Advertisement

ಆ್ಯಶಸ್‌ ಸರಣಿಗೆ ಇಂಗ್ಲೆಂಡ್‌ ತಂಡ

06:50 AM Sep 28, 2017 | |

ಲಂಡನ್‌: ಬಾರ್‌ನಲ್ಲಿ ನಡೆದ ಜಗಳದಲ್ಲಿ ಕೈಗೆ ಗಾಯ ಮಾಡಿಕೊಂಡಿದ್ದ ಬೆನ್‌ ಸ್ಟೋಕ್ಸ್‌ ಅವರನ್ನು ಮುಂಬರುವ ಆ್ಯಶಸ್‌ ಸರಣಿಗಾಗಿ ಆಸ್ಟ್ರೇಲಿಯಕ್ಕೆ ಪ್ರವಾಸಗೈಯುವ 16 ಸದಸ್ಯರ ಇಂಗ್ಲೆಂಡ್‌ ತಂಡದಲ್ಲಿ ಸೇರ್ಪಡೆಗೊಳಿಸಲಾಗಿದೆ.

Advertisement

ಬಾರ್‌ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಸ್ಟೋಕ್ಸ್‌ ಅವರನ್ನು ವಿಚಾರಣೆ ಬಳಿಕ ಬಿಡುಗಡೆ ಮಾಡಲಾಗಿದೆ. ಈ ಕಾರಣಕ್ಕಾಗಿ ಅವರನ್ನು ಓವಲ್‌ನಲ್ಲಿ ಬುಧವಾರ ನಡೆಯುವ ವೆಸ್ಟ್‌ಇಂಡೀಸ್‌ ವಿರುದ್ಧದ ನಾಲ್ಕನೇ ಏಕದಿನ ಪಂದ್ಯಕ್ಕೆ ಕೈಬಿಡಲಾಗಿತ್ತು.

ಬೆನ್‌ ಅವರ ಕೈಯ ಸ್ಕ್ಯಾನ್‌ ನಡೆಸಲಾಗಿದೆ. ಸಣ್ಣ ಗಾಯವಾಗಿರುವುದು ಕಂಡು ಬಂದಿದೆ. ಇನ್ನೂ ಕೆಲವು ಪರೀಕ್ಷೆ ನಡೆಸುವ ಅಗತ್ಯವಿದೆ ಮತ್ತು ಅವರು ಆ್ಯಶಸ್‌ ಸರಣಿಯ ಎಲ್ಲ ಟೆಸ್ಟ್‌ ಆಡಲು ಫಿಟ್‌ ಆಗಲಿದ್ದಾರೆ ಎಂದು ಇಂಗ್ಲೆಂಡ್‌ ಆ್ಯನ್‌x ವೇಲ್ಸ್‌ ಕ್ರಿಕೆಟ್‌ ಮಂಡಳಿ (ಇಸಿಬಿ) ಕ್ರಿಕೆಟ್‌ ನಿರ್ದೇಶಕ ಆ್ಯಂಡ್ರೂé ಸ್ಟ್ರಾಸ್‌ ಹೇಳಿದ್ದಾರೆ.

ಸದ್ಯದ ಮಟ್ಟಿಗೆ ಅವರನ್ನು ಉಪನಾಯಕರನ್ನಾಗಿ ಉಳಿಸಿಕೊಳ್ಳಲಾಗಿದೆ. ಜೋ ರೂಟ್‌ ತಂಡದ ನಾಯಕರಾಗಿರುತ್ತಾರೆ ಎಂದವರು ತಿಳಿಸಿದರು.

ಇಂಗ್ಲೆಂಡ್‌ ತಂಡದಲ್ಲಿ ಮೂವರು ಹೊಸಮುಖಗಳಿದ್ದಾರೆ. 23ರ ಹರೆಯದ ಸೋಮರ್ಸೆಟ್‌ನ ವೇಗಿ ಕ್ರೆಗ್‌ ಓವರ್ಟನ್‌, 20ರ ಹರೆಯದ ಹ್ಯಾಂಪ್‌ಶೈರ್‌ನ ಲೆಗ್‌ ಸ್ಪಿನ್ನರ್‌ ಮಾಸನ್‌ ಕ್ರೇನ್‌ ಮತ್ತು ಸರ್ರೆ ವಿಕೆಟ್‌ಕೀಪರ್‌ 24ರ ಹರೆಯದ ಬೆನ್‌ ಫೋಕೆಸ್‌ ತಂಡದಲ್ಲಿರುವ ಹೊಸ ಆಟಗಾರರು. ಇವರಲ್ಲಿ ಕ್ರೇನ್‌ ಅವರು ಮೊಯಿನ್‌ ಅಲಿಗೆ ನೆರವಾಗಲಿದ್ದಾರೆ.

Advertisement

ದಕ್ಷಿಣ ಆಫ್ರಿಕಾ (3-1) ಮತ್ತು ವೆಸ್ಟ್‌ಇಂಡೀಸ್‌ (2-1) ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್‌ ಸರಣಿಯಲ್ಲಿ ಇಂಗ್ಲೆಂಡ್‌ ಜಯಭೇರಿ ಬಾರಿಸಿತ್ತು. ಇದೀಗ ರೂಟ್‌ ನಾಯಕತ್ವದಲ್ಲಿ ಇಂಗ್ಲೆಂಡ್‌ ಆಸ್ಟ್ರೇಲಿಯದಲ್ಲೂ ಸರಣಿ ಗೆಲುವಿನ ವಿಶ್ವಾಸದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next