Advertisement
ಬಂಟ್ವಾಳ ತಾ|ನ ಪಿಲಾತಬೆಟ್ಟು ಗ್ರಾಮದ ಮೂರ್ಜೆಯಲ್ಲಿರುವ ಪಿಲಾತಬೆಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘ ತನ್ನ ವ್ಯಾಪ್ತಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತ ಪರಿಸರದ ಹೈನುಗಾರ ರರಿಗೆ ಆಸರೆಯಾಗಿದೆ. ಪ್ರಸ್ತುತ ಸಂತೋಷ್ ಕುಮಾರ್ ಶೆಟ್ಟಿ ಕುಂಟಜಾಲು ಅಧ್ಯಕ್ಷರಾಗಿ, ಜಯಲಕ್ಷ್ಮೀ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸಂಘವು ಪ್ರತಿ ವರ್ಷ ಹಾಲು ಉತ್ಪಾದಕರಿಗೆ ಬೋನಸ್ ಹಾಗೂ ಪ್ರೋತ್ಸಾಹಕರ ಬಹುಮಾನ ನೀಡುವ ಜತೆಗೆ ತರಬೇತಿ ಪ್ರವಾಸಗಳನ್ನು ಆಯೋಜಿಸಿದೆ. ಒಕ್ಕೂಟದ ಸಹಯೋಗದಿಂದ ಸದಸ್ಯ ರೈತರಿಗೆ ಅನಿಲ ಸ್ಥಾವರ, ಹಾಲು ಕರೆಯುವ ಯಂತ್ರ, ಹಟ್ಟಿಗೆ ರಬ್ಬರ್ ಮ್ಯಾಟ್, ಹಸುರು ಹುಲ್ಲು ಬೆಳೆಸಲು ಸಹಾಯಧನ ನೀಡಿ ಪ್ರೋತ್ಸಾಹಿಸುತ್ತದೆ. ಸಂಘದಲ್ಲಿ ಪಶುಗಳ ಕೃತಕ ಗರ್ಭಧಾರಣೆ ಸೌಲಭ್ಯವಿದ್ದು, ವ್ಯಾಪ್ತಿಯಲ್ಲದೇ ಹೊರಗಿನ ಗ್ರಾಮಗಳಿಗೂ ಚಿಕಿತ್ಸಾ ಸೇವೆ ನೀಡುತ್ತಿದೆ.
Related Articles
ಜಿ.ಕೆ. ಕೇಶವ ಪ್ರಭು, ಕೆ. ಪುರಂದರ ಭಟ್, ಕೆ. ಗೋವಿಂದ ಭಟ್, ದೇವಪ್ಪ ಶೆಟ್ಟಿ ಕುಂಟಜಾಲ್, ಯು.ಎಸ್. ಚಂದ್ರಶೇಖರ್ ಭಟ್, ಎಂ.ಡಿ. ಗಣೇಶ್, ದೇವಪ್ಪ ಶೆಟ್ಟಿ ಕುಂಟಜಾಲ್, ಶ್ರೀಧರ ಶೆಟ್ಟಿ ಭಂಡಾರದಬೆಟ್ಟು, ವಿಟ್ಟಲ ಶೆಟ್ಟಿ, ನಾರಾಯಣ ಶೆಟ್ಟಿ ಕುಮಂಗಿಲ.
Advertisement
ಮಾಜಿ ಕಾರ್ಯದರ್ಶಿಗಳುಶೀನ ಶೆಟ್ಟಿ, ದೇವಪ್ಪ ಶೆಟ್ಟಿ, ಅಣ್ಣು ಡಿ., ಮೋಹನ್ ಆಚಾರ್ಯ, ಪ್ರದೀಪ್ ಕುಮಾರ್ ಶೆಟ್ಟಿ. ಕೃಷಿಯೊಂದಿಗೆ ಉಪ ಕಸುಬಾಗಿ ಹೈನುಗಾರಿಕೆಯನ್ನು ನಡೆಸ ಬಹುದು. ಸಮರ್ಪಕ ಮಾರ್ಗ ದರ್ಶನ, ಮಾಹಿತಿಗಳಿಂದ ಹೈನು ಗಾರಿಕೆಯಿಂದ ಆರ್ಥಿಕವಾಗಿ ಯಶಸ್ಸು ಗಳಿಸಬಹುದು. ಯುವ ಜನತೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಪ್ರಸ್ತುತ ಸಂಘದ ಪರಿಸರದಲ್ಲಿ ಹೈನುಗಾರ ರಿಗೆ ಉತ್ತಮ ಹಾಲು ದೊರಕಿ ಸಲು ಬೇಕಾದ ಮಾಹಿತಿ, ನೆರವು ನೀಡಲಾಗುತ್ತಿದೆ.
– ಸಂತೋಷ್ ಕುಮಾರ್ ಶೆಟ್ಟಿ ಕುಂಟಜಾಲ್, ಅಧ್ಯಕ್ಷರು ಪ್ರಶಸ್ತಿ, ಸಾಧನೆಗಳು
ಸಂಘಕ್ಕೆ ಒಕ್ಕೂಟದ ರಜತ ಮಹೋತ್ಸವ ಸಂದರ್ಭದಲ್ಲಿ ತಾಲೂಕಿನ ಉತ್ತಮ ಸಂಘವೆಂಬ ಪ್ರಶಸ್ತಿ ಬಂದಿದೆ. ಸಂಘದ ನಿರ್ದೇಶಕರೂ ಆಗಿರುವ ಕ್ಸೇವಿಯರ್ ಅವರಿಗೆ ಉತ್ತಮ ಹೈನುಗಾರ ಪ್ರಶಸ್ತಿ ಲಭಿಸಿದೆ. 1992ರಲ್ಲಿ ಸ್ವಂತ ಕಟ್ಟಡವನ್ನು ನಿರ್ಮಿಸಿದ ಸಂಘವು ಶುದ್ಧ ಹಾಲು ಉತ್ಪಾದನೆಯ ದೃಷ್ಟಿಯಿಂದ ಪ್ರಥಮವಾಗಿ ಎಲ್ಲ ಹಾಲು ಉತ್ಪಾದಕರಿಗೆ ಸ್ಟೀಲ್ ಕ್ಯಾನ್ ಹಂಚಿದ ಹೆಗ್ಗಳಿಕೆ ಹೊಂದಿದೆ. ಸಂಘದ ವ್ಯಾಪ್ತಿಯಲ್ಲಿ ಇತರ ಸಂಘಗಳ ಸ್ಥಾಪನೆಗೂ ಕಾರಣೀಭೂತವಾಗಿದೆ. – ರತ್ನದೇವ್ ಪುಂಜಾಲಕಟ್ಟೆ