ಕನಕಪುರ: ಬೆಂಗಳೂರು ನಗರದಿಂದ ಲಾಂಗ್‌ಡ್ರೈವ್‌ಗೆ ಕರೆತಂದು ಸ್ನೇಹಿತನ ಕಾರನ್ನೇ ಅಪರಿಸಿದ್ದ ಕಾರು ಮತ್ತು ದ್ವಿಚಕ್ರವಾಹನ ಕಳ್ಳರನ್ನು ಸಾತನೂರು ಪೋಲಿಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಬಂದಿತ ಇಬ್ಬರು ಆರೋಪಿಗಳು ಪ್ರವಾಸಕ್ಕೆಂದು ಕರೆ ತಂದು ಕಾರು ಮಾಲೀಕ ಪ್ರವೀಣ್ ಬಹಿರ್ದೆಸೆಗೆ ಹೋದಾಗ ಕಾರನ್ನು ಕಳ್ಳತನ ಮಾಡಿ ಪರಾರಿಯಾಗಿದ್ದವರ ವಿರುದ್ಧ ಸಾತನೂರು ಠಾಣೆಯಲ್ಲಿ ನೀಡಲಾಗಿತ್ತು. ಪ್ರಕರಣದ ಬೆನ್ನುಬಿದ್ದ ಪೋಲಿಸರು ಆರೋಪಿಗಳನ್ನು ಬಂದಿಸಿದ್ದು, ಆರೋಪಿಗಳಿಂದ ಮತ್ತಷ್ಟು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆನೇಕಲ್ ತಾಲೂಕಿನ ಸರ್ಜಾಪುರದ ಪೆನಾಜುಲ್ ಪಿರ್ನಾಕುಲ್ ಅಪಾರ್ಟ್‌ಮೆಂಟ್‌ನ ವಾಸಿಯಾಗಿರುವ ಶರತ್ ಅಲಿಯಾಸ್ ಆದಿತ್ಯ (25), ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಮಡಿಕೆಸೂರು ಗ್ರಾಮದ ಶಿವಣ್ಣನ ಮಗ ರಾಮು ಅಲಿಯಾಸ್ ರಮೇಶ್(23) ಬಂಧಿತರು.
ದೂರಿನನ್ವಯ ತನಿಖೆ ಆರಂಬಿಸಿ ಪೊಲೀಸರು ವೃತ್ತ ನಿರೀಕ್ಷಕ ಮಲ್ಲೇಶ್ ಅವರನ್ನೊಳಗೊಂಡ ತಂಡದಲ್ಲಿ ಪಿಎಸ್‌ಐ ಮುರುಳಿ, ಪೃಥ್ವಿ, ಸಿಬ್ಬಂದಿಗಳಾದ ಸುಭಾಷ್, ದುರ್ಗೇಗೌಡ, ಕಾರ್ಯಚರಣೆಗಿಳಿದು ಬೆಂಗಳೂರಿನ ಹಲಸೂರು ಕೆರೆ ಬಳಿಯಲ್ಲಿ ಆರೋಪಿಗಳನ್ನು ದಸ್ತುಗಿರಿ ಮಾಡಿದ್ದು, ಅಲ್ಲಿಂದ ಕರೆತಂದ ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಬೆಂಗಳೂರಿನ ಬಸವೇಶ್ವರನಗರ, ಸುಬ್ರಹ್ಮಣ್ಯನಗರ, ವಿಜಯನಗರ ಯಶವಂತಪುರ, ಕಾಮಾಕ್ಷಿಪಾಳ್ಯ, ಮಹಾಲಕ್ಷ್ಮೀ ಲೇಔಟ್, ಕಳ್ಳತನ ಮಾಡಿ 11 ವಾಹನಗಳನ್ನು ಕದ್ದು 8 ತಿಂಗಳು ಜೈಲಿನಲ್ಲಿ ಇದ್ದು, ಜಾಮೀನಿನ ಮೇಲೆ ಹೊರಬಂದಿದ್ದು ಮತ್ತೇ ಅದೇ ಕೆಲಸಕ್ಕೆ ಕೈಹಾಕಿ ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಜಾಮೀನಿನ ಮೇಲೆ ಹೊರಬಂದ ಆರೋಪಿಗಳು ಬೆಂಗಳೂರಿನ ಮಹಾಲಕ್ಷ್ಮೀಪುರಂ ಠಾಣಾ ವ್ಯಾಪ್ತಿಯಲ್ಲಿ ಎರಡು ರಾಯಲ್ಎನ್‌ಪೀಲ್ಡ್ ದ್ವಿಚಕ್ರವಾಹನಗಳೂ, ಮಲ್ಲೇಶ್ವರಂ, ಕೆಂಗೇರಿ, ಅಮೃತಹಳ್ಳಿ, ಅನ್ನಪೂರ್ಣೇಶ್ವರಿನಗರ, ಚಂದ್ರಲೇಔಟ್‌ಗಳ ಠಾಣಾ ವ್ಯಾಪ್ತಿಯಲ್ಲಿ ಒಂದೊಂದು ರಾಯಲ್ಎನ್‌ಪೀಲ್ಡ್ ದ್ವಿಚಕ್ರವಾಹನಗಳೂ, ಮುರುಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ಒಂದು ರಾಯಲ್ಎನ್‌ಪೀಲ್ಡ್ ದ್ವಿಚಕ್ರವಾಹನ ಸೇರಿ 8 ವಾಹನಗಳು ಸಾತನೂರು ಠಾಣಾ ವ್ಯಾಪ್ತಿಯಲ್ಲಿ ಎರಡು ಕಾರುಗಳನ್ನು ಕಳ್ಳತನ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದು ಎಲ್ಲಾ ವಾಹನಗಳನ್ನು ವಶಕ್ಕೆ ಪಡೆದ ಪೊಲೀಸರು ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.