Advertisement

ನಕಲಿ ನಾಟಿ ವೈದ್ಯರಿಬ್ಬರ ಬಂಧನ

11:57 AM Sep 17, 2017 | Team Udayavani |

ಹುಬ್ಬಳ್ಳಿ: ಮಂಡಿನೋವಿನ ಔಷಧಿ ಕೊಡುವುದಾಗಿ ಸಾರ್ವಜನಿಕರನ್ನು ನಂಬಿಸಿ ಅವರಿಂದ ಹಣ ಹಾಗೂ ಚೆಕ್‌ ಪಡೆದು ವಂಚಿಸುತ್ತಿದ್ದ ನಕಲಿ ವೈದ್ಯರಿಬ್ಬರನ್ನು ನಗರದ ಅಶೋಕ ನಗರ ಪೊಲೀಸರು ಬಂಧಿಸಿ, ಅವರಿಂದ 6.07ಲಕ್ಷ ರೂ. ನಗದು, ಮೊಬೈಲ್‌ ಹಾಗೂ ಎರಡು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ. 

Advertisement

ನವಲಗುಂದದ ವೆಂಕಟೇಶ ಡಿ.  ಗೊಲ್ಲರ, ಯಲ್ಲಪ್ಪ ಉರ್ಫ್‌ ಬಾಲಾಜಿ ಪಿ. ಗೊಲ್ಲರ ಬಂಧಿತರು. ಇವರು ನಗರದ ಶಾಂತಿ ಕಾಲೋನಿಯ ಸುರೇಶಬಾಬು ಕುಲಕರ್ಣಿ ಎಂಬುವರಿಗೆ ಮಂಡಿ ನೋವಿನ ಔಷಧಿ ಕೊಡುವುದಾಗಿ ನಂಬಿಸಿ 7 ಸಾವಿರ ರೂ. ನಗದು ಹಾಗೂ 1.20 ಲಕ್ಷ ರೂ. ಮೌಲ್ಯದ ಚೆಕ್‌ ಇಸಿದುಕೊಂಡು ಔಷಧಿ ಕೊಡದೆ ವಂಚಿಸಿದ್ದರು.

ಈ ಕುರಿತು ಅವರು ಅಶೋಕ ನಗರ ಠಾಣೆಯಲ್ಲಿ ದೂರು ಕೊಟ್ಟಿದ್ದರು. ದೂರಿನನ್ವಯ ಠಾಣಾಧಿಕಾರಿ ಜಗದೀಶ ಹಂಚನಾಳ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಇವರಿಬ್ಬರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ನಗರದ ಜೆ.ಪಿ.ನಗರ, ಲಿಂಗರಾಜ ನಗರ, ನವನಗರ ಹಾಗೂ ಧಾರವಾಡದ ಸಾಧನಕೇರಿ,

ಸಪ್ತಾಪುರ ಹಾಗೂ ಹಳಿಯಾಳದಲ್ಲಿ ಮಂಡಿ ನೋವಿನ ಔಷಧಿ ಕೊಡುವುದಾಗಿ ಸಾರ್ವಜನಿಕರನ್ನು ನಂಬಿಸಿ ಅವರಿಂದ ನಗದು, ಚೆಕ್‌ ಪಡೆದು ವಂಚಿಸಿದ್ದಾಗಿ ಬಾಯಿ ಬಿಟ್ಟಿದ್ದರು. ವಂಚಕರಿಂದ ಪೊಲೀಸರು ಚೆಕ್‌ ಹಾಗೂ ಬ್ಯಾಂಕಿಗೆ ಚೆಕ್‌ ಜಮಾ ಮಾಡಿದ ಓಚರ್‌ಗಳು ಹಾಗೂ 1,02,300 ರೂ. ನಗದು ಹಾಗೂ

ನ್ಯಾಯಾಲಯ ಅನುಮತಿ ಪಡೆದು 5.05 ಲಕ್ಷ ರೂ.ಗಳನ್ನು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಮೊಬೈಲ್‌ ಫೋನ್‌, ಎರಡು ದ್ವಿಚಕ್ರ ವಾಹನ ವಶ ಪಡಿಸಿಕೊಂಡಿದ್ದಾರೆ. ಬಂಧಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾದ ಇನ್ನುಳಿದವರ ಶೋಧ ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next