Advertisement

India; ನಾಸಾ ಪತ್ತೆ ಹಚ್ಚಿದ್ದ ಕ್ಷುದ್ರಗ್ರಹಕ್ಕೆ ಭಾರತೀಯ ವಿಜ್ಞಾನಿ ಜಯಂತ್‌ ಹೆಸರು

12:44 AM Mar 23, 2024 | Team Udayavani |

ಹೊಸದಿಲ್ಲಿ: 2005ರಲ್ಲಿ ನಾಸಾದ ಮಾರ್ಕ್‌ ವಿಲಿಯಂ ಬ್ಯುಯಿ(ಎಮ್‌ಡಬ್ಲ್ಯು ಬ್ಯುಯಿ) ದೂರದರ್ಶಕ ಪತ್ತೆ ಹಚ್ಚಿದ್ದ 2005ಎಕ್ಸ್‌ 296(215884) ಹೆಸರಿನ ಕ್ಷುದ್ರ ಗ್ರಹಕ್ಕೆ ಭಾರತೀಯ ವಿಜ್ಞಾನಿಯ ಹೆಸರನ್ನು ಮರು ನಾಮಕರಣ ಮಾಡಲಾಗಿದೆ.

Advertisement

ಬಾಹ್ಯಾಕಾಶ ಸಂವಹನ, ಅತಿನೇರಳೆ ಖಗೋಳ ಶಾಸ್ತ್ರ, ಬಾಹ್ಯಾಕಾಶ ಯೋಜನೆಗಳಲ್ಲಿ ಭಾರತೀಯ ಖಗೋಳ ಶಾಸ್ತ್ರಜ್ಞ ಪ್ರೊ| ಜಯಂತ್‌ ಮೂರ್ತಿ ಅವರ ಗಮನಾರ್ಹ ಸಾಧನೆಗಳನ್ನು ಗುರ್ತಿಸಿ ಅಂತಾರಾಷ್ಟ್ರೀಯ ಖಗೋಳ ಒಕ್ಕೂಟ(ಐಎಯು) ಈ ಗೌರವ ನೀಡಿದೆ. ಪ್ರೊ| ಮೂರ್ತಿ ಅವರು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಆಸ್ಟ್ರೋಫಿಸಿಕ್ಸ್‌ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿ, 2019ರಲ್ಲಿ ನಿವೃತ್ತಿ ಹೊಂದಿದ್ದಾರೆ. ಕ್ಷುದ್ರ ಗ್ರಹವು ಮಂಗಳ ಮತ್ತು ಗುರು ಗ್ರಹಗಳ ನಡುವೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next