Advertisement

ದಲಿತ ಯುವಕನ ಮೇಲೆ ಹಲ್ಲೆಗೆ ಖಂಡನೆ

05:12 PM Mar 29, 2019 | Team Udayavani |

ಮಾನ್ವಿ: ತಾಲೂಕಿನ ಸಂಗಾಪುರು ಗ್ರಾಮದಲ್ಲಿ ಅಸ್ಪೃಶ್ಯತೆ ವಿರೋಧಿಸಿದ ದಲಿತ ಯುವಕನ ಮೇಲೆ ಸವರ್ಣೀಯರು ನಡೆಸಿದ ದೌರ್ಜನ್ಯ ಖಂಡಿಸಿ ಮತ್ತು ಸಮಸ್ಯೆ ಇತ್ಯರ್ಥಕ್ಕೆ ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

Advertisement

ತಾಲೂಕಿನ ಸಂಗಾಪುರು ಗ್ರಾಮದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅಸ್ಪೃಶ್ಯರಿಗೆ ಪ್ರವೇಶ ನಿರಾಕರಿಸಿರುವುದು ಸಂವಿಧಾನ ಬಾಹೀರವಾಗಿದೆ. ದಲಿತರ ಕಾಲೋನಿಗೆ ಕುಡಿಯುವ ನೀರು ಒದಗಿಸುವ ಸಲುವಾಗಿ ಗ್ರಾಮಕ್ಕೆ ಹೋಗಿದ್ದ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳನ್ನು ಗ್ರಾಮದ 200-300 ಜನ ಸವರ್ಣೀಯರ ಗುಂಪು ಸೇರಿ ದಲಿತರ ಕೇರಿಗೆ ನೀರು ಒದಗಿಸಬೇಡಿ ಇದರಿಂದ ನಮಗೆ ತೊಂದರೆಯಾಗುತ್ತದೆ ಎಂದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ.

ಈ ವೇಳೆಯಲ್ಲಿ ದಲಿತ ಯುವಕರು ನಮಗೆ ಕುಡಿಯಲು ನೀರಿಲ್ಲ. ಇದಕ್ಕೆ ಯಾಕೆ ಅಡ್ಡಿಪಡಿಸುತ್ತಿದ್ದಿರಿ ಎಂದು ಪ್ರಶ್ನಿಸಿದ್ದಕ್ಕೆ ದಲಿತ ಯುವಕರನ್ನು ಸವರ್ಣೀಯರು ಸಾರ್ವಜನಿಕವಾಗಿ ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.

ಕೂಡಲೇ ಜಿಲ್ಲಾಡಳಿತ ಸಂಗಾಪುರು ಗ್ರಾಮಕ್ಕೆ ಭೇಟಿ ನೀಡಿ ಸೂಕ್ತ ಕಾನೂನು ಕ್ರಮ ತೆಗೆದುಕೊಂಡು ಗ್ರಾಮದಲ್ಲಿ ಶಾಂತಿ ಕಾಪಾಡಬೇಕು. ಜೀವ ಭಯದಲ್ಲಿರುವ ಅಸ್ಪೃಶ್ಯ ದಲಿತರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ದಲಿತ ಮುಖಂಡರಾದ ರವೀಂದ್ರ ಜಾನೇಕಲ್‌, ಪ್ರಭುರಾಜ ಕೊಡ್ಲಿ, ಬಸವರಾಜ ನಕ್ಕುಂದಿ, ಅಬ್ರಾಹಂ ಹೊನ್ನಟಿಗಿ, ಯಲ್ಲಪ್ಪ ಬಾದರದಿನ್ನಿ ವಕೀಲರು, ಶಿವಗೇನಿ ಕಪಗಲ್‌, ಸದಾನಂದ ಪನ್ನೂರು, ಆಕಾಶ ಮ್ಯಾತ್ರಿ, ಲಾರೆನ್ಸ್‌ ಮಾನ್ವಿ, ವೀರೇಶ ಹರವಿ, ಮರಿಸ್ವಾಮಿ ಅಮರಾವತಿ, ವಸಂತ ಕೊಟೆಕಲ್‌, ನರಸಿಂಹ ಈಟೇಕಾರ್‌, ಹನುಮಂತರಾಯ ಸುಂಕೇಶ್ವರ, ಮುತ್ತಣ್ಣ ಚಾಗಭಾವಿ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next