Advertisement

Thirthahalli: ಕುಸಿಯುವ ಹಂತಕ್ಕೆ ತಲುಪಿದ ಬೈಪಾಸ್ ರಸ್ತೆಯ ತಡೆಗೋಡೆ !

11:42 AM Jul 16, 2024 | Team Udayavani |

ತೀರ್ಥಹಳ್ಳಿ: ಕುರುವಳ್ಳಿ – ಬಾಳೇಬೈಲಿನ ರಾಷ್ಟ್ರೀಯ ಹೆದ್ದಾರಿ 169ಎ ಮಾರ್ಗದಲ್ಲಿ ನಿರ್ಮಿಸಿರುವ 57 ಕೋಟಿ ವೆಚ್ಚದ ಬೈಪಾಸ್ ರಸ್ತೆಯ ತಡೆಗೋಡೆಗಳು ಕುಸಿಯುವ ಹಂತಕ್ಕೆ ಬಂದು ತಲುಪಿದೆ.

Advertisement

2023ರಲ್ಲಿ ಬಿಜೆಪಿ ಅಧಿಕಾರದ ಅವಧಿಯಲ್ಲಿ 57 ಕೋಟಿ ವೆಚ್ಚದಲ್ಲಿ ಹೊಸ ತುಂಗಾ ಸೇತುವೆ ಹಾಗೂ ಬೈಪಾಸ್ ನಿರ್ಮಿಸಲಾಗಿತ್ತು. ಒಂದೇ ಒಂದು ಮಳೆಗಾಲಕ್ಕೆ ಕುಸಿಯುವ ಹಂತಕ್ಕೆ ಹೋಗುತ್ತದೆ ಎಂದರೆ ಇದರ ಗುಣಮಟ್ಟದ ಬಗ್ಗೆ ಭಾರಿ ಅಚ್ಚರಿ ಮೂಡಿಸುತ್ತಿದೆ.

ಈಗಾಗಲೇ ತೀರ್ಥಹಳ್ಳಿಯ ಹಲವು ಸರ್ಕಾರಿ ಕಟ್ಟಡಗಳ ಸೋರುವಿಕೆಯ ಬಗ್ಗೆ ಭಾರಿ ಚರ್ಚೆ ಆಗಿತ್ತು. ಪೊಲೀಸ್ ಠಾಣೆ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಈ ಸೋರುವಿಕೆಯ ಬಗ್ಗೆ ಪ್ರಸ್ತಾಪ ನಡೆದು ಪರ ಹಾಗೂ ವಿರೋಧಗಳ ಮಾತುಕತೆ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ನೂರಾರು ಕೋಟಿ ವೆಚ್ಚದ ಹಣದಲ್ಲಿ ಕಟ್ಟಿದ ಸರ್ಕಾರಿ ಕೊಠಡಿಗಳೇ ಸೋರುತ್ತಿದೆ. ಇವೆಲ್ಲವೂ ಬಿಜೆಪಿ ಕಾಲದ ಕಾಮಗಾರಿ ಎಂದು ಕಾಂಗ್ರೆಸ್ ಆಕ್ಷೇಪಿಸಿತ್ತು. ಈಗ ಬೈಪಾಸ್ ತಡೆ ಗೋಡೆ ಕುಸಿಯುವ ಹಂತಕ್ಕೆ ಬಂದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಗಿದೆ ಚರ್ಚೆ !
ರಾಜ್ಯಾದ್ಯಂತ ಚರ್ಚೆ ಆಗುತ್ತಿರುವ ವಾಲ್ಮೀಕಿ ಹಗರಣ, ಮೂಡಾ ಪ್ರಕರಣದ ಬಗ್ಗೆ ಭಾರಿ ಭಾಷಣ ಮಾಡುವ ಬಿಜೆಪಿ ಪಕ್ಷ ಒಮ್ಮೆ ತಮ್ಮ ಶಾಸಕರು ಹಾಗೂ ಮಾಜಿ ಗೃಹ ಸಚಿವರ ಕ್ಷೇತ್ರದಲ್ಲಿ ಒಮ್ಮೆ ಬಂದು ನೋಡಿಕೊಂಡು ಹೋದರೆ ಬಹುಶಃ ಭ್ರಷ್ಠಾಚಾರದ ಬಗ್ಗೆ ಮಾತನಾಡುವುದನ್ನ ನಿಲ್ಲಿಸಿ ಬಿಡಬಹುದೇನೋ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡುತ್ತಿದ್ದಾರೆ.

Advertisement

ಕಾಂಗ್ರೆಸ್ ಈ ವಿಚಾರಗಳಲ್ಲಿ ಕೇವಲ ಆಕ್ಷೇಪ ಮಾಡುತ್ತಿದೆ ವಿನಃ ತಕ್ಕ ಹೋರಾಟ ಮಾಡುತ್ತಿಲ್ಲ. ಒಟ್ಟಿನಲ್ಲಿ ಎಲ್ಲರು ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್ ಮಾಡುತ್ತಿದ್ದಾರಾ? ಎಂಬ ಅನುಮಾನವೂ ಶುರುವಾಗಿದೆ.

ಇದನ್ನೂ ಓದಿ: Rain: ಭಾರೀ ಮಳೆಯಿಂದ ಶಿರೂರಿನಲ್ಲಿ ಗುಡ್ಡ ಕುಸಿತ; 9 ಮಂದಿ ಮಣ್ಣಿನಡಿ ಸಿಲುಕಿರುವ ಶಂಕೆ

Advertisement

Udayavani is now on Telegram. Click here to join our channel and stay updated with the latest news.

Next