Advertisement
ಒಮ್ಮೊಮ್ಮೆ ಪರಿಚಯವೇ ಇಲ್ಲದ ವ್ಯಕ್ತಿ, ಬಯಸದೆ ಸಿಕ್ಕ ಪ್ರೀತಿ ಎರಡೂ ಊಹೆಗೂ ಮೀರಿದ ಬಂಧವನ್ನು ಕಟ್ಟಿಕೊಡುತ್ತದೆ. ಅಂತೆಯೇ ನನ್ನ ಬದುಕಲ್ಲೂ ಅಪರಿಚಿತ ವ್ಯಕ್ತಿಗಳಿಂದ ಆಕಾಶದಷ್ಟು, ಯಾವತ್ತೂ ಎಣಿಸದ ಪ್ರೀತಿ ಸಿಕ್ಕಿತು. ಮೊದಲು ನಾನೂ ನನ್ನ ಬದುಕಲ್ಲಿ ಪ್ರೀತಿಗೆ ಜಾಗವೇ ಇಲ್ಲ, ನನಗದು ಸೂಕ್ತವೇ ಅಲ್ಲ ಅಂದುಕೊಂಡಿದ್ದಾರೆ. ಆದರೆ ಅಂದು ಜಂಗಮವಾಣಿಗೆ ಬಂದು ಬಿದ್ದ ಒಂದು ಸಂದೇಶ ಎಲ್ಲವನ್ನೂ ಬದಲಿಸಿತು!
Related Articles
Advertisement
ಬದುಕೇ ಹಾಗೆ ಅಲ್ವಾ? ಯಾವುದು, ಯಾವಾಗ, ಯಾರಿಗೆ ಸಿಗಬೇಕೋ ಅದು ಆ ಸೂಕ್ತ ಸಮಯಕ್ಕೆ ಸಿಗೋದು. ಬೇಕು ಬೇಡಗಳ ಮಧ್ಯೆ ಊಹಿಸದ ಪ್ರೀತಿ ಸಿಕ್ಕಾಗ ಯಾವ ಮನುಜ ಬೇಡ ಅನ್ನುತ್ತಾನೆ ಹೇಳಿ? ಹಾಗೆಯೇ ನಾನು ಕೂಡ ಸಿಕ್ಕ ಕಾಳಜಿಯ ಹೊದಿಕೆಯನ್ನು ಸರಿಸಲೇ ಇಲ್ಲ. ಇಷ್ಟೆಲ್ಲಾ ಹೇಳಿ ಇದರ ರೂವಾರಿಗಳನ್ನೇ ಪರಿಚಯ ಮಾಡದೇ ಹೋದರೆ ತಪ್ಪಾಗಬಹುದು ಅಲ್ವಾ?
ಬೆನ್ನ ತುಂಬಾ ಜವಾಬ್ದಾರಿ ಹೊತ್ತು, ಕಣ್ಣು ತುಂಬಾ ಕನಸು ಹೊತ್ತು, ಕಷ್ಟ ಸುಖದಲ್ಲಿ ಭಾಗಿಯಾಗಿ ಜೊತೆಯಲ್ಲೇ ನಿಂತ ಗೆಳೆಯ- ಅವನೊಬ್ಬನೇ ನಿಶಾಂತ್. ಮುಖ ತುಂಬಾ ನಗುವ ಚೆಲ್ಲಿ, ನಿಷ್ಕಲ್ಮಶ ಮನಸ್ಸಿಂದ ಕಾಳಜಿ ತೋರಿ, ಮುಗ್ಧತೆಯಿಂದಲೇ ಪ್ರೀತಿ ಹಂಚುವಾಕೆ ನನ್ನ ನಲ್ಮೆಯ ಅಕ್ಕ ನಿಶ್ಮಿತಾ.
ಪರಿಚಯದ ಆರಂಭ ತಿಳಿದಿಲ್ಲ, ಅಂತ್ಯದ ಹಾದಿಯೇ ಇಲ್ಲ. ಆದರೆ ಬಯಸದೆ ಸಿಕ್ಕ ಪ್ರೀತಿ ಮಾತ್ರ ವರ್ಣನೆಗೂ ಮೀರಿದ್ದು. ಅನಿರೀಕ್ಷಿತ ಸಂಬಂಧಗಳೇ ಹಾಗೆ ಎಲ್ಲವನ್ನು ಒಗ್ಗೂಡಿಸಿ ಚೆಂದದ ಬದುಕ ಕಟ್ಟುತ್ತವೆ. ಪ್ರೀತಿ ಅಂದರೆ ಮೋಸವಲ್ಲ ಬದಲಾಗಿ ಸಂಬಂಧದ ನಡುವಿರೋ ನಂಬಿಕೆಯಷ್ಟೇ, ಅಲ್ಲವೇ?
–ಅರ್ಚನಾ
ವಿವಿ ಮಂಗಳೂರು