Advertisement

“ಕಲೆಯಿಂದ ಗ್ರಾಮದ ಸಂಘಟನೆ ನಡೆಯಲಿ’

11:08 PM May 06, 2019 | Team Udayavani |

ಪಡುಪಣಂಬೂರು: ಗ್ರಾಮೀಣ ಭಾಗದ ಕಲಾವಿದರನ್ನು ಪ್ರೋತ್ಸಾಹಿಸಿದಂತೆ, ಕಲೆಯಿಂದ ಎಲ್ಲ ಸಂಘಟನೆಗಳು ಒಂದೇ ವೇದಿಕೆಯ ಮೂಲಕ ಗ್ರಾಮದ ಅಭಿವೃದ್ಧಿಯನ್ನು ನಡೆಸಲಿ ಎಂದು ಉದ್ಯಮಿ ಪಠೇಲ್‌ ವಾಸುದೇವ ರಾವ್‌ ಪುನರೂರು ಹೇಳಿದರು.

Advertisement

ಕೆರೆಕಾಡು ಶ್ರೀ ದುರ್ಗಾಪರಮೇಶ್ವರೀ ಸಭಾಭವನದಲ್ಲಿ ಕೆರೆಕಾಡಿನ ಮೋಕೆದ ಕಲಾವಿದೆರ್‌ ಸಂಯೋಜನೆಯಲ್ಲಿ ನಡೆದ ಕಲಾ ವೈಭವ ಕಾರ್ಯ ಕ್ರಮದ ಸಮಾರೋಪ ಸಮಾ ರಂಭದಲ್ಲಿ ವಿವಿಧ ಸಾಧಕರನ್ನು ಸಮ್ಮಾನಿಸುವ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಹಿಸಿ ಅವರು ಮಾತನಾಡಿದರು.

ಸಮ್ಮಾನ
ಕೃಷಿಕ ಐತಪ್ಪ ಮೂಲ್ಯ, ನಿವೃತ್ತ ಯೋಧ ಹರೀಶ್‌ ಕೆ., ಪ್ರಸೂತಿ ತಜ್ಞೆ ಸರೋಜನಿ ಭೋಜ ದೇವಾಡಿಗ, ಶ್ಮಶಾನ ನಿರ್ವಾಹಕ ದಯಾನಂದ ಶೆಟ್ಟಿಗಾರ್‌, ಸಾಮೂ ಹಿಕ ವಿವಾಹ ಸಂಘಟನೆಗೆ ನೌಶದ್‌ ಕೆ. ಮೊಹಮ್ಮದ್‌, ಕಲೆಗಾರಿಕೆ ಶಂಕರ್‌ ವಿ. ಆಚಾರ್ಯ, ಯಕ್ಷಗಾನ ಸಾಧಕ ಅಜಿತ್‌ ಕುಮಾರ್‌, ಗಾಯಕ ದಿನೇಶ್‌ ಪುನರೂರು, ಕಂಬಳ ಓಟಗಾರ ಅಭಿಷೇಕ್‌ ಕೆ. ದೇವಾಡಿಗ, ಪ್ರತಿಭಾನ್ವಿತ ವಿದ್ಯಾರ್ಥಿನಿಯರಾದ ಲಿಖೀತಾ, ಅಮೃತಾ, ಶಿಕ್ಷಕಿಯರಾದ ಗಾಯತ್ರಿ ಉಮೇಶ್‌ ದೇವಾಡಿಗ, ಜಯಲಕ್ಷಿ$¾à ಪಿ., ಸಮಾಜ ಸೇವೆಗಾಗಿ ಮಾಧವ ಶೆಟ್ಟಿಗಾರ್‌, ಪಡುಪಣಂಬೂರು ಉಲ್ಲಾಸ ನವಜೀವನ ಸಮಿತಿಯ ಸದಸ್ಯರನ್ನು ಸಮ್ಮಾನಿಸಲಾಯಿತು. ವಿವಿಧ ಆಟೋಟ ಸ್ಪರ್ಧೆಯ ಬಹುಮಾನವನ್ನು ವಿತರಿಸಲಾಯಿತು.

