ವಿಜಯಪುರ: ಜಿಲ್ಲೆಯಲ್ಲಿ ಸೈನಿಕನ ಮೇಲೆ ಹಲ್ಲೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿರುವ ಸೈನಿಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ್ದಾನೆ.
ಬಸವನ ಬಾಗೇವಾಡಿ ತಾಲೂಕಿನ ಕುದರೆಸಾಲವಾಡಗಿ ಗ್ರಾಮದ ಸಂತೋಷ ಶಿವಪ್ಪ ಹಟ್ಟಿ(30) ಸೇನೆಯಲ್ಲಿ ಹವಾಲ್ದಾರ ಆಗಿದ್ದು, 10 ವರ್ಷದಿಂದ ಸೇನೆಯಲ್ಲಿದ್ದಾರೆ.
ತನ್ನ ಮದುವೆಗಾಗಿ ರಜೆ ಮೇಲೆ ಗ್ರಾಮಕ್ಕೆ ಬಂದಿದ್ದು, ಗ್ರಾಮದ ಅರವಿಂದ ಕಡೇಮನಿ, ರಾಮಪ್ಪ ಕಡೇಮನಿ, ಬಸಗುಂಡಪ್ಪ ನಡುವಿನ ಮನಿ, ಮಲ್ಲವ್ವ ಕಡೇಮನಿ, ಭಾರತಿ ಕಡೇಮನಿ, ಸಾರ್ ಕಡೇಮನಿ, ರಮೇಶ ನಡುವಿನಮನಿ ಅವರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವುದಾಗಿ ಬಸವನ ಬಾಗೇವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೈನಿಕ ಸಂತೋಷ ಕಟ್ಟಿ ಅವರ ತಂದೆ, ತಾಯಿ ಮತ್ತು ಕುಟುಂಬದವರಿಗೆ ಆರೋಪಿಗಳು ಈ ಹಿಂದೆ ಹಲ್ಲೆ ನಡೆಸಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ನಮ್ಮ ಕುಟುಂಬದ ಏಳಿಗೆ ಸಹಿಸದೇ ಈ ದುಷ್ಕೃತ್ಯ ನಡೆಸಿದ್ದಾರೆ ಎಂದು ಸಂತೋಷ ಪೊಲೀಸ್ ದೂರಿನಲ್ಲಿ ಆರೋಪಿಸಿದ್ದಾನೆ.
ತೀವ್ರವಾಗಿ ಗಾಯಗೊಂಡಿರುವ ಸೈನಿಕ ಸಂತೋಷ ಬಸವನಬಾಗೇವಾಡಿ ತಾಲೂಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ, ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.