Advertisement

ಉಪ ಅಖಾಡದಲ್ಲಿ ಜಗಜಟ್ಟಿಗಳ ಕಾಳಗ

06:00 AM Oct 24, 2018 | |

ಬೆಂಗಳೂರು: ಉಪ ಚುನಾವಣೆ ಪ್ರಚಾರದ ಕಾವು ತೀವ್ರ ಗೊಂಡಿದ್ದು ಘಟಾನುಘಟಿ ನಾಯ ಕರು ಮತಬೇಟೆಗೆ “ಅಖಾಡ’ಕ್ಕಿಳಿದಿದ್ದಾರೆ. ಪರಸ್ಪರ ವಾಕ್ಸಮರ ಮುಗಿಲು ಮುಟ್ಟಿದೆ. ಮಂಗಳವಾರ ಬಳ್ಳಾರಿಯಲ್ಲಿ ಸಮನ್ವಯ ಸಮಿತಿ ಆಧ್ಯಕ್ಷ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಶ್ರೀರಾಮುಲು ಮಾತಿನ ಕದನದಲ್ಲಿ ತೊಡಗಿದ್ದರೆ, ಶಿವಮೊಗ್ಗದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಮಂದಿರ, ಮಸೀದಿ, ಚರ್ಚ್‌ಗಳಲ್ಲಿ ಪ್ರಾರ್ಥನೆ ಸಲ್ಲಿಸಿ ಮಧು ಬಂಗಾರಪ್ಪ ಪರ ಮತ ಯಾಚನೆ ಮಾಡಿದರು.

Advertisement

ಶಿವಮೊಗ್ಗದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡರು, ಬಂಗಾರಪ್ಪ ಅವರನ್ನು ಟೀಕಿಸುವ ನೈತಿಕತೆ ಬಿಜೆಪಿಗಿಲ್ಲ. 2004ರಲ್ಲಿ ಬಿಜೆಪಿ ಸೇರಿ ಪಕ್ಷಕ್ಕೆ ಅತೀ ಹೆಚ್ಚು ಸ್ಥಾನಗಳನ್ನು ತಂದು ಕೊಟ್ಟ ಬಂಗಾರಪ್ಪ ಅವರನ್ನು ಹೇಗೆ ನಡೆಸಿಕೊಂಡರು. ಅವರು ಒಂದೇ ವರ್ಷದಲ್ಲಿ ಪಕ್ಷ ಏಕೆ ಬಿಟ್ಟರು ಎಂಬುದನ್ನು ಬಿಜೆಪಿ ಹೇಳಲಿ. ವೀರಶೈವ ಮುಖಂಡ ರಾಜಶೇಖರ ಮೂರ್ತಿ ಅವರನ್ನು ಬಿಜೆಪಿಗೆ ಬರ ಮಾಡಿ ಕೊಂಡು ಅವರನ್ನು ಹೇಗೆ ನಡೆಸಿ ಕೊಂಡರು. ರಾಮಕೃಷ್ಣ ಹೆಗಡೆ ಜತೆ ಮೈತ್ರಿ ಮಾಡಿಕೊಂಡು ಹೇಗೆ ನಡೆಸಿ ಕೊಂಡರು ಎಂಬುದಕ್ಕೆ ಉತ್ತರ ಕೊಡಲಿ ಎಂದು ಸವಾಲು ಹಾಕಿದರು. ಶ್ರೀರಾಮುಲು ಹಾಗೂ ಸಿದ್ದ ರಾಮಯ್ಯ ನಡುವೆ ಸತತ ಎರಡನೇ ದಿನವೂ ಟೀಕಾಸ್ತ್ರಗಳ ವಿನಿಮಯ ಮುಂದುವರಿಯಿತು. ಸೋಮವಾರ ಶ್ರೀರಾಮುಲು  ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದ ಸಿದ್ದರಾಮಯ್ಯ ಮಂಗಳವಾರ ಸಂಡೂರಿನ ಪ್ರಚಾರ ಸಭೆಯಲ್ಲಿ  ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧವೂ ಗುಡುಗಿದರು.

ಕಪ್ಪುಚುಕ್ಕೆ
ಹಂಪಿಯಲ್ಲಿ  ಮಾತನಾಡಿದ ಶ್ರೀರಾಮುಲು, ಪ್ರಚಾರ ಸಭೆಯಲ್ಲಿ ಅಥವಾ ಎಲ್ಲಿಯೇ ಆದರೂ ಅಸಾಂವಿಧಾನಿಕ ಪದ ಬಳಸುವುದು ಯಾರಿಗೂ ಶೋಭೆಯಲ್ಲ. ಸಿದ್ದರಾಮಯ್ಯ ಬಳಸಿದ ಭಾಷೆ ಬಗ್ಗೆ ಗಮನಿಸುತ್ತಿದ್ದೇನೆ. ರಾಜ ಕಾರಣಿಗಳಾಗಿ ಒಬ್ಬರಿಗೊಬ್ಬರು ಈ ರೀತಿ ಅಸಾಂವಿಧಾನಿಕ ಪದ ಬಳಸುವುದು ರಾಜಕೀಯ ವ್ಯವಸ್ಥೆಗೆ ಕಪ್ಪುಚುಕ್ಕೆ ಎಂದು ಟೀಕಿಸಿದರು.

ಮಾತನಾಡದ ಸಿದ್ದು-ಸತೀಶ್‌
ಸಂಡೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಶಾಸಕ ಸತೀಶ್‌ ಜಾರಕಿಹೊಳಿ ಒಂದೇ ವೇದಿಕೆಯಲ್ಲಿದ್ದರೂ ಪರಸ್ಪರ ಮಾತನಾಡದೇ ಇದ್ದದ್ದು ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ. ಕೆಜೆಪಿ ಸ್ಥಾಪಿಸಿದಾಗ ನನ್ನ ಶವವೂ
ಬಿಜೆಪಿ ಬಾಗಿಲಿಗೆ ಹೋಗುವುದಿಲ್ಲ ಎಂದು ಹೇಳಿದ್ದ ಯಡಿಯೂರಪ್ಪ, ಮುಂದೆ ಎಲ್ಲಿಗೆ ಹೋದರು. ಇದೇ ಸಿ.ಟಿ.ರವಿ ಬಗ್ಗೆ ಯಡಿಯೂರಪ್ಪ ಏನೆಲ್ಲಾ ಮಾತನಾಡಿದ್ದರು. ಅದಕ್ಕೆ ಸಿ.ಟಿ.ರವಿ ಹೇಗೆ ಪ್ರತಿಕ್ರಿಯಿಸಿದ್ದರು? 
ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ಅಪ್ಪ , ಮಕ್ಕಳು ಒಬ್ಬರಾದ ಮೇಲೆ ಒಬ್ಬರು ಚುನಾವಣೆಗೆ ನಿಲ್ಲುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿಕೆ ನೀಡಿರು ವುದು ಸರಿಯಲ್ಲ. ನಿಮ್ಮದು ಅಮ್ಮ, ಮಗನ ಪಾರ್ಟಿ ಅಲ್ಲವೇ? ರಾಮ ನಗರದಲ್ಲಿ ಪತಿ, ಪತ್ನಿ ನಿಲ್ಲುತ್ತಿಲ್ಲವೇ?
ಕೋಟ ಶ್ರೀನಿವಾಸ ಪೂಜಾರಿ, ಪರಿಷತ್‌ ವಿಪಕ್ಷ  ನಾಯಕ

Advertisement
Advertisement

Udayavani is now on Telegram. Click here to join our channel and stay updated with the latest news.

Next