ಪುನರೂರು ವಿಪ್ರ ಸಂಪದದ ಅಧ್ಯಕ್ಷ ಸುರೇಶ್‌ ರಾವ್‌, ಕಲ್ಲಾಪು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದ ಮೊಕ್ತೇಸರ ಬಿ. ರತ್ನಾಕರ ಯಾನೆ ಕಾಂತಣ್ಣ ಗುರಿಕಾರ, ನಿವೃತ್ತ ಶಿಕ್ಷಕ ಸದಾಶಿವ ಆಚಾರ್ಯ, ಮುಂಬಾಯಿಯ ಉದ್ಯಮಿ ನಾಗರಾಜ್‌ ಅಮೀನ್‌, ಹಿರಿಯ ರಂಗ ಕಲಾವಿದ ದೂಮಪ್ಪ ಬಂಗೇರ, ಕೆರೆಕಾಡು ಶ್ರೀ ದುರ್ಗಾಪರಮೇಶ್ವರೀ ಭಜನ ಮಂದಿರದ ಅಧ್ಯಕ್ಷ ಜಿ. ಮನೋಹರ್‌ ಕುಂದರ್‌, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ದಿವೇಶ್‌ ದೇವಾಡಿಗ, ಕೆರೆಕಾಡು ಶ್ರೀ ವಿನಾಯಕ ಯಕ್ಷಗಾನ ಮೇಳದ ಅಧ್ಯಕ್ಷ ಜಯಂತ ಅಮೀನ್‌, ಅಯ್ಯಪ್ಪ ಭಕ್ತ ವೃಂದದ ಅಧ್ಯಕ್ಷ ರವೀಂದ್ರ ಕುಮಾರ್‌, ಶ್ರೀ ದುರ್ಗಾ ಶಕ್ತಿ ಮಹಿಳಾ ಮಂಡಲದ ಅಧ್ಯಕ್ಷೆ ರವಿಕಲಾ, ಕೆರೆಕಾಡು- ಬೆಳ್ಳಾಯರು ತುಡರ್‌ ಫ್ರೆಂಡ್ಸ್‌ನ ರಾಘವೇಂದ್ರ ಬಂಜನ್‌, ಕೆರೆಕಾಡು ಯೂತ್‌ ಫ್ರೆಂಡ್ಸ್‌ನ ಅಧ್ಯಕ್ಷ ಸುಂದರ ಆಚಾರ್ಯ, ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಶ್ರೀನಿವಾಸ ಆಚಾರ್ಯ, ಕೆರೆಕಾಡು ಗೆಳೆಯರ ಬಳಗದ ಅಧ್ಯಕ್ಷ ಸಿರಾಜ್‌, ರುದ್ರಭೂಮಿ ಸಮಿತಿಯ ಕಾರ್ಯದರ್ಶಿ ಮಾಧವ ಶೆಟ್ಟಿಗಾರ್‌, ಮೋಕೆದ ಕಲಾವಿದೆರ್‌ನ ಗಣೇಶ್‌, ಭಾಸ್ಕರ ಶೆಟ್ಟಿಗಾರ್‌, ನಾಗರಾಜ್‌ ಭಟ್‌, ಹೇಮಚಂದ್ರ ಶೆಟ್ಟಿಗಾರ್‌ ಮತ್ತಿತರರು ಉಪಸ್ಥಿತರಿದ್ದರು.ಗಾಯಿತ್ರಿ ಉಮೇಶ್‌ ದೇವಾಡಿಗ ಬಹುಮಾನಿ ತರನ್ನು ಪರಿಚಯಿಸಿದರು, ಮಾಧವ ಶೆಟ್ಟಿಗಾರ್‌ ವಂದಿಸಿದರು, ರಾಜೇಶ್‌ಕುಮಾರ್‌ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next