ಹೊಸದಿಲ್ಲಿ: “ಪಾಕ್ ಆಕ್ರಮಿತ ಕಾಶ್ಮೀರದೊಳಕ್ಕೆ ಪ್ರವೇಶಿಸಿ ಸರ್ಜಿಕಲ್ ದಾಳಿ ನಡೆಸಿದ್ದೆವು. ಆದರೆ, ಅಲ್ಲಿಂದ ವಾಪಸ್ ಬರುವುದು ಸುಲಭದ ಮಾತಾಗಿರಲಿಲ್ಲ. ನಿರಂತರ ಗುಂಡಿನ ಚಕಮಕಿಯ ನಡುವೆಯೇ ಹಿಂದಿರುಗಬೇಕಾಗಿತ್ತು’!
ಸರ್ಜಿಕಲ್ ದಾಳಿಗೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಬಿಡುಗಡೆಯಾಗುತ್ತಿರುವ ಪುಸ್ತಕದಲ್ಲಿನ ಸೇನೆಯ ಹಿರಿಯ ಅಧಿಕಾರಿ ಮೇಜರ್ ಮೈಕ್ ಟ್ಯಾಂಗೋ ಅವರ ಅನುಭವದ ಮಾತಿದು. ಅವರು ಅನುಭವ ಗಳನ್ನೇ ಆಧಾರವಾಗಿ ಇಟ್ಟುಕೊಂಡು ಬರೆದಿ ರುವ “ಇಂಡಿಯಾಸ್ ಮೋಸ್ಟ್ ಫಿಯರ್‌ಲೆಸ್: ಟ್ರೂ ಸ್ಟೋರೀಸ್ ಆಫ್ ಮಿಲಿಟರಿ ಹೀರೋಸ್’ ಪುಸ್ತಕ ಇದೀಗ ಬಿಡುಗಡೆಗೆ ಸಿದ್ಧವಾಗಿದೆ.
ಉರಿ ದಾಳಿಗೆ ಪ್ರತೀಕಾರವಾಗಿ ಸರ್ಜಿಕಲ್ ದಾಳಿ ನಡೆಸುವ ತೀರ್ಮಾನಕ್ಕೆ ಬರಲಾಗಿದ್ದನ್ನು, ದಾಳಿಗೊಳಗಾಗಿದ್ದ ಎರಡು ಸೇನಾನೆಲೆಗ ಳಿಂದಲೇ ಯೋಧರನ್ನು ಆಯ್ಕೆ ಮಾಡಿಕೊಂಡು ಪ್ರತ್ಯೇಕ ಘಟಕ ಸ್ಥಾಪಿಸಿದ್ದನ್ನು, ಬಳಿಕ ಗಡಿ ಭಾಗದಲ್ಲಿ ಕಾರ್ಯನಿರ್ವಹಿಸುವ ಪ್ರಮುಖ ಹುದ್ದೆಗಳಿಗೆ ಅವರನ್ನು ನಿಯೋಜಿಸಿದ್ದನ್ನು ಪುಸ್ತಕದಲ್ಲಿ ವಿವರಿಸಲಾಗಿದೆ. ಅಲ್ಲದೆ, ದಾಳಿ ನಡೆಸಬೇಕಾದ ಭೂಪ್ರದೇಶ ಗುರುತಿಸಿದ್ದು, ಗುಪ್ತಚರ ಪಡೆಯ ಬೆಂಬಲ ಪಡೆದಿರುವ ವಿಚಾರಗಳನ್ನೆಲ್ಲ ಬಿಚ್ಚಿಟ್ಟಿದ್ದಾರೆ. ತಾಂತ್ರಿಕವಾಗಿ ನಿರ್ಣಯಿಸುವುದಾದರೆ ಇದು ಕೌಶಲ ಹಾಗೂ ಉತ್ತಮ ಹೆಜ್ಜೆ ಎಂದು ಮೇಜರ್ ಹೇಳಿಕೊಂಡಿದ್ದಾರೆ.
ಟ್ಯಾಂಗೋ ಇಡೀ ದಾಳಿಯ ಉಸ್ತುವಾರಿ ಯನ್ನು ಹೊತ್ತಿದ್ದರು. ಪ್ರತಿಯೊಬ್ಬರನ್ನೂ ವಿಶ್ವಾಸಕ್ಕೆ ಪಡೆದುಕೊಂಡು ತಮ್ಮ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ ಎಂದು ಸೇನಾ ತಂಡದ ನಾಯಕರಲ್ಲೊಬ್ಬರಾದ ಮಾಜ್ ಹೇಳಿಕೊಂಡಿದ್ದಾರೆ. ಒಟ್ಟು 14 ಅನುಭವ ಕಥನಗಳನ್ನು ಹೊಂದಿರುವ ಪುಸ್ತಕವನ್ನು ಶಿವ್ ಅರೂರ್ ಮತ್ತು ರಾಹುಲ್ ಸಿಂಗ್ ಜಂಟಿಯಾಗಿ ಬರೆದಿದ್ದಾರೆ. ಪೆಂಗ್ವಿನ್ ಇಂಡಿಯಾ ಪ್ರಕಾಶಿಸಿದೆ.