Advertisement

ಜಿಲ್ಲಾಡಳಿತ ಭವನದ ಸಭಾಂಗಣ ಲೋಕಾರ್ಪಣೆ

07:31 AM Mar 04, 2019 | |

ಚಿಕ್ಕಬಳ್ಳಾಪುರ: ಜಿಲ್ಲಾಡಳಿತ ಭವನದಲ್ಲಿ ಅಂತೂ ಇಂತೂ ಕುಂಟುತ್ತಾ ಸಾಗಿದ್ದ ಸಭಾಂಗಣ ನಿರ್ಮಾಣ ಕಾಮಗಾರಿ ದಶಕದ ಬಳಿಕ ಪೂರ್ಣಗೊಂಡು ಭಾನುವಾರ ಜಿಲ್ಲೆಗೆ ಲೋಕಾರ್ಪಣೆಗೊಂಡಿದ್ದು, ಇಡೀ ಸಭಾಂಗಣ ಹೈಟೆಕ್‌ ಸ್ಪರ್ಶದಿಂದ ಕೂಡಿದ್ದು ಸಂಪೂರ್ಣ ಹವಾ ನಿಯಂತ್ರಣದಿಂದ ಕೂಡಿದೆ.

Advertisement

ಡೀಸಿ ಕಚೇರಿ, ಜಿಪಂ ಸೇರಿದಂತೆ ಸರಿ ಸುಮಾರು 40 ಕ್ಕೂ ಹೆಚ್ಚು ಸರ್ಕಾರದ ವಿವಿಧ ಇಲಾಖೆಗಳ ಶಕ್ತಿ ಕೇಂದ್ರವಾಗಿರುವ ಜಿಲ್ಲಾಡಳಿತ ಭವನದ ಮಧ್ಯ ಭಾಗದಲ್ಲಿ ಸಭಾಂಗಣ ಕಾಮಗಾರಿ ಜಿಲ್ಲಾಡಳಿತದ ಅಸಡ್ಡೆಗೆ ಒಳಗಾಗಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಇದರಿಂದ ಜಿಲ್ಲಾಡಳಿತ, ಜಿಪಂ ನಡೆಸುವ ಬೃಹತ್‌ ಕಾರ್ಯ ಕ್ರಮಗಳಿಗೆ ಖಾಸಗಿ ಕಲ್ಯಾಣ ಮಂಟಪಗಳನ್ನು ಆಶ್ರಯಿಸಬೇಕಿತ್ತು. ಇದಕ್ಕಾಗಿಜಿಲ್ಲಾಡಳಿತ ದುಬಾರಿ ಬಾಡಿಗೆ ತೆರಬೇಕಿತ್ತು. 

ಡೀಸಿ ಅವರಿಂದ ಕಾಯಕಲ್ಪ: ಜಿಲ್ಲಾಡಳಿತ ಭವನದಲ್ಲಿ ಸಭಾಂಗಣ ನಿರ್ಮಾಣ ಕಾಮಗಾರಿ ನೆನೆಗುದಿಗೆ ಬಿದ್ದಿರುವ ವಿಷಯ ತಿಳಿದ ಕೂಡಲೇ ಜಿಲ್ಲೆಗೆ ನೂತನ ಡೀಸಿ ಆಗಿ ಆಗಮಿಸಿರುವ ಅನಿರುದ್ಧ್ ಶ್ರವಣ್‌ ಜಿಲ್ಲಾಡಳಿತ ಭವನಕ್ಕೆ ಅಗತ್ಯವಾದ ಸಭಾಂಗಣದ ಕಾಮಗಾರಿ ಕಡತಕ್ಕೆ ಕೊನೆಗೂ ಮುಕ್ತಿ ಕಲ್ಪಿಸಿದ್ದು, ಸುಮಾರು 1.30 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾಡಳಿತ ಭವನದ ಸಭಾಂಗಣವನ್ನು ಸಜ್ಜುಗೊಳಿಸಿದ್ದಾರೆ.

