Advertisement

ಬದುಕು ರೂಪಿಸಿದ ಊರಿಗೆ ವಿದೇಶಿಗನ ಆಗಮನ

04:42 PM Dec 03, 2019 | Team Udayavani |

ಕೂಡ್ಲಿಗಿ: ತಾಲೂಕಿನ ಗಡಿಗ್ರಾಮ ಹಿರೇಕುಂಬಳಗುಂಟೆ ಗ್ರಾಮದಲ್ಲಿ ಹುಟ್ಟಿ ಬೆಳೆದಮಹಾನ್‌ ಸಮಾಜ ವಿಜ್ಞಾನಿ ಹಾಗೂ ಚಿಂತಕ ಡಾ|ಮರುಳಸಿದ್ದಯ್ಯರಿಂದ ಮತ್ತು ಈ ಹಳ್ಳಿಯಿಂದ ನಾವು ಕಲಿತಿರುವುದು ಸಾಕಷ್ಟು ಇದೆ. ಹಾಗಾಗಿ ಬದುಕು ರೂಪಿಸಿದ ವ್ಯಕ್ತಿ ಹಾಗೂ ಹಳ್ಳಿಯನ್ನು ಮರೆಯಲು ಸಾಧ್ಯವಿಲ್ಲವೆಂದು ಸ್ವೀಡನ್‌ ದೇಶದಗ್ರೀನ್‌ ಪಾರ್ಟಿ ಮುಖ್ಯಸ್ಥ ಸ್ವೇನ್ ಹೆನ್ರಿಕ್‌ ತಮ್ಮ ಹಳೆ ನೆನಪುಗಳು ಮೆಲಕು ಹಾಕಿದರು.

Advertisement

ಅವರು ಇತ್ತೀಚೆಗೆ ತಾಲೂಕಿನ ಹಿರೇಕುಂಬಳಗುಂಟೆಯ ಗ್ರಾಮಕ್ಕೆ ಅಗಮಿಸಿ ಸರಕಾರಿ ಶಾಲೆಗೆ ಭೇಟಿ ನೀಡಿದ ನಂತರ ಮಾತನಾಡಿದರು. ಡಾ| ಮರುಳಸಿದ್ದಯ್ಯರವರ ಪ್ರಭಾವದಿಂದಾಗಿ 1994ರಲ್ಲಿ ಸಮಾಜಶಾಸ್ತ್ರ ಅಧ್ಯಯನಕ್ಕಾಗಿ ಈ ಗ್ರಾಮಕ್ಕೆ ಬಂದಿದ್ದೆವು ಅಂದು ಗ್ರಾಮದ ಜನರು ತೋರಿದ ಪ್ರೀತಿ, ವಾತ್ಸಲ್ಯದಿಂದಾಗಿ ಮತ್ತೆ ನನ್ನನ್ನು ಇಲ್ಲಿಗೆ

ಬರುವಂತೆ ಮಾಡಿದೆ. ಜತೆಗೆ ಈ ಬಾರಿ ಪತ್ನಿಯನ್ನು ಕರೆದುಕೊಂಡು ಬಂದಿದ್ದೇನೆ. ಭಾರತದ ಹಳ್ಳಿಗಳಿಂದ

ನಾವು ಸಾಕಷ್ಟು ಕಲಿಯಬೇಕಿದೆ ಹಾಗೂ ಮರುಳಸಿದ್ದಯ್ಯನವರ ಅಗಲಿಕೆ ಸ್ವೀಡನ್‌ ದೇಶದಲ್ಲಿರುವ ಶಿಷ್ಯ ಬಳಗಕ್ಕೆ ತುಂಬಾ ದುಃಖ ತಂದಿದೆ. ಅವರು ನಮ್ಮನ್ನು ಅಗಲಿರಬಹುದು ಅವರು ತೊರಿಸಿಕೊಟ್ಟ ಮಾರ್ಗ ಸದಾಕಾಲವೂ ನಮ್ಮ ಜೊತೆಗೆ ಇರುತ್ತದೆ ಎಂದರು.

ಮೆಲಕು: 1994ರಲ್ಲಿ ಈ ಹಳ್ಳಿಗೆ ಬಂದಿದ್ದೆ ನಂತರ ಬರಲು ಅಗಲಿಲ್ಲ ಪ್ರೀತಿ ಗುರುಗಳ ನಿಧನದ ನಂತರ ಬಂದಿರುವೆ ಮುಂದೆ ನಾನು ಇರುವಷ್ಟು ಕಾಲ ಈ ಊರಿಗೆ ಬಂದು ಹೋಗುತ್ತೇನೆ ಎಂದರು. ಶಾಲೆಯಲ್ಲಿ ಮಕ್ಕಳೊಂದಿಗೆ ಬಿಸಿಯೂಟ ಸವಿದರು. ವಿದ್ಯಾರ್ಥಿಗಳೊಂದಿಗೆ ಕೆಲಹೊತ್ತು ಕಳೆದರು. ನಂತರ ಶಿಕ್ಷಕರೊಂದಿಗೆ ಶಾಲೆ ಶೈಕ್ಷಣಿಕ ಪ್ರಗತಿ ಕುರಿತು ಮಾಹಿತಿ ಪಡೆದರು.ಈ ಸಂದರ್ಭದಲ್ಲಿ ಅಕ್ಷರ ಫೌಂಡೇಶನ್‌ ಎಚ್‌ .ಬಿ.ಕಣ್ಣಿ ಮಾತನಾಡಿ, ಹಿರೇಕುಂಬಳಗುಂಟೆಗೆ ಕಳೆದ ದಶಕಗಳಿಂದ ನೂರಾರು ವಿದೇಶಿಗರು ಸಾಮಜಶಾಸ್ತ್ರದ ಅಧ್ಯಯನಕ್ಕಾಗಿ ಬಂದು ಹೋಗಿದ್ದಾರೆ. ಇವರೆಲ್ಲರೂ ಡಾ| ಮರುಳುಸಿದ್ದಯ್ಯನವರ ಶಿಷ್ಯಬಳಗವಾಗಿದೆ ಎಂದರು.

Advertisement

ಈ ಸಂದರ್ಭದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಗುರುಗಳಾದ ಶ್ಯಾಮ್‌ಸುಂದರ ಸಫಾರೆ, ಎಸ್‌ಡಿಎಂಸಿ ಅಧ್ಯಕ್ಷ ಸೊಮಲಿಂಗಪ್ಪ, ಗ್ರಾಮಸ್ಥರಾದ ರಮೇಶ್‌, ಪ್ರಕಾಶ್‌, ಶಿಕ್ಷಕರಾದ ಬಸವರಾಜ, ಶಾರದ, ಹನುಮಂತರೆಡ್ಡಿ, ಮಂಜುನಾಥ, ಶರಣಯ್ಯ, ಭರತ್‌ ಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next