Advertisement

ಬಿಲ್‌ ಕೊಟ್ಟ ಮಹಾನುಭಾವ

09:51 AM Nov 28, 2019 | Hari Prasad |

ಬಲಗೈಯಿಂದ ದಾನ ಮಾಡಿದ್ದು ಎಡಗೈಗೆ ಗೊತ್ತಾಗಬಾರದೆಂಬ ಗಾದೆ ಮಾತನ್ನು ಹಿರಿಯರು ಹೇಳಿದ್ದಾರೆ. ಆದರೆ ನನಗೆ ಉಪಕಾರ ಮಾಡಿದವರು ಇದೇ ತತ್ವ ಅನುಸರಿಸಿದರೆ ಅವರ ವ್ಯಕ್ತಿತ್ವ ಗೊತ್ತಾಗುವುದಿಲ್ಲ. ಇದಕ್ಕೆ ಒಂದು ಘಟನೆ ಹೇಳ್ತೀನಿ.
ಒಂದು ದಿನ ಕೆಲಸಗಳು ಹೆಚ್ಚಿದ್ದರಿಂದ ಮಲಗೋದು ತಡವಾಯಿತು. ಪ್ರತಿನಿತ್ಯ ಅಡುಗೆ ಮಾಡಿಕೊಳ್ಳುವ ನಾನು, ಆ ದಿನ ಸಮಯ ವಿಲ್ಲದೆ ಸೀದಾ ಹೋಟೆಲ್‌ಗೆ ಹೋದೆ. ಒಂದು ಮಸಾಲೆ ದೋಸೆ ತಿನ್ನುತ್ತಾ ಕೂತಿದ್ದೆ. ಒಬ್ಬ ಅಜ್ಜಿ ಬಂದು ಸಾರ್‌, ಊಟ ಕೊಡಿಸಿ. ತುಂಬಾ ಹೊಟ್ಟೆ ಹಸೀತಿದೆ. ಎರಡು ದಿನವಾಯಿತು ಊಟ ಮಾಡಿ ಎಂದಳು. ನನ್ನ ಪರ್ಸ್‌ನಲ್ಲಿ ಕೇವಲ 30 ರೂಪಾಯಿಗಳಿವೆ. ಅಜ್ಜಿ ಬೇರೆ ಎರಡು ದಿನದಿಂದ ಊಟ ಮಾಡಿಲ್ಲ ಎನ್ನುತ್ತಿದೆ. ಏನಪ್ಪಾ ಮಾಡೋದು ಎಂಬ ಆಲೋಚನೆ ಶುರುವಾಯಿತು.

Advertisement

ಹೇಗಾದರೂ ಮಾಡಿ ಈ ಅಜ್ಜಿಗೆ ತಿಂಡಿ ಕೊಡಿಸಬೇಕು ಎಂದು ನಿಶ್ಚಯ ಮಾಡಿಕೊಂಡೆ. ಆ ಅಜ್ಜಿಗೆ ತಿಂಡಿ ಕೊಡಿಸಿದೆ. ಅಷ್ಟರಲ್ಲಿ ಯಾರೋ ಬಂದರು. ಅಣ್ಣಾ, ನಮಸ್ಕಾರ ಎಂದೆ. ಅವರು ಕೂಡ ಹಾಯ್‌ ಎಂದು ನನ್ನ ಪಕ್ಕದಲ್ಲೇ ಬಂದು ಕುಳಿತರು. ಅವರ ಫೇಸ್‌ ಬುಕ್‌ ನಲ್ಲಿ ಕೆಲ ತಾಂತ್ರಿಕ ಸಮಸ್ಯೆಗಳಿವೆ ಎಂದರು. ಅದನ್ನು ನಾನು ತಿಂಡಿ ತಿನ್ನುತ್ತಲೇ ಪರಿಹರಿಸಿದೆ. ತದನಂತರ, ಅವರ ಜೊತೆ ಮಾತನಾಡುತ್ತಾ ಆತ್ಮೀಯತೆ ಹೆಚ್ಚಾಯಿತು. ತಿಂಡಿ ತಿಂದು ಕೈತೊಳೆಯಲೆಂದು ಹೋದೆ.

ಅಷ್ಟರಲ್ಲಿ ಅವರು ನನ್ನ ಮತ್ತು ಆ ಅಜ್ಜಿಯ ಬಿಲ್‌ ಎರಡನ್ನೂ ಪಾವತಿಸಿದ್ದರು. ನನ್ನ ಹತ್ತಿರ ಗೂಗಲ್‌ ಪೇ ಇರಲಿಲ. ನನ್ನ ಗೆಳೆಯನ ಕಡೆಯಿಂದ ಗೂಗಲ್‌ ಪೇನಲ್ಲಿ ಹಣ ಪಾವತಿಸುತ್ತೇನೆಂದರೂ ಒಪ್ಪಲಿಲ್ಲ. ‘ನಾನು ಕೊಟ್ಟಿದ್ದೇನೆ ಬಿಡು’ ಎಂದರು.

ಜೊತೆಗೊಂದು ಕಪ್‌ ಟೀ ಸಹ ಕುಡಿಸಿ, ಕಳುಹಿಸಿದರು. ಒಂದು ವೇಳೆ ನಾನೂ ಆ ಅಜ್ಜಿಗೆ ತಿಂಡಿ ಕೊಡಿಸದೇ ಹೋಗಿದ್ದರೆ, ಆ ಅಜ್ಜಿ ಎಷ್ಟು ಕಷ್ಟ ಪಡುತಿತ್ತು. ಅವಳಿಗೆ ಕೊಡಿಸಿದರ ಜೊತೆಗೆ ನಾನು ಸಂಕಷ್ಟಕ್ಕೆ ಸಿಕ್ಕಿಕೊಂಡೆ. ಆ ಅನಾಮಧೇಯ ವ್ಯಕ್ತಿ ನನಗೆ ಸಹಾಯ ಮಾಡಿದ..ಆತನಿಗೆ ವಂದನೆಗಳು. ಸಹಾಯವೆಂಬುದು ಹೀಗೇ ನಿಸ್ವಾರ್ಥ ವಾಗಿರಬೇಕು ಅಲ್ಲವೇ?

– ಪ್ರಭಾಕರ. ಪಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next