Advertisement

ಪಾಕ್‌ ಪ್ರಜೆಗಳ ನಕಲಿ ದಾಖಲೆಗಳಿಗೆ ಸಹಿ ಮಾಡಿದ್ದ ವೈದ್ಯೆಯ ಬಂಧನ

12:38 PM May 30, 2017 | Team Udayavani |

ಬೆಂಗಳೂರು: ಪಾಕಿಸ್ತಾನದ ಪ್ರಜೆಗಳು ತಂದುಕೊಟ್ಟಿದ್ದ ನಕಲಿ ದಾಖಲೆಗಳಿಗೆ ಸಹಿ ಹಾಕಿ ಆಧಾರ್‌ ಕಾರ್ಡ್‌ ಪಡೆಯಲು ಸಹಕರಿಸಿದ ಆರೋಪದ ಮೇಲೆ ಜಯನಗರ ಸರ್ಕಾರಿ ಆಸ್ಪತ್ರೆಯ ಹಿರಿಯ ವೈದ್ಯೆ ಸಿ.ಎಸ್‌.ನಾಗಲಕ್ಷ್ಮಮ್ಮ ಅವರನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ.

Advertisement

ಆರೋಪಿ ವೈದ್ಯೆಯನ್ನು ಸೋಮವಾರ ಕೋರ್ಟ್‌ಗೆ ಹಾಜರು ಪಡಿಸಿ ಎರಡು ದಿನಗಳ ಕಾಲ ವಶಕ್ಕೆ ಪಡೆಯಲಾಗಿದೆ. ಖತಾರ್‌ನಿಂದ ಬೆಂಗಳೂರಿಗೆ ಬಂದಿದ್ದ ಕೇರಳ ಮೂಲದ ಮೊಹಮದ್‌ ಶಿಬಾಬ್‌, ಈತನ ಪತ್ನಿ ಪಾಕಿಸ್ತಾನದ ನಜ್ಮಾ, ಈಕೆಯ ಸಂಬಂಧಿ ಮೊಹಮ್ಮದ್‌ ಖಾಸಿಫ್ ಹಾಗೂ ಆತನ ಪತ್ನಿ ಝೈನಬ್‌ಳನ್ನು ಮೇ 24ರಂದು ಕೆ.ಎಸ್‌.ಲೇಔಟ್‌ನಲ್ಲಿ ಬಾಡಿಗೆ ಮನೆಯೊಂದರಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದರು.

ಈ ವೇಳೆ ಆರೋಪಿಗಳ ಬಳಿ ಆಧಾರ್‌ ಕಾರ್ಡ್‌ ಪತ್ತೆಯಾಗಿದ್ದವು. ಇದರ ಜಾಡು ಹಿಡಿದ ಪೊಲೀಸರು, ಆರೋಪಿ ಮಹಮದ್‌ ಶಿಹಾಬ್‌ನನ್ನು ತೀವ್ರ ವಿಚಾರಣೆ ನಡೆಸಿದ್ದರು. ಈತನ ವಿಚಾರಣೆ ಆರೋಪಿ ವೈದ್ಯೆಯ ಹೆಸರು ಬಹಿರಂಗ ಪಡಿಸಿದ್ದ. ಬಳಿಕ ತನಿಖಾಧಿಕಾರಿಗಳು ಯುಐಡಿ ಬೆಂಗಳೂರು ಪ್ರಾದೇಶಿಕ ಕಚೇರಿಯ ಉಪ ನಿರ್ದೇಶಕ ಅಶೋಕ್‌ ಲೆನಿನ್‌ ಅವರ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಅಶೋಕ್‌ ಲೆನಿನ್‌ ಬನಶಂಕರಿ ಠಾಣೆಗೆ ದೂರು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

“ಆಧಾರ್‌ ಕಾರ್ಡ್‌ ಪಡೆಯಲು ಗೆಜೆಟೆಡ್‌ ಅಧಿಕಾರಿ ಸಹಿ ಬೇಕು ಎಂದು ಮೊಹಮದ್‌ ಶಿಹಾಬ್‌ ನಾಲ್ಕು ತಿಂಗಳ ಹಿಂದೆ ಆಸ್ಪತ್ರೆಗೆ ಬಂದಿದ್ದ. ಬಾಡಿಗೆ ಮನೆ ಒಪ್ಪಂದದ ಪ್ರತಿ ಸೇರಿ ಇನ್ನಿತರ ಜೆರಾಕ್ಸ್‌ ದಾಖಲೆ ಪರಿಶೀಲಿಸಿ ಸಹಿ ಮಾಡಿ ಕೊಟ್ಟಿದ್ದೆ. ಹಣ ಸಂಪಾದನೆ ಮಾಡುವ ಉದ್ದೇಶ ಇರಲಿಲ್ಲ’ ಎಂದು ವೈದ್ಯೆ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next