800 ಮಂದಿಗೆ ಆಸನ ವ್ಯವಸ್ತೆ: ಸದ್ಯ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬರೋಬ್ಬರಿ 800 ಮಂದಿ ಕುಳಿತು ಕಾರ್ಯಕ್ರಮ ವೀಕ್ಷಣೆ ಮಾಡುವ ನಿಟ್ಟಿನಲ್ಲಿ ಅತ್ಯಾಧುನಿಕವಾಗಿ ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಇಡೀ ಸಭಾಂಗಣಕ್ಕೆ ಎಲ್‌ಇಡಿ ವಿದ್ಯುತ್‌ ಬಲ್ಬ್ಗಳಿಂದ ಸಿಂಗರಿಸಲಾಗಿದೆ. 

ಪ್ರತ್ಯೇಕ ಶೌಚಾಲಯ ವ್ಯವಸ್ಥೆ: ಸಭಾಂಗಣದ ಮಧ್ಯಭಾಗದಲ್ಲಿ ಆಕರ್ಷಕ ವೇದಿಕೆ ನಿರ್ಮಿಸ ಲಾಗಿದ್ದು, ವೇದಿಕೆ ಎರಡು ಬದಿ ಡ್ರೆಸ್ಸಿಂಗ್‌ ರೂಮ್‌ ಸಹ ನಿರ್ಮಿಸಲಾಗಿದೆ. ಗಣ್ಯರಿಗೆ, ಸಾರ್ವಜನಿಕರಿಗೆ ಪ್ರತ್ಯೇಕವಾಗಿ ಶೌಚಾಲಯ ವ್ಯವಸ್ಥೆ ಮಾಲಾಗಿದೆ. ಸಭಾಂಗಣವನ್ನು ನವ ನವೀನ ರೀತಿಯಲ್ಲಿ ನಿರ್ಮಿಸಲಾಗಿದೆ. 800 ಕ್ಕೂ ಹೆಚ್ಚು ಮಂದಿ ಕೂರುವ ವ್ಯವಸ್ಥೆ ಮಾಡಿರುವುದರಿಂದ ಜಿಲ್ಲಾಡಳಿತ ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳುವ ಸಭೆ, ಸಮಾರಂಭ ಹಾಗೂ ಬೃಹತ್‌ ಕಾರ್ಯಾಗಾರಗಳಿಗೆ ಈ ಸಭಾಂಗಣ ಬಳಕೆಯಾಗಲಿದೆ. ಗುಣಮಟ್ಟದ ಧ್ವನಿವರ್ಧಕ ಸೇರಿದಂತೆ ವಿಶೇಷ ಸೌಲಭ್ಯಗಳನ್ನು ಗಾಳಿ, ಬೆಳಕು ಬರುವ ರೀತಿಯಲ್ಲಿ ಸಭಾಂಗಣವನ್ನು ಸಿದ್ಧಪಡಿಸಲಾಗಿದೆ.

Advertisement

ಜಿಲ್ಲಾಡಳಿತ ಭವನದಲ್ಲಿ ನಿರ್ಮಿಸಲಾಗಿರುವ ಸಭಾಂಗಣ ಚೆನ್ನಾಗಿ ನಿರ್ಮಿಸಲಾಗಿದೆ. ಸುಮಾರು 800 ಮಂದಿ ಕೂತು ಕಾರ್ಯಕ್ರಮ ವೀಕ್ಷಣೆ ಮಾಡಬಹುದು. ಜಿಲ್ಲಾಡಳಿತ ಇದರ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಿಕೊಂಡು ಹೋಗಬೇಕು. ಬೃಹತ್‌ ಕಾರ್ಯಕ್ರಮಗಳ ಆಯೋಜನೆಗೆ ಉತ್ತಮ ಸಭಾಂಗಣ ಇದಾಗಿದೆ.
 ಶಿವಶಂಕರರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವರು

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಕೊನೆಗೂ ಹೊಸ ಸಭಾಂಗಣವನ್ನು ಲೋಕಾರ್ಪಣೆಗೊಳಿಸಿರುವುದು ಸಂತಸ ತಂದಿದೆ. ಸಭಾಂಗಣದ ಸ್ವತ್ಛತೆ, ನಿರ್ವಹಣೆ ಬಗ್ಗೆ ಜಿಲ್ಲಾಡಳಿತ ಆದ್ಯತೆ ನೀಡಬೇಕು.
ಎನ್‌.ಚಂದ್ರಶೇಖರ್‌, ಉಪನ್ಯಾಸಕ

Advertisement

Udayavani is now on Telegram. Click here to join our channel and stay updated with the latest news.

Next