ತುಮಕೂರು: ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಗೂಳೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ 40 ವರ್ಷದಿಂದ ನನೆಗುದಿಗೆ ಬಿದ್ದಿದ್ದ ವಿವಾದವನ್ನು ಶಾಸಕ ಡಿ.ಸಿ. ಗೌರಿಶಂಕರ್ ಬಗೆಹರಿಸಿದ್ದಾರೆ.
ಶಾಸಕರ ಸೂಚನೆ ಮೇರೆಗೆ ಗೂಳೂರು ಹೋಬಳಿ ಜೆಡಿಎಸ್ ಅಧ್ಯಕ್ಷ ಪಾಲನೇತ್ರಯ್ಯ ಗ್ರಾಮಸ್ಥರ ಸಹಕಾರದೊಂದಿಗೆ ಜೆಸಿಬಿ ತಂದು ಕಚ್ಚಾರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ರಸ್ತೆ ಅಭಿವೃದ್ಧಿಗೆ 25 ಲಕ್ಷ ರೂ.ಅನುದಾನ ಬಿಡುಗಡೆ ಗೊಳಿಸಿದ್ದಾರೆ.
ಮನವಿ ಸಲ್ಲಿಸಿದ್ದ ಗ್ರಾಮಸ್ಥರು: ಪರಿಶಿಷ್ಟ ಜಾತಿ ಜನರೇ ವಾಸ ಮಾಡುವ ಈ ಹಳ್ಳಿಗೆ ರಸ್ತೆ ಇರಲಿಲ್ಲ. ಬೇಸಿಗೆಯಲ್ಲಿ ಬೈಚಾಪುರಕ್ಕೆ ಓಡಾಡಲು ಯಾವುದೇ ಸಮಸ್ಯೆ ಇರಲಿಲ್ಲ. ರೈತರು ಬೇಸಾಯ ಆರಂಭಿಸಿದ ನಂತರ ಗ್ರಾಮಕ್ಕೆ ಹೋಗಲು ಕಷ್ಟಪಡುತ್ತಿದ್ದರು. ಹೀಗಾಗಿ ಗ್ರಾಮಸ್ಥರು ಶಾಸಕ ಡಿ.ಸಿ.ಗೌರಿಶಂಕರ್ ಅವರನ್ನು ಭೇಟಿ ಮಾಡಿ ಹಿಂದಿನವರು ಯಾರೂ ನಮಗೆ ರಸ್ತೆ ಮಾಡಿಸಿಕೊಡಲಿಲ್ಲ.
ನೀವಾದರೂ ನಮ್ಮ ಮನವಿಗೆ ಸ್ಪಂದಿಸಿ. ರಸ್ತೆ ಸಮಸ್ಯೆಯನ್ನು ಬಗೆಹರಿಸಿ ಜೊತೆಗೆ ನಕಾಶೆಯಲ್ಲಿ ರಸ್ತೆ ಗುರುತು ಇದ್ದು, ಇದನ್ನು ಹನ್ನೆರಡು ಅಡಿಗೆ ವಿಸ್ತರಿಸುವಂತೆ ಮನವಿ ಮಾಡಿದ್ದರು.
ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕರು ತಹಶೀಲ್ದಾರ್ ಅವರನ್ನು ಸಂಪರ್ಕಿಸಿ ಬೈಚಾಪುರ ರಸ್ತೆ ನಕಾಶೆಯಲ್ಲಿರುವಂತೆ ಸರ್ವೇ ಮಾಡಿಸಿ ಗ್ರಾಮಸ್ಥರರಿಗೆ ಅನುಕೂಲ ಮಾಡಿಕೊಡುವಂತೆ ತಾಕೀತು ಮಾಡಿದ್ದರು. ಗ್ರಾಮಕ್ಕೆ ರಸ್ತೆ ಮಾಡುವ ಸಲುವಾಗಿ ರಸ್ತೆ ಹಾದು ಹೋಗಿದ್ದ ಜಮೀನಿನ ಮಾಲೀಕರಾದ ವಿಜಯ ಶಂಕರ್ ಹಾಗೂ ಜಯದೇವ್‌ಗೆ ಸಹಕರಿಸುವಂತೆ ಕೋರಿದ್ದರು.
•ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಗೂಳೂರು ಜಿಪಂ ವ್ಯಾಪ್ತಿಯಲ್ಲಿ 40 ವರ್ಷದಿಂದ ನನೆಗುದಿಗೆ ಬಿದ್ದಿದ್ದ ರಸ್ತೆ
•ಬೇಸಿಗೆಯಲ್ಲಿ ಬೈಚಾಪುರಕ್ಕೆ ಓಡಾಡಲು ಸಮಸ್ಯೆ ಇರಲಿಲ್ಲ, ಮಳೆಗಾಲದಲ್ಲಿ ಕೃಷಿ ಚಟುವಟಿಕೆ ಆರಂಭಿಸಿದರೆ ಕಷ್ಟವಾಗುತಿತ್ತು