Advertisement
ವಿಟ್ಲ: ವಿಟ್ಲ ಹಾಲು ಸರಬರಾಜು ಸಂಘವೆಂಬ ಹೆಸರಲ್ಲಿ ಸ್ವತಂತ್ರವಾಗಿ ಈ ಸಂಘವು 1959ರ ಜೂ. 13ರಂದು ವಿಟ್ಲ ಮತ್ತು ಸುತ್ತಮುತ್ತಲ ಹೈನುಗಾರರಿಂದ ಸ್ಥಾಪನೆ ಯಾಯಿತು. ವಿಟ್ಲ ಪೇಟೆಯಲ್ಲಿ ಬಾಡಿಗೆ ಕಟ್ಟಡ ದಲ್ಲಿ ಹಾಲು ಸಂಗ್ರಹ ಪ್ರಾರಂಭಿಸಲಾಗಿತ್ತು. 1982ರಲ್ಲಿ ಈ ಸಂಘವು ದ.ಕ. ಹಾಲು ಒಕ್ಕೂ ಟದ ವ್ಯಾಪ್ತಿಗೆ ಸೇರಿಕೊಂಡಿತು. ಇಂದಿಗೂ ಅದೇ ಬಾಡಿಗೆ ಕಟ್ಟಡದಲ್ಲಿ ಹಾಲು ಸಂಗ್ರಹಿಸಲಾ ಗುತ್ತಿದೆಯಾದರೂ ಬೊಬ್ಬೆಕೇರಿಯಲ್ಲಿ 7 ಸೆಂಟ್ಸ್ ಭೂಮಿ ಖರೀದಿಸಿ, ಸ್ವಂತ ನಿವೇಶನದಲ್ಲಿ 1996 ರಲ್ಲಿ ಸ್ವಂತ ಕಟ್ಟಡ ನಿರ್ಮಿಸಲಾಗಿದೆ. ಇದರಲ್ಲಿ ಗೋದಾಮು, ಮೀಟಿಂಗ್ ಹಾಲ್ ಇದೆ.
Related Articles
ಸಂಘಕ್ಕೆ ನಿರಂತರ ಹಾಲು ಪೂರೈಸುವವರೇ ಸಂಘದ ನಿರ್ದೇಶಕರಾಗ ಬೇಕೆಂಬ ನಿಯಮವಿರುವುದರಿಂದ ನೈಜ ಹೈನುಗಾರರೇ ಸಂಘದ ನಿರ್ದೇಶಕರಾಗಿ ಆಯ್ಕೆಯಾಗುತ್ತಾರೆ. ಈ ಸಂಘದ ನಿರ್ದೇಶಕರನ್ನು, ಅಧ್ಯಕ್ಷ-ಉಪಾಧ್ಯಕ್ಷರನ್ನು ಅವಿರೋಧವಾಗಿಯೇ ಆಯ್ಕೆ ಮಾಡಿಕೊಂಡು ಬಂದಿರುವುದು ವಿಶೇಷವಾಗಿದೆ.
Advertisement
ವಿಶೇಷ ಯೋಜನೆಗಳುಹೈನುಗಾರರಿಗೆ ವಿಶೇಷ ಯೋಜನೆಗಳನ್ನು ನೀಡಿ, ಸರಕಾರದಿಂದ ಮತ್ತು ಹಾಲು ಒಕ್ಕೂಟದಿಂದ ಸಿಗುವ ಸವಲತ್ತುಗಳನ್ನು ಹಾಲು ಪೂರೈಸುವ ಸದಸ್ಯರಿಗೆ ಒದಗಿಸಲಾಗುತ್ತಿದೆ. ಇಂದು ಈ ಭಾಗದ ಅತ್ಯಂತ ಹೆಚ್ಚು ಹಾಲು ಸಂಗ್ರಹ ಮತ್ತು ಮಾರಾಟ ಕೇಂದ್ರವಾಗಿ ಸಮಾಜಕ್ಕೆ ಉಪಯುಕ್ತವಾಗಿದೆ. ಪೇಟೆಯ ಅದೆಷ್ಟೋ ಮಂದಿ ಈ ಸಂಘದ ಹಾಲನ್ನು ಅವಲಂಬಿಸಿದ್ದಾರೆ. ಗುಣಮಟ್ಟದ ಹಾಲು ಪೂರೈಕೆ, ದ.ಕ. ಹಾಲು ಒಕ್ಕೂಟದವರ ಸಹಕಾರದಿಂದ ಸಂಘದ ಅಭಿವೃದ್ಧಿಗೆ ಸರಕಾರದಿಂದ, ಒಕ್ಕೂಟದಿಂದ ಸಿಗುವ ಎಲ್ಲ ಸವಲತ್ತುಗಳನ್ನು ಸದಸ್ಯರಿಗೆ ತಲುಪಿಸಲಾಗುತ್ತದೆ. ಸಿಬಂದಿಯನ್ನು ಖಾಯಂ ಮಾಡಲಾಗಿದ್ದು ಎಲ್ಲ ಸೌಲಭ್ಯ ಸಿಗುವಂತಾಗಿದೆ.
– ಸೇರಾಜೆ ಕೆ.ಐ. ಸುಬ್ರಹ್ಮಣ್ಯ ಭಟ್, ಅಧ್ಯಕ್ಷರು ಮಾಜಿ ಅಧ್ಯಕ್ಷರು
ಸ್ಥಾಪಕಾಧ್ಯಕ್ಷ ಉರಿಮಜಲು ವೆಂಕಪ್ಪಯ್ಯ, ಲೂಯಿಸ್ ಸಿಕ್ವೇರ, ನೂಜಿ ಸುಬ್ರಹ್ಮಣ್ಯ ಭಟ್, ಮಂಜುನಾಥ ನಾಯಕ್, ಕಾಂತಪ್ಪ ಆಳ್ವ, ಕೂಡೂರು ಕೃಷ್ಣ ಭಟ್, ಮೋಹನ ಶೆಟ್ಟಿ ವಿಟ್ಲ, ಆಲಂಗಾರು ಬಾಲಕೃಷ್ಣ ಭಟ್, ಪುರುಷೋತ್ತಮ ಭಟ್ ಬದನಾಜೆ, ಮೋಹನ ಗೌಡ ಕಾಯರ್‌ಮಾರ್, ಮಾಜಿ ಕಾರ್ಯದರ್ಶಿಗಳು
ಸ್ಥಾಪಕ ಕಾರ್ಯದರ್ಶಿ ಜನಾರ್ದನ ಭಟ್ ಪೆರುವಾಯಿ, ರೋಹಿಣಿ, ಅಲೆಕ್ಸ್ ಕ್ರಾಸ್ತಾ, ಸಂಜೀವ ಗೌಡ, ರಾಮ ಭಟ್ ಕೆದಿಮಾರು, ಮಾಧವ ಕುದ್ರೆತ್ತಾಯ, ಪುರುಷೋತ್ತಮ ಭಟ್. - ಉದಯಶಂಕರ್ ನೀರ್ಪಾಜೆ