ದೋಚಿ ಪರಾರಿಯಾಗುತ್ತಿದ್ದ ನಾಲ್ವರು ಡಕಾಯಿತರನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಕೋಂಬಿಂಗ್ ಕಾರ್ಯಾಚರಣೆ ಮೂಲಕ ಪ್ರಕರಣ ದಾಖಲಾದ 24 ಗಂಟೆಯಲ್ಲಿ ದರೋಡೆಕೋರರನ್ನು ಬಂಧಿಸುವಲ್ಲಿ ಪೊಲೀಸರು
ಯಶಸ್ವಿಯಾಗಿದ್ದಾರೆ.
Advertisement
ಕುರುಬಖೇಳಗಿಯ ಸಂಗಮೇಶ ಆನಂದ ಬಿರಾದಾರ, ಪ್ರದೀಪ ಆನಂದ ಬಿರಾದಾರ, ಮಿರ್ಜಾಪುರದಅರುಣಕುಮಾರ ನಾಮಾನಂದ ಬಿರಾದಾರ ಮತ್ತು ಕಲಬುರಗಿಯ ಮಲ್ಲಿಕಾರ್ಜುನ ಸುರೇಶ ಮಾಡಜಿ ಬಂಧಿತ
ಆರೋಪಿಗಳಾಗಿದ್ದಾರೆ. ಇವರೆಲ್ಲ ವೃತ್ತಿಪರ ತಂಡದವರಾಗಿದ್ದು, ಹುಮನಾಬಾದ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆ, ನೆರೆಯ ಕಲಬುರಗಿ ಜಿಲ್ಲೆ, ತೆಲಂಗಾಣ ಹಾಗೂ ಮಹಾರಾಷ್ಟ್ರದಲ್ಲಿ ದರೋಡೆ ಕೈ ಚಳಕ ತೋರಿಸುತ್ತಿದ್ದರು. ಎತ್ತರದ ರಸ್ತೆ ಮೇಲೆ ಹೋಗುವ ಲಾರಿಗಳಿಗೆ ಬೈಕ್ ಅಡ್ಡಗಟ್ಟಿ ಲಾರಿ ಚಾಲಕರ ಮೇಲೆ ಹಲ್ಲೆ ಮಾಡಿ ಅವರಿಂದ ಲೂಟಿ ಮಾಡುತ್ತಿದ್ದರು ಎಂದು ಎಸ್‌ಪಿ ದೇವರಾಜ ಡಿ. ಅವರು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಡಕಾಯಿತರು ಬೈಕ್ ಅಡ್ಡಗಟ್ಟಿ ಲಾರಿ ನಿಲ್ಲಿಸಿದ್ದಾರೆ. ಚಾಲಕ ಹಾಗೂ ಕ್ಲೀನರ್ ಗೆ ಹೆದರಿಸಿ ಅವರಿಂದ 53 ಸಾವಿರ ರೂ.
ನಗದು, ಒಂದು ಮೊಬೈಲ್ ದೋಚಿದ್ದಾರೆ. ನಂತರ ಇದೇ ತಂಡ ಕಬಿರಾಬಾದವಾಡಿ ಕ್ರಾಸ್ ಬಳಿ ಮತ್ತೂಂದು ಲಾರಿಗೆ ಅಡ್ಡಗಟ್ಟಿ ಚಾಲಕ, ಕ್ಲೀನರ್‌ಗೆ ಚಾಕುವಿನಿಂದ ಇರಿದು ಅವರಿಂದ 7 ಸಾವಿರ ರೂ. ನಗದು ಮತ್ತು ಒಂದು ಮೊಬೈಲ್ ದೋಚಿದ್ದರು ಎಂದು ವಿವರಿಸಿದರು. ಈ ಕುರಿತು ಹಳ್ಳಿಖೇಡ(ಬಿ) ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಆರೋಪಿಗಳ ಪತ್ತೆಗಾಗಿ ಹೆಚ್ಚುವರಿ ಎಸ್‌ಪಿ ಹರಿಬಾಬು ಮತ್ತು ಡಿವೈಎಸ್‌ಪಿ ಚಂದ್ರಕಾಂತ ಪೂಜಾರಿ ಮಾರ್ಗದರ್ಶನದಲ್ಲಿ ಹುಮನಾಬಾದ ಸಿಪಿಐ ಜೆ.ಎಸ್. ನ್ಯಾಮಗೌಡರ ನೇತೃತ್ವದಲ್ಲಿ ಪಿಎಸ್‌ಐಗಳಾದ ಖಾಜಾ ಹುಸೇನ್, ಸಂತೋಷ ಎಲ್.ಟಿ. ಮತ್ತು ಸಿಬ್ಬಂದಿಗಳ ವಿಶೇಷ ತಂಡ ರಚಿಸಲಾಗಿತ್ತು ಎಂದು ಹೇಳಿದರು.