Advertisement
ಹೌದು, ಸಖತ್ ಹೈಟ್, ಕಟ್ಟುಮಸ್ತಾದ ಬಾಡಿ ಹೊಂದಿದ ಯುವಕರನ್ನು ಮದುವೆಯಾಗಲು ಹುಡುಗಿಯರು ಕ್ಯೂನಲ್ಲಿ ನಿಲ್ಲುತ್ತಾರೆ ಎನ್ನುವುದು ನಮ್ಮ ನಿಮ್ಮೆಲ್ಲರ ಊಹೆ. ಆದರೆ, ಇದನ್ನು ಸುಳ್ಳಾಗಿಸುವಂತಹ ಪದ್ಧತಿ ಬೋಡಿ ಜನಾಂಗದಲ್ಲಿದೆ. ಅತೀ ಕೆಟ್ಟದಾಗಿ ಕಾಣುವ ಯುವಕನನ್ನು ಮದುವೆಯಾಗಲು ಹುಡುಗಿಯರು ತುದಿಗಾಲಿನ ಮೇಲೆ ನಿಂತಿರುತ್ತಾರೆ ಎಂದರೆ ನೀವು ನಂಬಲೇ ಬೇಕು.
ಡೊಳ್ಳು ಹೊಟ್ಟೆ, ವಿಕಾರವಾದ ದೇಹ ಸಿರಿ ಹೊಂದಲು ಯಾವ ಯುವಕತಾನೆ ಮುಂದಾಗುತ್ತಾನೆ ಹೇಳಿ ? ಆದರೆ ಬೋಡಿ ಬುಡಕಟ್ಟಿನ ಯುವಕರು ಹೊಟ್ಟೆ ಬೆಳೆಸಿಕೊಂಡು, ವಿರೂಪವಾಗಿ ಕಾಣಿಸಿಕೊಳ್ಳಲು ಹರಸಾಹಸ ಪಡುತ್ತಾರೆ. ಅವರ ಈ ವಿರೂಪತನಕ್ಕೆ ಕಾರಣ ‘ಹೆಣ್ಣು’….ಬೋಡಿ ಬುಡಕಟ್ಟು ಜನಾಂಗದಲ್ಲಿ ದೊಡ್ಡಹೊಟ್ಟೆ ಹೊಂದಿದವರನ್ನು ಸುಂದರ ಎಂದು ಪರಿಗಣಿಸಲಾಗುತ್ತದೆ. ಮಾಡರ್ನ್ ಸ್ವಯಂ ವರ :
ಈ ಬುಡಕಟ್ಟು ಜನಾಂಗದಲ್ಲಿ ಪ್ರತಿವರ್ಷ ಒಂದು ಸ್ಪರ್ಧೆ ನಡೆಯುತ್ತದೆ. ಅದೇನೆಂದರೆ ಕೆಟ್ಟ ಮನುಷ್ಯ ಸ್ಪರ್ಧೆ. ಅತ್ಯಂತ ಕೆಟ್ಟ ಮನುಷ್ಯನ ಸ್ಪರ್ಧೆಯಲ್ಲಿ ಗೆದ್ದವರಿಗೆ ಅತ್ಯಂತ ಸುಂದರ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ. ಆತನನ್ನು ಮದುವೆಯಾಗಲು ಹುಡುಗಿಯರ ನಡುವೆ ಪೈಪೋಟಿಯೇ ನಡೆಯುತ್ತದೆ. ಈ ಸ್ಪರ್ಧೆಯನ್ನು ಗೆಲ್ಲಲು ಬುಡಕಟ್ಟು ಜನಾಂಗದ ಪುರುಷರು ಆರು ತಿಂಗಳ ಮೊದಲೇ ತಯಾರಿಯನ್ನು ಆರಂಭಿಸುತ್ತಾರೆ. ಹೊಟ್ಟೆ ಬೆಳೆಸಲು ಎಲ್ಲಾ ತಯಾರಿ ಮಾಡಿಕೊಂಡು ಪ್ರಯತ್ನ ನಡೆಸುತ್ತಾರೆ.
Related Articles
ನಾವು ನೀವು ಕಟ್ಟುಮಸ್ತಾದ ದೇಹ ಹೊಂದಲು ಜಿಮ್ ಮೊರೆ ಹೋಗುತ್ತೇವೆ. ಆದರೆ, ಈ ಜನಾಂಗದ ಯುವಕರು ತಮ್ಮ ದೇಹವನ್ನು ವಿರೂಪಗೊಳಿಸಲು ಕೆಲವೊಂದು ಅಭ್ಯಾಸಗಳನ್ನು ರೂಢಿಸಿಕೊಳ್ಳುತ್ತಾರೆ. ಹಸುವಿನ ರಕ್ತ, ಹಾಲು ಕುಡಿಯುತ್ತಾರೆ. ಸ್ಪರ್ಧೆಯ ಆರು ತಿಂಗಳ ಮೊದಲು ಪುರುಷರು ಪ್ರತ್ಯೇಕ ಗುಡಿಸಲುಗಳಲ್ಲಿ ವಾಸವಾಗಿರುತ್ತಾರೆ. ಈ ಸಮಯದಲ್ಲಿ ಅವರು ಲೈಂಗಿಕ ಸಂಬಂಧ ಹೊಂದಲು ಅವಕಾಶ ಇರುವುದಿಲ್ಲ.
Advertisement
ನಂತರ ಸ್ಪರ್ಧೆಯ ದಿನದಂದು ತಮ್ಮ ಭಾರವಾದ ಹೊಟ್ಟೆ ಹೊತ್ತುಕೊಂಡು ಸ್ಪರ್ಧೆಗೆ ಬರುತ್ತಾರೆ. ಯಾರು ಹೆಚ್ಚು ದಪ್ಪನಾಗಿರುತ್ತಾನೋ ಅವನು ಸುಂದರ ಎಂದು ಪರಿಗಣಿಸಲಾಗುತ್ತದೆ. ನಂತರ ಗ್ರಾಮಸ್ಥರು ಅತ್ಯಂತ ಕೆಟ್ಟ ವ್ಯಕ್ತಿಗೆ ನಾಯಕ ಎಂಬ ಬಿರುದು ನೀಡುತ್ತಾರೆ. ಇನ್ನು ಹುಡುಗಿಯರು ಸೌಂದರ್ಯವತಿಯರೆಂದು ತೀರ್ಮಾನಿಸಲು ಇವರು ಬೇರೆಯದೇ ಮಾನದಂಡ ಉಪಯೋಗಿಸುತ್ತಾರೆ. ಈ ಬುಡಕಟ್ಟು ಸಮುದಾಯದ ಹುಡುಗಿಯರ ದೇಹದ ಮೇಲೆ ಹೆಚ್ಚು ಹಚ್ಚೆ ಗುರುತುಗಳನ್ನು ಸುಂದರವೆಂದು ಪರಿಗಣಿಸಲಾಗುತ್ತದೆ. ಚಾಕು ಅಥವಾ ಬ್ಲೇಡ್ ಗಳಿಂದ ಹುಡುಗಿಯರ ದೇಹಗಳನ್ನು ಕತ್ತರಿಸಿದ ಗುರುತು ಮಾಡಲಾಗುತ್ತದೆ. ಅಂತ ಹುಡುಗಿಯರನ್ನು ಪುರುಷರು ತುಂಬಾ ಇಷ್ಟಪಡುತ್ತಾರೆ ಎಂದು ಹೇಳಲಾಗಿದೆ.
*ಗಣೇಶ್ ಹಿರೇಮಠ್