Advertisement
ಆಳ್ವಾಸ್ ಪ್ರತಿಷ್ಠಾನದಿಂದ ಸೋಮವಾರ ಸಂಜೆ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಆಳ್ವಾಸ್ ವಿರಾಸತ್ ಸಾಂಸ್ಕೃತಿಕ ವೈಭವದಲ್ಲಿ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ 350 ವಿದ್ಯಾರ್ಥಿಗಳ ತಂಡ ಸುಮಾರು ಮೂರುವರೆ ಗಂಟೆಗಳ ಕಾಲ ವಿವಿಧ ನೃತ್ಯದ ಮೂಲಕ ನೆರೆದವರನ್ನು ಭಾವನಾಲೋಕಕ್ಕೆ ಕೊಂಡೊಯ್ಯದರು.
Related Articles
Advertisement
ಮನುಷ್ಯನ ತಲಾ ಆದಾಯದಿಂದ ದೇಶವೊಂದರ ಶ್ರೀಮಂತಿಕೆ ಅಳೆಯಬಾರದು, ಅಲ್ಲಿನ ಸಾಂಸ್ಕೃತಿ ಹಿತನದ ಆಧಾರದಲ್ಲಿ ಶ್ರೀಮಂತಿಕೆ ಗುರುತಿಸಬೇಕು. ಹಣದ ವ್ಯಾಮೋಹದೊಂದಿಗೆ ಸಾಂಸ್ಕೃತಿಕವಾಗಿ ವಿನಾಶದ ಅಂಚಿಗೆ ತಲುಪಿದ ರಾಷ್ಟ್ರಗಳಿಂದು ಅನೇಕ ಸಮಸ್ಯೆ ಎದುರಿಸುತ್ತಿದೆ ಎಂದರು.
ಡಾ.ಮೋಹನ್ ಆಳ್ವರು ದೇಶದ ಸಾಂಸ್ಕೃತಿಕ ವೈಭವನ್ನು ಉಳಿಸಿ, ಬೆಳೆಸುವ ಪ್ರಯತ್ನ ಮಾಡುತ್ತಿದ್ದಾರೆ. ಶಿಕ್ಷಣ ಸಂಸ್ಥೆಗಳು ವರ್ಷಕ್ಕೆ ಎರಡು ಕಾರ್ಯಕ್ರಮ ಮಾಡಿ ಸುಮ್ಮನಿರುವುದಲ್ಲ. ಬದಲಾಗಿ ಆಳ್ವಾಸ್ ಶಿಕ್ಷಣ ಸಂಸ್ಥೆಯನ್ನು ಮಾದರಿಯಾಗಿಟ್ಟುಕೊಂಡು ಸಂಸ್ಕೃತಿಕ ಚಟುವಟಿಕೆಗಳನ್ನು ವರ್ಷ ಪೂರ್ತಿ ಆಯೋಜಿಸುತ್ತಿರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಬೇಕು.
ಬೆಂಗಳೂರಿನ ಪ್ರತಿಯೊಬ್ಬರ ಬದುಕು ದ್ವೀಪದಂತಾಗಿದೆ. ಪಕ್ಕದ ಮನೆಯ ನಿಟ್ಟೂಸಿರು ಕೇಳದ ಕಿವುಡರಾಗಿಬಿಟ್ಟಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಅದ್ಭುತ ಪ್ರದರ್ಶನ ಕಾಲಬುಡದಲ್ಲೇ ನಡೆಯುತ್ತಿದ್ದರೂ, ಕೆಲಸದ ಒತ್ತಡ, ಟ್ರಾಫಿಕ್ ನೆಪಹೇಳಿ ಕಾರ್ಯಕ್ರಮಕ್ಕೆ ಬರುವುದಿಲ್ಲ.
ಪುಸ್ತಕ ಬಿಡುಗಡೆ, ನಾಟಕ ಮತ್ತು ಚಲನಚಿತ್ರಗಳು ಇದೇ ಸಮಸ್ಯೆ ಎದುರಿಸುತ್ತಿದೆ. ಮಾದಕ ನಟಿ ಬರುತ್ತಾಳೆಂದರೆ ಎಲ್ಲರೂ ಎಚ್ಚರಾಗುತ್ತಾರೆ. ಎಂಥ ದುರ್ಗತಿ ಬಂತು ಎಂದು ಕಳವಳ ವ್ಯಕ್ತಪಡಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವಾ ಮಾತನಾಡಿ, ಶಾಸ್ತ್ರೀಯ ಹಾಗೂ ಸಾಂಸ್ಕೃತಿಕ ಕಲಾ ಪ್ರಕಾರಗಳನ್ನು ಜನಸಾಮಾನ್ಯರಿಗೆ ತಿಳಿಸುವ ಪ್ರಯತ್ನವೇ ಆಳ್ವಾಸ್ ವಿರಾಸತ್.
ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯ ಹಾಗೂ ವಿದೇಶದಲ್ಲೂ ಸಾಂಸ್ಕೃತಿಕ ಪ್ರದರ್ಶನ ನೀಡಿದ್ದೇವೆ. ನಗರ ಪ್ರದೇಶದಲ್ಲಿ ಭಾಷೆ, ರಾಜಕೀಯ ಇತ್ಯಾದಿ ವಿಷಯಗಳಿಗೆ ಸೇರುವಷ್ಟು ಜನ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸೇರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಐಎಎಸ್ ಅಧಿಕಾರಿಗಳಾದ ರಜನೀಶ್ ಗೋಯಲ್, ಶಾಲಿನಿ ರಜನೀಶ್ ಮೊದಲಾದವರು ಉಪಸ್ಥಿತರಿದ್ದರು.