ಸುರಪುರ: ಪರಿಪೂರ್ಣ ಬದುಕಿಗೆ ಶಿಕ್ಷಣ ಮುಖ್ಯ, ಶಿಕ್ಷಣ ಇಲ್ಲದೇ ನಾವೇನು ಸಾಧಿ ಸಲು ಸಾಧ್ಯವಿಲ್ಲ ಎಂಬುದು ಡಾ| ಅಂಬೇಡ್ಕರ್ ಅವರ ನಿಲುವಾಗಿತ್ತು. ಈ ದಿಶೆಯಲ್ಲಿ ಬಾಬಾಸಾಹೇಬರು ಶಿಕ್ಷಣ, ಸಂಘಟನೆ, ಹೋರಾಟ ಮೂರು ತತ್ವಗಳನ್ನು ಕಲಿಸಿದ್ದಾರೆ. ಅವರ ಈ ಸೂತ್ರಗಳಲ್ಲಿ ಜಗತ್ತನ್ನು ಗೆಲ್ಲುವ ಶಕ್ತಿ ಅಡಗಿದೆ ಎಂದು ಭಾರತೀಯ ದಲಿತ ಪ್ಯಾಂಥರ್ ರಾಜ್ಯ ಸಂಘಟನಾ ಕಾರ್ಯದರ್ಶಿ ಆದಪ್ಪ ಹೊಸಮನಿ ಅಭಿಪ್ರಯಾಪಟ್ಟರು.
ತಾಲೂಕಿನ ಮುಷ್ಠಳ್ಳಿ ಗ್ರಾಮದಲ್ಲಿ ರವಿವಾರ ಹಮ್ಮಿಕೊಂಡಿದ್ದ ಡಾ| .ಬಿ.ಆರ್. ಅಂಬೇಡ್ಕರ್‌ರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾರತ ರತ್ನ ಡಾ| ಬಿ.ಆರ್. ಅಂಬೇಡ್ಕರ್ ಅವರು ಶೋಷಿತ ಸಮುದಾಯದ ಬೆಳಕಾಗಿದ್ದಾರೆ. ಅವರು ನೀಡಿರುವ ಮೀಸಲಾತಿ ಸೌಲಭ್ಯ ದಲಿತರ ಉಸಿರಾಗಿದೆ. ಆದ್ದರಿಂದ ದಲಿತರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಆ ಮೂಲಕ ಸಂಘಟಿತರಾಗಿ ಹೋರಾಟದ ಮೂಲಕ ಹಕ್ಕು ಪಡೆದುಕೊಳ್ಳಲು ಸಾಧ್ಯ ಎಂದರು.
ಡಾ| ಹನುಮಂತ್ರಾಯ ಚಂದಲಾಪುರ, ಡಾ| ಬಿ.ಆರ್. ಅಂಬೇಡ್ಕರ್‌ರ ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡಿದರು. ಗ್ರಾಪಂ ಸದಸ್ಯೆ ಚಂದಮ್ಮ ರಾಮಚಂದ್ರಪ್ಪ ಕಟ್ಟಿಮನಿ ಉದ್ಘಾಟಿಸಿದರು.
ಗ್ರಾಮದ ಮುಖಂಡ ಹನುಮಂತ ಕೆಸಿಪಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಬಸವರಾಜ್ ಬಿರಾದಾರ್, ದೇವಿಂದ್ರಪ್ಪ ರೆಡ್ಡಿ, ಸಾಬಣ್ಣ ತಳವಾರ, ಗುರಪ್ಪ ಹೊಸ್ಮನಿ,ಸಾಯಬಣ್ಣ ಅಮ್ಮಾಪುರ, ಮಾನಪ್ಪ ಬಂಡಾರಿ ಶೆಳ್ಳಗಿ, ತಿಪ್ಪಣ್ಣ ಶೆಳ್ಳಗಿ ವೇದಿಕೆ ಯಲ್ಲಿದ್ದರು.
ಶಂಕರ ಶಾಬಾದ್, ಮಲ್ಲು ಕಟ್ಟಿಮನಿ, ನಾಗಪ್ಪ ಕಟ್ಟಿಮನಿ, ಮರೆಪ್ಪ ಚಲುವಾದಿ, ದೇವಪ್ಪ ತಳವಾರ, ಪ್ರಕಾಶ ಕಟ್ಟಿಮನಿ, ಬಸವರಾಜ ಹೊಸ್ಮನಿ, ಯಲ್ಲಪ್ಪ ಕುರಿ, ಮಲ್ಲು ಹೊಸ್ಮನಿ, ಬಸವರಾಜ ಹೊಸ್ಮನಿ ಸೇರಿದಂತೆ ಅನೇಕರಿದ್ದರು. ಮಲ್ಲು ಕೆಸಿಪಿ ಪ್ರಾಸ್ತಾವಿಕ ಮಾತನಾಡಿದರು. ಚಂದ್ರಶೇಖರ ಸ್ವಾಗತಿಸಿದರು. ಅಂಬ್ರೇಶ್ ನಿರೂಪಿಸಿದರು. ತಮ್ಮಣ್ಣ ಕೆಸಿಪಿ ವಂದಿಸಿದರು.