 ಚಮಚ ಕಲ್ಲಂಗಡಿ ಹಣ್ಣಿನ ಪೇಸ್ಟ್‌ , 2 ಚಮಚ ದಪ್ಪ ಮೊಸರು ಇವೆರಡನ್ನೂ ಚೆನ್ನಾಗಿ ಬೆರೆಸಿ 2 ಹನಿ ಕೊಬ್ಬರಿ ಎಣ್ಣೆ ಬೆರೆಸಬೇಕು. ಇದನ್ನು ಮುಖಕ್ಕೆ ಲೇಪಿಸಿ 20 ನಿಮಿಷಗಳ ಬಳಿಕ ಬೆಚ್ಚಗಿನ ನೀರಲ್ಲಿ ಮುಖ ತೊಳೆಯಬೇಕು. ಇದರ ಒಣ ತ್ವಚೆ ಮೃದು, ಸ್ನಿಗ್ಧ ಹಾಗೂ ಕಾಂತಿಯುತವಾಗಿ ಹೊಳೆಯುತ್ತದೆ.

ಕಲ್ಲಂಗಡಿ ಹಣ್ಣಿನ ತಿರುಳಿನ ಮಾಲೀಶು
ಕಲ್ಲಂಗಡಿ ಹಣ್ಣಿನ ಬೀಜಗಳನ್ನು ತೆಗೆದು ಚೌಕಾಕಾರದಲ್ಲಿ ಕತ್ತರಿಸಬೇಕು. ಅದನ್ನು ಒಂದು ಗಂಟೆ ಫ್ರಿಜ್‌ನಲ್ಲಿಟ್ಟು ತದನಂತರ ಮಾಲೀಶು ಮಾಡಿದರೆ, ಬಿಲಿಸಿನ ಬೇಗೆಯಲ್ಲಿ ಬೆವರಿನಿಂದ ಕೂಡಿದ ಕಾಂತಿಹೀನವಾದ ತ್ವಚೆ, ತಾಜಾ ಹಾಗೂ ಶುಭ್ರವಾಗಿ ಹೊಳೆಯುತ್ತದೆ.

ಕಲ್ಲಂಗಡಿ ಹಣ್ಣಿನ ಸðಬ್‌
ಕಲ್ಲಂಗಡಿ ಹಣ್ಣಿನ ತಿರುಳನ್ನು ಫ್ರಿಜ್‌ನಲ್ಲಿಟ್ಟು ತದನಂತರ ಅದರ ಮೇಲೆ ಕಡಲೆಹಿಟ್ಟು ಉದುರಿಸಬೇಕು. ಅದರಿಂದ ಮುಖ, ಕತ್ತು, ಕೈಕಾಲುಗಳ ತ್ವಚೆಗೆ ಮಾಲೀಶು ಮಾಡಿದರೆ ಒಣ ಒರಟು ಚರ್ಮ ನಿವಾರಣೆಯಾಗಿ ಚರ್ಮ ತಾಜಾ ಹಾಗೂ ಮೃದು  ಸ್ನಿಗ್ಧವಾಗುತ್ತದೆ.

ಮೊಗದ ಚರ್ಮ, ತುಟಿಗಳು ಒಣಗಿ ತುಂಬು ಬಾಯಾರಿಕೆಯಲ್ಲಿ ಬಳಲುತ್ತಿರುವಾಗ ಕಲ್ಲಂಗಡಿ ಹಣ್ಣಿನ ತುಂಡುಗಳನ್ನು ನಿಂಬೆರಸ, ಪುದೀನಾ ರಸ ಬೆರೆಸಿ ತಾಜಾ ಜ್ಯೂಸ್‌ ಮಾಡಿ ಸೇವಿಸಿದರೆ ಬಾಯಾರಿಕೆ, ಬಳಲಿಕೆ ಕಡಿಮೆಯಾಗುವುದು ಮಾತ್ರವಲ್ಲ ಮುಖ ಹಾಗೂ ತುಟಿಯ ಒಣಗುವಿಕೆ ನಿವಾರಣೆಯಾಗಿ ಮೃದುವಾಗಿ ತಾಜಾ ಆಗಿ ಹೊಳೆಯುತ್ತದೆ. ನಿತ್ಯ ಸೇವನೆ ಹಿತಕಾರಿ.

ಲಿಪ್‌ಸðಬ್‌
ಒಣಗಿದ ತುಟಿಗಳಿಗೆ ಕಲ್ಲಂಗಡಿ ಹಣ್ಣಿನ ತುಂಡಿನ ಮೇಲೆ ಸ್ವಲ್ಪ ಸಕ್ಕರೆ ಉದುರಿಸಿ, ಜೇನು ಹಚ್ಚಿ ಅದರಿಂದ ತುಟಿಗಳನ್ನು 5-10 ನಿಮಿಷ ಮೃದುವಾಗಿ ಮಾಲೀಶು ಮಾಡಬೇಕು. ತುಟಿಗಳು ಗುಲಾಬಿ ವರ್ಣದಿಂದ ಶೋಭಿಸುತ್ತವೆ.

ಮಾಯಿಶ್ಚರೈಸರ್‌
ತುಂಬು ಒಣ ಒರಟು ತ್ವಚೆ ಇರುವವರಿಗೆ 6 ಚಮಚ ಕಲ್ಲಂಗಡಿ ಹಣ್ಣಿನ ತಿರುಳಿನ ಪೇಸ್ಟ್‌ , 3 ಚಮಚ ಬೆಣ್ಣೆ ಹಣ್ಣಿನ ಪೇಸ್ಟ್‌, ಸ್ವಲ್ಪ ಜೇನು ಬೆರೆಸಿ ಫೇಸ್‌ಮಾಸ್ಕ್ ಮಾಡಬೇಕು. ಇದರಿಂದ ತ್ವಚೆಗೆ ಅವಶ್ಯ ಪೋಷಕಾಂಶಗಳು ದೊರೆಯುತ್ತದೆ ಮತ್ತು ತ್ವಚೆ ಮೃದು, ಸ್ನಿಗ್ಧ ಹಾಗೂ ತೇವಾಂಶದಿಂದ ಕೂಡಿ ಹೊಳೆಯುತ್ತದೆ.

ಇದನ್ನು ಲೇಪಿಸಿ 20 ನಿಮಿಷಗಳ ಬಳಿಕ ತಣ್ಣೀರಿನಲ್ಲಿ ತೊಳೆಯಬೇಕು. ಎರಡು ದಿನಕ್ಕೊಮ್ಮೆ ಕಲ್ಲಂಗಡಿ ಹಣ್ಣಿನ ಈ ತೇವಾಂಶಕಾರಕ ಲೇಪ ಬಳಸಿದರೆ ಶೀಘ್ರ ಪರಿಣಾಮಕಾರಿ.

– ಡಾ| ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next