Advertisement
ಪ್ರಗತಿಪುರ ನಿವಾಸಿಗಳಾದ ಸೈಯದ್ ತಾಹ(37), ಅಫ್ರೀದ್ ಪಾಷಾ(32) ಮತ್ತು ಕರೀಮ್(35) ಬಂಧಿತರು. ಆರೋಪಿಗಳು ಮಾ.24ರಂದು ರಾತ್ರಿ ಸುಕುಮಾರ ಎಂಬುವರ ಮನೆಗೆ ನುಗ್ಗಿ ಮೂವರು ಮಹಿಳೆಯರು ಸೇರಿ ಅವರ ಕುಟುಂಬದ ಆರೇಳು ಮಂದಿ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದರು.
Related Articles
Advertisement
ಅಲ್ಲದೆ, ಸುಕುಮಾರ್ ಮನೆ ಮುಂಭಾಗ ಹತ್ತಾರು ಮಂದಿ ಜಮಾಯಿಸುತ್ತಿದ್ದಂತೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಈ ಮಧ್ಯೆ ಈ ವಿಡಿಯೋವನ್ನು ಮೈಸೂರಿನ ಸಂಸದ ಪ್ರತಾಪ್ ಸಿಂಹ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಮತ್ತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಘಟನೆ ಬಗ್ಗೆ ನಗರ ಪೊಲೀಸ್ ಆಯುಕ್ತ ದಯಾನಂದಗೆ ಕ್ರಮಕೈಗೊಳ್ಳುವಂತೆ ಕೋರಿದ್ದರು. ಅಲ್ಲದೆ, ಹಿಂದೂಗಳೇ ಜಾಗರೂಕರಾಗಿರಿ ಎಂದು ಪೋಸ್ಟ್ ಮಾಡಿದ್ದರು. ಇದೀಗ ವಿಚಾರಣೆಯಲ್ಲಿ ಕೋಮುಸಂಘರ್ಷ ಅಲ್ಲ ಎಂಬುದು ತಿಳಿದು ಪೋಸ್ಟ್ ಡಿಲೀಟ್ ಮಾಡಿದ್ದಾರೆ.
ಘಟನೆ ಸಂಬಂಧ ಹಲ್ಲೆಗೊಳಗಾಗಿರುವ ಸುಕುಮಾರ್ ಕುಟುಂಬ ಸದಸ್ಯರು ಪ್ರತಿಕ್ರಿಯಿಸಿದ್ದು, ಭಾನುವಾರ ರಾತ್ರಿ ಮನೆ ಬಳಿ ಆಟೋ ನಿಲ್ಲಿಸುವ ವಿಚಾರಕ್ಕೆ ಒಬ್ಬ ಹುಡುಗನ ಜತೆ ಗಲಾಟೆ ಶುರುವಾಯಿತು. ನಂತರ ಆತ ಹೋಗಿ ಸುಮಾರು 20ಕ್ಕೂ ಜನರನ್ನು ಕರೆದುಕೊಂಡು ಬಂದು, ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ಮಕ್ಕಳಿಗೂ ಹೊಡೆದಿದ್ದಾರೆ. ಮಾಂಗಲ್ಯ ಸರ ಹಾಗೂ ಮೊಬೈಲ್ ಕಿತ್ತುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.
ಕೋಮು ಸಂಘರ್ಷವಾಗಿಲ್ಲ: ಡಿಸಿಪಿ :
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದಕ್ಷಿಣ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜ್, ಆಟೋ ಪಾರ್ಕಿಂಗ್ ವಿಚಾರಕ್ಕೆ ಅಕ್ಕ-ಪಕ್ಕದ ಮನೆಯವರ ನಡುವೆ ಗಲಾಟೆಯಾಗಿದೆ. ಘಟನೆಯಲ್ಲಿ ಕೋಮುವಾದದ ವದಂತಿ ಹಬ್ಬಿತ್ತು. ಆದರೆ, ಇದುವರೆಗೂ ಆ ರೀತಿ ಯಾವುದೇ ವಿಚಾರ ಕಂಡು ಬಂದಿಲ್ಲ. ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ಬಿಗಿಭದ್ರತೆ ಕಲ್ಪಿಸಲಾಗಿದೆ. ಘಟನೆಯ ಸಂಬಂಧ ಹಲ್ಲೆಗೊಳಗಾದ ಸುಕುಮಾರ್ ದೂರು ನೀಡಿದ್ದು, ಈಗಾಗಲೇ ಮೂವರನ್ನು ಬಂಧಿಸಲಾಗಿದೆ. ಇತರೆ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.
ಭಗವಾಧ್ವಜದ ಕಾರಣಕ್ಕೆ ಹಲ್ಲೆ? : ಇನ್ನು ಮತ್ತೂಂದೆಡೆ ಅಯೋಧ್ಯೆ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ದಿನ ಸುಕುಮಾರ್ ತಮ್ಮ ಮನೆ ಮೇಲೆ ಭಗವಾಧ್ವಜ ಹಾರಿಸಿದ್ದರು. ಈ ಕಾರಣಕ್ಕೆ ಹಲ್ಲೆ ಮಾಡಿರುವ ಬಗ್ಗೆ ಸುಕುಮಾರ್ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ, ಈ ಬಗ್ಗೆ ದೂರುದಾರರು ದೂರಿನಲ್ಲಿ ಉಲ್ಲೇಖೀಸಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದರು.