Advertisement

ಕಣ್ಮನ ಸೆಳೆದ ಸಾಕು ಪ್ರಾಣಿಗಳ ಪ್ರದರ್ಶನ

10:06 PM Oct 02, 2019 | Lakshmi GovindaRaju |

ಮೈಸೂರು: ಮೈಸೂರು ವಿಶ್ವವಿದ್ಯಾಲಯ ಹಾಕಿ ಮೈದಾನದಲ್ಲಿ ಆಯೋಜಿಸಿದ್ದ ಸಾಕು ಪ್ರಾಣಿಗಳ ಪ್ರದರ್ಶನದಲ್ಲಿ ವಿವಿಧ ತಳಿಯ ನಾಯಿ, ಬೆಕ್ಕುಗಳು ಗಮನ ಸೆಳೆದವು. ಅರ್ಧ ಅಡಿ ಎತ್ತರದಿಂದ ಮೂರಡಿ ಎತ್ತರದ ವರೆಗಿನ ನಾಯಿಗಳನ್ನು ಕಂಡ ಜನರು ಆಶ್ಚರ್ಯ ವ್ಯಕ್ತಪಡಿಸಿ ಇಂಥ ನಾಯಿಗಳು ಇವೆಯೇ.. ಎಂದು ಕುತೂಹಲದಿಂದ ವೀಕ್ಷಣೆ ಮಾಡಿದರು.

Advertisement

35 ತಳಿಯ 345 ಹೆಚ್ಚು ಶ್ವಾನಗಳು ಹಾಗೂ ಪರ್ಷಿಯನ್‌ ಬೆಕ್ಕು ಸೇರಿದಂತೆ ವಿವಿಧ ತಳಿಯ 23 ಬೆಕ್ಕುಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದವು. ಕೆಲವು ಶ್ವಾನಗಳು ತಮ್ಮ ಗಾತ್ರ, ಬಣ್ಣ, ನಡಿಗೆ ಚುರುಕುತನ ಹೀಗೆ ಬೇರೆ ಬೇರೆ ಕಾರಣಗಳಿಂದ ಗಮನ ಸೆಳೆದರೆ ಇನ್ನು ಕೆಲವು ಶ್ವಾನಗಳು ಮಾಲೀಕರೊಂದಿಗೆ ಸ್ಪರ್ಧೆಯಲ್ಲಿ ವೈಯ್ನಾರ ದಿಂದ ಭಾಗವಹಿಸಿ ತಮ್ಮ ಜಾಣ್ಮೆ ಪ್ರದರ್ಶಿಸಿದವು.

ಪಗ್‌, ಜರ್ಮನ್‌ ಶ‌ಫ‌ರ್ಡ್‌, ಗ್ರೇಟ್‌ ಡೇನ್‌, ಗೋಲ್ಡನ್‌ ರೆಟ್ರಿವರ್‌, ಮುಧೋಳ್‌, ರಾಟ್‌ ವಿಲ್ಲರ್‌, ಬಾಕ್ಸರ್‌, ಬ್ರಿಟಿಷ್‌ ಬುಲ್ಡಾಗ್‌, ಫ್ರೆಂಚ್‌ ಬುಲ್‌ ಡಾಗ್‌, ಮಲ್ಟಿ ಶ್‌, ಚೌ ಚೌ, ಪಿಟ್‌ ಬುಲ್, ಅಮೆರಿಕನ್‌ ಬುಲ್ಲಿ, ಸೈಬೀರಿಯನ್‌ ಹಸ್ಕಿ, ಪಾಕಿಸ್ತಾನಿ ಬುಲ್ಲಿ ಸೇರಿದಂತೆ ನಾನಾ ತಳಿಯ ಶ್ವಾನಗಳು ಪ್ರಮುಖ ಆಕರ್ಷಣೆಯಾಗಿದ್ದವು.

ನಾಯಿಗಳು ಇಲ್ಲಿನ ಬಿಸಿಲಿಗೆ ಹೊಂದಿಕೊಳ್ಳುವುದಕ್ಕೆ ತೊಂದರೆಯಾಗಿ ಸ್ಪರ್ಧೆಯಲ್ಲಿ ಹಿಂದೆ ಬೀಳಬಾರದು ಎಂಬ ಕಾರಣಕ್ಕೆ ಅದರ ಮಾಲೀಕರು ಶ್ವಾನಗಳನ್ನು ಕಾರಿನಲ್ಲಿ ಇರಿಸಿ ಎಸಿ ಹಾಕಿ ಅವುಗಳ ಆರೈಕೆ ಮಾಡಿದದ್ದು ವಿಶೇಷವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next